ಬ್ರ್ಯಾಂಡ್ ಬೆಂಗಳೂರು ಯೋಜನೆ : ಜನಹಿತ/ಆಕರ್ಷಕ ಬೆಂಗಳೂರು ವಿಷಯಕ್ಕೆ ಪ್ರತ್ಯೇಕ ಸಮಿತಿ ರಚನೆ | JANATA NEWS
ಬೆಂಗಳೂರು : ಬಿಬಿಎಂಪಿ ವಿಶೇಷ ಆಯುಕ್ತರ(ಹಣಕಾಸು) ನೇತೃತ್ವದಲ್ಲಿ ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ರಚಿಸಿರುವ ಜನಹಿತ/ಆಕರ್ಷಕ ಬೆಂಗಳೂರು ವಿಷಯಕ್ಕೆ ಪ್ರತ್ಯೇಕ ಸಮಿತಿ ರಚನೆ ಮಾಡಲಾಗಿದೆ.
ಕರ್ನಾಟಕ ಸರ್ಕಾರವು ಬ್ರಾಂಡ್ ಬೆಂಗಳೂರು ಅಭಿಯಾನವನ್ನು ಪ್ರಾರಂಭಿಸಿದ್ದು, ಇದರಲ್ಲಿ ಉತ್ತಮ ಆಡಳಿತ, ನಾಗರಿಕ ಕೇಂದ್ರಿತ ನೀತಿ ಮತ್ತು ಸೇವಾ ವಿತರಣೆ, ಭೂ-ಪ್ರಾದೇಶಿಕ ಯೋಜನೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಸಂಪನ್ಮೂಲ ಹಂಚಿಕೆಯ ದೃಷ್ಟಿಯಿಂದ ಗಮನಹರಿಸಬೇಕಾದ 7 ವಿಷಯಗಳನ್ನು ಗುರುತಿಸಲಾಗಿದೆ.
ಈ ಉಪಕ್ರಮದ ಭಾಗವಾಗಿ, “ಜನಹಿತ/ಆಕರ್ಷಕ ಬೆಂಗಳೂರು(Vibrant Bengaluru)” ವಿಷಯಕ್ಕೆ ವಿಶೇಷ ಆಯುಕ್ತ(ಹಣಕಾಸು) ಹಾಗೂ ದಕ್ಷಿಣ ವಲಯ ಆಯುಕ್ತರಾದ ಜಯರಾಮ್ ರಾಯಪುರ ರವರನ್ನು ನೋಡಲ್ ಅಧಿಕಾರಿಯನ್ನಾಗಿ ಮಾಡಿದೆ ಮತ್ತು ಸೃಷ್ಟಿ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಅಂಡ್ ಟೆಕ್ನಾಲಜಿ, ಬೆಂಗಳೂರಿನ ಶೈಕ್ಷಣಿಕ ಸಂಸ್ಥೆಯನ್ನು ಪಾಲುದಾರರಾಗಿ ಮಾಡಿದೆ.
ಜನಹಿತ/ಆಕರ್ಷಕ ಬೆಂಗಳೂರು ಅನ್ನು ಸರಿಯಾದ ಅನುಕ್ರಮದಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ನೋಡಲ್ ಅಧಿಕಾರಿಯ ಅಡಿ ಒಂದು ಸಮಿತಿಯನ್ನು ರಚಿಸಿಕೊಳ್ಳಲಾಗಿದೆ ಎಂದು ಜನಹಿತ/ಆಕರ್ಷಕ ಬೆಂಗಳೂರಿನ ನೋಡಲ್ ಅಧಿಕಾರಿ, ವಿಶೇಷ ಆಯುಕ್ತ(ಹಣಕಾಸು) ಹಾಗೂ ದಕ್ಷಿಣ ವಲಯ ಆಯುಕ್ತರಾದ ಜಯರಾಮ್ ರಾಯಪುರ ರವರು ತಿಳಿಸಿರುತ್ತಾರೆ.