Wed,Feb04,2026
ಕನ್ನಡ / English

ಆಪಾಧಿತರನ್ನು ಬೆನ್ನು ಹತ್ತುವ ಬದಲು, ಟ್ವೀಟ್ ಮಾಡಿದವರನ್ನು ವಿಚಾರಣೆಗೆ ಒಳಪಡಿಸಿರುವುದು ಸರ್ಕಾರ ಹೇಗೆ ನಡೆದುಕೊಳ್ಳುತ್ತಿದೆ ಎನ್ನುವುದಕ್ಕೆ ಸಾಕ್ಷಿ | JANATA NEWS

26 Jul 2023

ಚಿಕ್ಕಮಗಳೂರು : ಉಡುಪಿ ಕಾಲೇಜ್ ನಲ್ಲಿ ವಿಡಿಯೋ ಪ್ರಕರಣದಲ್ಲಿ ಪೊಲೀಸರು ತಡವಾಗಿ ಎಫ್ ಐ ಆರ್ ದಾಖಲಿಸಿದ್ದಾರೆ. ದೂರು ನೀಡಿದ ತಕ್ಷಣವೇ ಎಫ್ ಐ ಆರ್ ದಾಖಲಿಸಬೇಕಾಗಿತ್ತು. ವಿಳಂಬ ನೀತಿ ಸರಿಯಲ್ಲ.

ಆಪಾಧಿತರನ್ನು ಬೆನ್ನು ಹತ್ತುವ ಬದಲು ಆಪಾಧಿತರ ಬಗ್ಗೆ ಟ್ವೀಟ್ ಮಾಡಿದವರನ್ನು ಬೆನ್ನು ಹತ್ತಿರುವುದು ಸರ್ಕಾರ ಹೇಗೆ ನಡೆದುಕೊಳ್ಳುತ್ತಿದೆ ಎನ್ನುವುದಕ್ಕೆ ನಿದರ್ಶನವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು ಈ ಬಗ್ಗೆ ಸಮಗ್ರ ತನಿಖೆ ಆಗಲಿ, ಆರೋಪ ಸತ್ಯವಾಗಿದ್ದಲ್ಲಿ ಅಪಾಯಕಾರಿಯಾದದ್ದು, ಅವರ ಜಾಲ ಎಲ್ಲೆಲ್ಲಿ ಕೆಲಸ ಮಾಡುತ್ತಿದೆ ಎನ್ನುವ ಬಗ್ಗೆ ಪಾರದರ್ಶಕ ತನಿಖೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಉಗ್ರ, ಸಮಾಜ ಘಾತುಕ, ಕಾನೂನು ಬಾಹಿರ ಘಟನೆಗಳಲ್ಲಿ ಭಾಗಿ ಆದವರನ್ನ ಅಮಾಯಕರು ಎಂದು ಪರಿಗಣಿಸಿ ಅವರನ್ನು ಕೇಸ್ನಿಂದ ಕೈಬಿಡಲು ಹೊರಟಿರುವುದು ರಾಜ್ಯದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವುದಷ್ಟೇ ಅಲ್ಲ, ದೇಶದ ಸಮಗ್ರತೆಗೂ ಅಪಾಯಕಾರಿ ಎಂದು ಸಿ.ಟಿ.ರವಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಕೆಜೆಹಳ್ಳಿ, ಡಿಜೆಹಳ್ಳಿ ಪ್ರಕರಣದ ಆರೋಪಿಗಳ ವಿರುದ್ಧದ ಪ್ರಕರಣ ಕೈಬಿಡುವಂತೆ ಶಾಸಕ ತನ್ವೀರ್ ಶೇಠ್ ಸರ್ಕಾರಕ್ಕೆ ಪತ್ರ ಬರೆದಿರುವ ಕುರಿತು ಪ್ರತಿಕ್ರಿಯಿಸಿರುವ ಅವರು, ಡಿಜೆಹಳ್ಳಿ, ಕೆಜಿಹಳ್ಳಿ ಪ್ರಕರಣದಲ್ಲಿ ಇಡೀ ಊರಿಗೆ ಬೆಂಕಿ ಹಾಕಿ 250 ಕ್ಕೂ ಹೆಚ್ಚು ವಾಹನಗಳನ್ನು ಸುಟ್ಟು ಹಾಕಿ, ಪೊಲೀಸ್ ಠಾಣೆಯನ್ನು ಧ್ವಂಸ ಮಾಡಿ ರಾಜ್ಯ ಇತಿಹಾದಲ್ಲೇ ಭೀಕರ ಘಟನೆ ನಡೆಸಿದ್ದಾರೆ. ಒಳ್ಳೆಯರು ಯಾರು, ಕೆಟ್ಟವರು ಯಾರು ಎಂಬುದು ತಿಳಿದುಕೊಳ್ಳದಿದ್ದರೆ ರಾಜ್ಯದ ಪರಿಸ್ಥಿತಿ ಏನಾಗಬಹುದು ಎಂದು ಪ್ರಶ್ನಿಸಿದರು.

