Thu,Feb29,2024
ಕನ್ನಡ / English

ರಾತ್ರಿ ನಾಪತ್ತೆಯಾದ ಯುವತಿ ಮುಂಜಾನೆ ಶವವಾಗಿ ಪತ್ತೆ! | JANATA NEWS

12 Aug 2023
1068

ಬೆಂಗಳೂರು : ರಾತ್ರಿ ನಾಪತ್ತೆಯಾಗಿದ್ದ ಯುವತಿಯೊಬ್ಬಳು ಮುಂಜಾನೆ ಮನೆಯ ಹೊರ ಆವರಣದಲ್ಲೇ ಶವವಾಗಿ ಪತ್ತೆಯಾಗಿರುವ ಘಟನೆ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.

ಮಹೇಶ್ವರಿ ನಗರ ನಿವಾಸಿ ಮಹಾನಂದಾ (21) ಮೃತಪಟ್ಟ ಯುವತಿಯಾಗಿದ್ದಾರೆ. ಯುವತಿಯ ಮೃತದೇಹ ಆಕೆ ವಾಸವಿದ್ದ ಮನೆಯ ಮುಂದೆಯೇ ಪತ್ತೆಯಾಗಿತ್ತು. ಮಹಾನಂದಾಳ ಅಕ್ಕ ಬೆಳಗ್ಗೆ ಎದ್ದು ನೋಡಿದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು.

ಮೃತ ಯುವತಿ ಹಾಗೂ ಆಕೆಯ ಅಕ್ಕ ಕಳೆದ 3 ಮೂರು ವರ್ಷಗಳಿಂದ ಮಹದೇವಪುರದ ಮಹೇಶ್ವರಿ ನಗರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು, ಇಲ್ಲಿನ ಖಾಸಗಿ ಪೆಟ್ರೋಲ್ ಬಂಕ್ ನಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದರು. ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಮಹಾನಂದಾ ನಾಪತ್ತೆಯಾದ್ದಳು. ಈ ಸಂಬಂಧ ಯುವತಿಯ ಸಹೋದರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪಕ್ಕದ ಮನೆಯಲ್ಲಿ ವಾಸ ಮಾಡುತ್ತಿದ್ದ ಒಡಿಶಾ ಮೂಲದ ಕೃಷ್ಣ ಚಂದ ಸೇಟಿ ಕೊಲೆಯಾಗಿದೆ ಎಂಬುದು ಬಯಲಾಗಿದೆ.

ಒಡಿಶಾ ಮೂಲದ ಕೃಷ್ಣ ಚಂದ ಸೇಟಿ ನಗರದ ಟೆಕ್ ಪಾರ್ಕ್​ವೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಗುರುವಾರ ರಾತ್ರಿ ಅಡುಗೆ ಮನೆಯಲ್ಲಿ ಅನ್ನ ಮಾಡಲು ಪಾತ್ರೆ ಇಟ್ಟಿದ್ದ ಯುವತಿ ಮನೆಯಿಂದ ಹೊರಗೆ ಬಂದಿದ್ದಾಳೆ. ಈ ವೇಳೆ ಕೃಷ್ಣ ಚಂದ್​ನ ಮನೆಯ ಬಾಗಿಲಿನ ಬಳಿ ಯುವತಿ ಬಂದಾಗ ಅರೋಪಿಯು ಆಕೆಯನ್ನು ಒಳಗಡೆ ಎಳೆದುಕೊಂಡಿದ್ದಾನೆ. ಬಳಿಕ ಆಕೆಯ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿ, ಬಲವಂತವಾಗಿ ಚುಂಬಿಸಲು ಮುಂದಾಗಿದ್ದಾನೆ, ಬಳಿಕ ಯುವತಿ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ್ದಾನೆ.

