ಚಾಕುವಿನಿಂದ 3 ಬಾರಿ ಚಾಕು ಇರಿದು, ಎಸ್ಕೇಪ್ ಆದ ದುಷ್ಕರ್ಮಿಗಳು! | JANATA NEWS

ಹಾವೇರಿ: : ಎಸ್ಬಿಐ ನಿವೃತ್ತ ಮ್ಯಾನೇಜರ್ ನಗರದ ಜಿಲ್ಲಾಡಳಿತ ಕಚೇರಿಗೆ ತೆರಳುವ ರಸ್ತೆಯ ದೇವಗಿರಿ-ಯಲ್ಲಾಪುರ ಬಳಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ವ್ಯಕ್ತಿಯೊರ್ವನಿಗೆ ಚೂರಿ ಇರಿದ ಘಟನೆ ನಡೆದಿದೆ.
ಬಸವೇಶ್ವರನಗರದಲ್ಲಿ ವಾಸಿಸುತ್ತಿದ್ದ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಜಯರಾಂ ಕೊಲ್ಲಾಪುರ ಅವರು ಬೈಕ್‌ನಲ್ಲಿ ಪುತ್ರನೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ್ದರು. ಈ ವೇಳೆ ಎರಡು ಬೈಕ್ಗಳಲ್ಲಿ ಬಂದಿದ್ದ ನಾಲ್ವರು ಅಪರಿಚಿತರು, ಅಡ್ಡಗಟ್ಟಿ ಜಯರಾಂ ಕೊಲ್ಲಾಪುರಗೆ 3 ಬಾರಿ ಚಾಕು ಇರಿದು, ಎಸ್ಕೇಪ್ ಆಗಿದ್ದಾರೆ.
ತೀವ್ರವಾಗಿ ಗಾಯಗೊಂಡ ಜಯರಾಮ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ಕುರಿತು ಹಾವೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.