ಒಂದು ಕೋಮಿನ ಕಮ್ಯುನಲ್ ಅಪರಾಧಿಗಳಿಗೆ ಕ್ಲೀನ್ ಚಿಟ್ : ಗೃಹ ಸಚಿವರ ಆದೇಶಕ್ಕೆ ಬಿಜೆಪಿ ಆಕ್ರೋಶ | JANATA NEWS
ಬೆಂಗಳೂರು : ಒಂದು ಕೋಮಿನ ಕಮ್ಯುನಲ್ ಅಪರಾಧಿಗಳಿಗೆ ನಮ್ಮಲ್ಲಿ ಕ್ಲೀನ್ ಚಿಟ್ ನೀಡಲಾಗುವುದು ಎಂದು ಬೋರ್ಡ್ ಹಾಕಿಕೊಂಡು ಡಾ.ಜಿ.ಪರಮೇಶ್ವರ ರವರು ಕಾರ್ಯನಿರ್ವಹಿಸುತ್ತಿರುವಂತಿದೆ!, ಎಂದು ಗೃಹ ಸಚಿವರ ಆದೇಶ ಪತ್ರದ ಫೋಟೋದೊಂದಿಗೆ ರಾಜ್ಯ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಬೆಂಗಳೂರು ನಗರದ ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ, ಶಿವಮೊಗ್ಗ, ಹುಬ್ಬಳ್ಳಿ, ಮತ್ತು ಇತರೆ ಕಡೆಗಳಲ್ಲಿ ನಡೆದ ಪ್ರತಿಭಟನೆ ಹಾಗೂ ಗಲಭೆಗಳಲ್ಲಿ ಅಮಾಯಕ ಯುವಕರು ಮತ್ತು ವಿದ್ಯಾರ್ಥಿಗಳು ಸುಳ್ಳು ಮೊಕದ್ದಮೆಗಳಲ್ಲಿ ಬಂಧಿತರಾಗಿದ್ದು, ಸದರಿ ಮೊಕದ್ದಮೆಗಳನ್ನು ಮರು ಪರಿಶೀಲಿಸಿ, ನಿಯಮನುಸಾರ ಹಿಂಪಡೆಯಲು ಕ್ರಮಕೈಗೊಳ್ಳುವಂತೆ ಮಾಜಿ ಸಚಿವ ಹಾಗೂ ಶಾಸಕ ತನ್ವೀರ್ ಸೇಠ್ ಅವರ ಮನವಿಗೆ ಸ್ಪಂದಿಸಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರ ಆದೇಶ ಪತ್ರದ ಪ್ರತಿಯನ್ನು ಲಗತ್ತಿಸಿರುವ ವಿರೋಧಪಕ್ಷ ಬಿಜೆಪಿ ಟ್ವೀಟ್ ಮಾಡಿದ್ದು, ಪ್ರತಿಭಟನೆಯ ಎಚ್ಚರಿಕೆ ನೀಡಿದೆ.
ರಾಜ್ಯ ಬಿಜೆಪಿ ಅಧಿಕೃತ ಟ್ವಿಟ್ಟರ್ ಖಾತೆಯಿಂದ ರಾಜ್ಯದ ಗೃಹ ಸಚಿವರ ಆದೇಶವನ್ನು ಲೇವಡಿ ಮಾಡಿದ್ದು, ‘ಒಂದು’ ಕೋಮಿನ ಕಮ್ಯುನಲ್ ಅಪರಾಧಿಗಳಿಗೆ ನಮ್ಮಲ್ಲಿ ಕ್ಲೀನ್ ಚಿಟ್ ನೀಡಲಾಗುವುದು ಎಂದು ಬೋರ್ಡ್ ಹಾಕಿಕೊಂಡು ಡಾ. ಪರಮೇಶ್ವರ ರವರು ಕಾರ್ಯನಿರ್ವಹಿಸುತ್ತಿರುವಂತಿದೆ! ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಬೇರೊಂದಿದೆಯೇ? ಈ ಸರಕಾರ ಜಿಹಾದಿಗಳ, ಪಿಎಫ್ಐ ಭಯೋತ್ಪಾದಕರ ತಾಳಕ್ಕೆ ಕುಣಿಯುತ್ತಿರುವುದು ಈ ಪತ್ರ ಋುಜುವಾತು ಪಡಿಸುತ್ತಿದೆ. ಜಿಹಾದಿ ಸರ್ಕಾರ(#JihadiSarkara)ದ ಎಲ್ಲಾ ಬಗೆಯ ಹಿಂದೂವಿರೋಧಿ ನೀತಿ-ನಿಲುವುಗಳ ವಿರುದ್ಧ ಬಿಜೆಪಿ ಹೋರಾಟ ಮುಂದುವರೆಸಲಿದೆ., ಎಂದು ಟ್ವೀಟ್ ಮಾಡಿದೆ.
‘ಒಂದು’ ಕೋಮಿನ ಕಮ್ಯುನಲ್ ಅಪರಾಧಿಗಳಿಗೆ ನಮ್ಮಲ್ಲಿ ಕ್ಲೀನ್ ಚಿಟ್ ನೀಡಲಾಗುವುದು ಎಂದು ಬೋರ್ಡ್ ಹಾಕಿಕೊಂಡು @DrParameshwara ರವರು ಕಾರ್ಯನಿರ್ವಹಿಸುತ್ತಿರುವಂತಿದೆ!
— BJP Karnataka (@BJP4Karnataka) July 26, 2023
ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಬೇರೊಂದಿದೆಯೇ?
ಈ ಸರಕಾರ ಜಿಹಾದಿಗಳ, ಪಿಎಫ್ಐ ಭಯೋತ್ಪಾದಕರ ತಾಳಕ್ಕೆ ಕುಣಿಯುತ್ತಿರುವುದು ಈ ಪತ್ರ ಋುಜುವಾತು ಪಡಿಸುತ್ತಿದೆ.… pic.twitter.com/FVjeoIbMys