ವಿಧಾನಸೌಧದಲ್ಲಿ ಕೋಲಾಹಲ, ಕುಸಿದು ಬಿದ್ದ ಯತ್ನಾಳ್, ಸ್ಟ್ರೆಚರ್ನಲ್ಲಿ ಕೊಂಡೊಯ್ದ ಮಾರ್ಷಲ್ಗಳು | JANATA NEWS
ಬೆಂಗಳೂರು : ವಿಧಾನಸಭೆ ಕಲಾಪದ ವೇಳೆ ಬಿಜೆಪಿ ಶಾಸಕರನ್ನು ಸ್ಪೀಕರ್ ಯುಟಿ ಖಾದರ್ ಅವರು ಅಮಾನತುಗೊಳಿಸಿದರು. ವಿಧಾನಸೌಧದಲ್ಲಿ ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಸ್ವಸ್ಥಗೊಂಡು ಕುಸಿದು ಬಿದ್ದಿರುವ ಘಟನೆ ನಡೆಯಿತು.
ಪೀಠಕ್ಕೆ ಅಗೌರವ ತೋರಿಸಿದ ಹಿನ್ನೆಲೆಯಲ್ಲಿ ವಿಧಾನಸಭೆ ಅಧಿವೇಶನದಿಂದ 10 ಬಿಜೆಪಿ ಶಾಸಕರನ್ನು ಸ್ಪೀಕರ್ ಯು.ಟಿ.ಖಾದರ್ ಅಮಾನತು ಮಾಡಿ ಆದೇಶಿಸಿದ್ದಾರೆ. ಅಮಾನತುಗೊಂಡವರನ್ನು ಸದನದಿಂದ ಹೊರ ಹಾಕಲು ಮಾರ್ಷಲ್ಗಳು ಒಳಬಂದರೆ, ಅಮಾನತಾಗಿರುವ ಶಾಸಕರ ರಕ್ಷಣೆಗೆ ಬಿಜೆಪಿಯ ಇತರ ಶಾಸಕರು ಮುಂದಾದರು.
ಈ ವೇಳೆ ಭಾರಿ ಗದ್ದಲ ಸೃಷ್ಟಿಯಾಯಿತು. ಈ ಎಲ್ಲ ಬೆಳವಣಿಗೆಗಳ ಸಂದರ್ಭ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಸ್ವಸ್ಥಗೊಂಡು ವಿಧಾನಸೌಧದ ಕಾರಿಡಾರ್‌ನಲ್ಲೇ ಸುಸ್ತಾಗಿ ಕುಸಿದುಬಿದ್ದರು.
ಬಿಪಿ ಹೆಚ್ಚಾಗಿ ಅವರು ಅಸ್ವಸ್ಥಗೊಂಡರು ಎನ್ನಲಾಗಿದೆ. ಬಿಜೆಪಿಯ ಇತರ ಶಾಸಕರು ಗಾಳಿ ಬೀಸಿ ಯತ್ನಾಳ್ ಅವರನ್ನು ಚೇತರಿಸುವಂತೆ ಮಾಡಲು ಯತ್ನಿಸಿದರು. ನಂತರ ವಿಧಾನಸೌಧದಲ್ಲೇ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದರು. ಬಳಿಕ ಅವರನ್ನು ಆಂಬುಲೆನ್ಸ್ನಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.