RELATED TOPICS:
English summary :The fact that the person who posted this tweet was prosecuted instead of going after the accused is a testimony to how the government is acting.

ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್, ಭಾರತೀಯ ಸರಕುಗಳ ಮೇಲಿನ ಸುಂಕ ಕಡಿತ ಘೋಷಣೆ

ಸರ್ಕಾರಿ ಸಂಸ್ಥೆಗಳಿಗೆ ನೆಹರು-ಗಾಂಧಿ ಕುಟುಂಬದ ಹೆಸರಿಡುವ ವಿಚಾರವಾಗಿ ವಿಧಾನಸಭೆಯಲ್ಲಿ ಗದ್ದಲ

ಭದ್ರತಾ ಪಡೆಗಳು ಕಾರ್ಯಾಚರಣೆ ಹೆಚ್ಚಿಸಿದ ನಂತರವೂ ಬಲೂಚಿಸ್ತಾನದಲ್ಲಿ ಪಾಕ್ ಸೇನೆಯ ಹಿನ್ನಡೆ ಮುಂದುವರೆದಿದೆ

 ಹಣಕ್ಕಾಗಿ ಭಿಕ್ಷೆ ಬೇಡಲು ನಮಗೆ ನಾಚಿಕೆಯಾಗುತ್ತಿದೆ - ಆರ್ಥಿಕ ಸಂಕಷ್ಟ ಒಪ್ಪಿಕೊಂಡ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್

ಮೈಸೂರಿನಲ್ಲಿ ರಹಸ್ಯ ಡ್ರಗ್ಸ್ ಪ್ರಯೋಗಾಲಯ ಬಯಲು :ಪ್ರಮುಖ ಅಂತರರಾಜ್ಯ ಮಾದಕ ವಸ್ತುಗಳ ಸಿಂಡಿಕೇಟ್ ಮೇಲೆ ಎನ್‌ಸಿಬಿ ದಾಳಿ

ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿಜೆ ರಾಯ್ ಶವವಾಗಿ ಪತ್ತೆಯಾಗಿದ್ದಾರೆ : ಆತ್ಮಹತ್ಯೆ ಶಂಕೆ

ಟಿಎಂಸಿ ಸರ್ಕಾರಕ್ಕೆ ಭಾರಿ ಹಿನ್ನಡೆ : ಗಡಿ ಭೂಮಿ ಬಿಎಸ್‌ಎಫ್‌ಗೆ ಹಸ್ತಾಂತರಿಸುವಂತೆ ಪ.ಬಂ.ಸರ್ಕಾರಕ್ಕೆ ಕಲ್ಕತ್ತಾ ಹೈಕೋರ್ಟ್ ಆದೇಶ

ಹೊಸ ಯುಜಿಸಿ ಸಮಾನತೆ ನಿಯಮಗಳಿಗೆ ಸುಪ್ರೀಂ ಕೋರ್ಟ್ ವಿರಾಮ: ಏನು ಮತ್ತು ಹೇಗೆ?

ಖಾಸಗಿ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ನಿಧನ: ದೇಶಾದ್ಯಂತ ಶೋಕ

ರಾಜ್ಯದಲ್ಲಿ ಮತ್ತೊಂದು ಸ್ಲೀಪರ್ ನೈಟ್ ಬಸ್ ಬೆಂಕಿಗೆ ಆಹುತಿ

ಜಗತ್ತಿನ ಎಲ್ಲಾ ಒಪ್ಪಂದಗಳ ತಾಯಿ : ಭಾರತ-ಇಯು ವ್ಯಾಪಾರ ಒಪ್ಪಂದವು ಕಾರ್ಯತಂತ್ರದ ಸಹಭಾಗಿತ್ವದಲ್ಲಿ ಪ್ರಮುಖ ಹೆಜ್ಜೆ

ನ್ಯೂಸ್ MORE NEWS...