ನಾವು ವಿರೋಧ ಪಕ್ಷದಲ್ಲಿದ್ದಾಗ ಸರ್ಕಾರ ಬೀಳಿಸಲು ಹೊರ ದೇಶಗಳ ನೆರವು ಪಡೆದಿಲ್ಲ | JANATA NEWS
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು 'ಇಂಡಿಯಾ' ಮೈತ್ರಿಯನ್ನು "ಮಜ್ಬೂರಿ ಕಿ ದೋಸ್ತಿ" (ಬಲವಂತದ ಸ್ನೇಹ) ಎಂದು ಕರೆದಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ತನ್ನ 37 ಮಿತ್ರಪಕ್ಷಗಳೊಂದಿಗೆ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ನೇಷನಲ್ ಡೆಮೋಕ್ರೆಟಿಕ್ ಆಲಾಯನ್ಸ್)ದ ಸಭೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಹೇಳಿಕೆಗಳನ್ನು ನೀಡಿದ್ದಾರೆ.
ವಿವಿಧ ರಾಜ್ಯಗಳಲ್ಲಿ ಪಕ್ಷಗಳ ನಡುವಿನ ಉದಾಸೀನತೆಯ ಉದಾಹರಣೆಗಳನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, "ದೇಶದ ಜನರು ಇದು ಮಿಷನ್ ಅಲ್ಲ ಆದರೆ ಮಜಬೂರಿಯಾ(ಬಲವಂತಗಳು) ಎಂದು ಹೇಳುತ್ತಿದ್ದಾರೆ" ಎಂದು ಹೇಳಿದರು.
ಎನ್‌ಡಿಎ ಮೈತ್ರಿಕೂಟಕ್ಕೆ ದೇಶ ಮೊದಲು, ದೇಶದ ಭದ್ರತೆ ಮೊದಲು, ಅಭಿವೃದ್ಧಿ ಮತ್ತು ಜನರ ಸಬಲೀಕರಣಕ್ಕೆ ಆದ್ಯತೆ ನೀಡಲಾಗಿದೆ. ಆದರೆ ಮಹಾಮೈತ್ರಿಕೂಟದ ಉದ್ದೇಶ ಮೋದಿಯನ್ನು ಸೋಲಿಸುವುದೇ ಹೊರತು ದೇಶದ ಜನತೆಗೆ ಒಳಿತು ಮಾಡುವುದಲ್ಲ, ಮಹಾಮೈತ್ರಿಯನ್ನು ಕಾಂಗ್ರೆಸ್ ದುರುಪಯೋಗಪಡಿಸಿಕೊಂಡಿದೆ ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ.
ಬಡತನ ನಿರ್ಮೂಲನೆಯೇ ಎನ್‌ಡಿಎ ಗುರಿ, ಈ ಹಿಂದೆ ಬಡವರನ್ನು ಬಡವರಾಗಿಯೇ ಇರಿಸುವ ಷಡ್ಯಂತ್ರ ನಡೆದಿತ್ತು, ಆ ಷಡ್ಯಂತ್ರವನ್ನು ಎನ್‌ಡಿಎ ಸರ್ಕಾರ ಛಿದ್ರಗೊಳಿಸಿದೆ.
ಯಾರನ್ನೋ ಅಧಿಕಾರದಿಂದ ಕೆಳಗಿಳಿಸಲು ಎನ್‌ಡಿಎ ಅಸ್ತಿತ್ವಕ್ಕೆ ಬಂದಿಲ್ಲ. ಸ್ಥಿರ ಸರ್ಕಾರ ನೀಡಲು ಎನ್‌ಡಿಎ ರಚನೆಯಾಗಿದೆ. ಈ ಹಿಂದೆ ನಾವು ವಿರೋಧ ಪಕ್ಷದಲ್ಲಿದ್ದಾಗ ಸರ್ಕಾರವನ್ನು ವಿರೋಧಿಸಿಲ್ಲ, ಸರ್ಕಾರ ಬೀಳಿಸಲು ಹೊರ ದೇಶಗಳ ನೆರವು ಪಡೆದಿಲ್ಲ ಎಂದು ಮೋದಿ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು.