ಹೆತ್ತ ತಂದೆಯನ್ನೇ ಕೊಲೆಗೈದು ಹೆದ್ದಾರಿ ಪಕ್ಕದಲ್ಲೇ ಹೂತಿಟ್ಟ ಮಗ | JANATA NEWS
ರಾಯಚೂರು : ಮಗ ತಂದೆಯನ್ನೇ ಕೊಂದು ಹೆದ್ದಾರಿ ಪಕ್ಕದಲ್ಲಿ ಹೂತಿಟ್ಟ ಘಟನೆ ರಾಯಚೂರು ತಾಲೂಕಿನ ವಡ್ಲೂರು ಗ್ರಾಮದಳ್ಳಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ವಡ್ಲೂರು ಗ್ರಾಮದ ಶಿವನಪ್ಪ (65) ಮೃತ ವ್ಯಕ್ತಿ. ಈರಣ್ಣ (35) ಕೊಲೆಗೈದ ವ್ಯಕ್ತಿ.
ಹೆದ್ದಾರಿ ನಿರ್ಮಾಣಕ್ಕೆ ಶಿವನಪ್ಪ ಅವರ ಜಮೀನನ್ನು ಸರ್ಕಾರ ಪಡೆದಿತ್ತು. ಇದರಿಂದ ಪರಿಹಾರದ ಹಣ ಬಂದಿತ್ತು. ಇದನ್ನು ಕಂಡ ಮಗ ತಂದೆಯಲ್ಲಿ ಹಣ ಕೊಡುವಂತೆ ಕೇಳಿದ್ದಾನೆ, ಇದಕ್ಕೆ ತಂದೆ ನಿರಾಕರಿಸಿದ್ದಾರೆ. ಅದರಂತೆ ಕೋಪಗೊಂಡ ಮಗ ಕಳೆದ ಜುಲೈ 7ನೇ ತಾರೀಖಿನಂದು ತಂದೆಯನ್ನು ಕೊಲೆಗೈದಿದ್ದಾನೆ ಬಳಿಕ ತಂದೆಯ ದೇಹವನ್ನು ನಿರ್ಮಾಣ ಹಂತದಲ್ಲಿರುವ ಹೆದ್ದಾರಿ ಬಳಿ ಹೂತಿಟ್ಟಿದ್ದಾನೆ.
ತಂದೆಯ ಶವವನ್ನು ತಾನೇ ಹೂತಿಟ್ಟು ತಂದೆ ಕಾಣೆಯಾಗಿದ್ದಾರೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದ. ಬಳಿಕ ಗ್ರಾಮಸ್ಥರು ಹಾಗೂ ಸಂಬಂಧಿಕರು ಅನುಮಾನಗೊಂಡು ಮಗನ ವಿಚಾರಣೆ ಮಾಡಿದ್ದಾರೆ.
ಘಟನೆ ಹಿನ್ನೆಲೆ ಅನುಮಾನದ ಮೇಲೆ ದೂರು ಕೊಡುವುದಾಗಿ ಹೇಳಿದ್ದಾರೆ. ಬಳಿಕ ಗ್ರಾಮೀಣ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.