ಅದಕ್ಕೆ ನಿರಾಕರಿಸಿ, ಮಹಾನಂದಾ ಕಿರುಚಾಡಲು ಯತ್ನಿಸಿದ್ದಾಳೆ. ಇದರಿಂದ ಎಲ್ಲರಿಗೂ ಗೊತ್ತಾಗಿ ಬಿಡುತ್ತದೆ ಎಂದು ಹೆದರಿದ ಆರೋಪಿ, ಮಹಾನಂದಾಳನ್ನು ಹಿಂಬದಿಯಿಂದ ತಬ್ಬಿ, ಆಕೆಯ ಮೂಗು ಮತ್ತು ಬಾಯಿಯನ್ನು ಒಂದು ಕೈನಲ್ಲಿ ಮುಚ್ಚಿ, ಮತ್ತೊಂದು ಕೈನಿಂದ ಕುತ್ತಿಗೆ ಹಿಸುಕಿದ್ದಾನೆ. ಈ ವೇಳೆ ಕಿರುಚಾಡಲು ಸಾಧ್ಯವಾಗದೆ ಮಹಾನಂದಾ ಉಸಿರುಗಟ್ಟಿ ಮೃತಪಟ್ಟಿದ್ದಾಳೆ.

ಕೊಲೆ ಬಳಿಕ ಬೆಡ್​ಶೀಟ್​ನಲ್ಲಿ ಮಹಾನಂದಾಳ ಮೃತದೇಹವನ್ನು ಸುತ್ತಿ, ಮನೆಯ ಮೂಲೆಯೊಂದರಲ್ಲಿ ಇಟ್ಟಿದ್ದ. ಹನ್ನೆರಡು ಗಂಟೆ ಸುಮಾರಿಗೆ ಆರೋಪಿಯ ಪತ್ನಿ ಮನೆಗೆ ಬಂದಿದ್ದಾರೆ. ತಾನೂ ಏನು ಮಾಡೇ ಇಲ್ಲ ಎನ್ನುವಂತೆ ನಟಿಸಿದ ಆರೋಪಿ, ಬೆಳಗಿನ ಜಾವ ಮನೆಯೊಳಗಿದ್ದ ಶವವನ್ನು ತಂದು ಮೃತಳ ಮನೆ ಮುಂದೆ ಹಾಕಿದ್ದಾನೆ.

ತನಿಖೆಯಲ್ಲಿ ಆರೋಪಿ ಕೃಷ್ಣ ಸಿಕ್ಕಿಬಿದ್ದಿದ್ದು, ಆತನನ್ನ ಬಂಧಿಸಿರುವ ಮಹದೇವಪುರ ಠಾಣಾ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

English summary :The young woman who disappeared at night was found dead early in the morning!

ಪಾಕಿಸ್ತಾನ ಪರ ಜಯಘೋಷ : ವಿಧಾನಸಭೆಯಲ್ಲಿ  ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ
ಪಾಕಿಸ್ತಾನ ಪರ ಜಯಘೋಷ : ವಿಧಾನಸಭೆಯಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ
ಕಾಂಗ್ರೆಸ್ ಪಕ್ಷದ ನೂತನ ಸಂಸದರ ಬೆಂಬಲಿಗರಿಂದ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ದೇಶದ್ರೋಹಿ ಘೋಷಣೆ
ಕಾಂಗ್ರೆಸ್ ಪಕ್ಷದ ನೂತನ ಸಂಸದರ ಬೆಂಬಲಿಗರಿಂದ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ದೇಶದ್ರೋಹಿ ಘೋಷಣೆ
ಎಸ್.ಟಿ.ಸೋಮಶೇಖರ್ ಅಡ್ಡ ಮತದಾನ : ರಾಜ್ಯ ಬಿಜೆಪಿ ನಾಯಕರ ಚುನಾವಣಾ ತಂತ್ರಕ್ಕೆ ದೊಡ್ಡ ಹಿನ್ನಡೆ
ಎಸ್.ಟಿ.ಸೋಮಶೇಖರ್ ಅಡ್ಡ ಮತದಾನ : ರಾಜ್ಯ ಬಿಜೆಪಿ ನಾಯಕರ ಚುನಾವಣಾ ತಂತ್ರಕ್ಕೆ ದೊಡ್ಡ ಹಿನ್ನಡೆ
ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಭಾರೀ ಮುಖಭಂಗ : ಹಿಂದೂ ದೇವಾಲಯ ತೆರಿಗೆ ಮಸೂದೆ ವಿಧಾನ ಪರಿಷತ್ ನಲ್ಲಿ ತಿರಸ್ಕೃತ
ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಭಾರೀ ಮುಖಭಂಗ : ಹಿಂದೂ ದೇವಾಲಯ ತೆರಿಗೆ ಮಸೂದೆ ವಿಧಾನ ಪರಿಷತ್ ನಲ್ಲಿ ತಿರಸ್ಕೃತ
ಘಜ್ವಾ-ಎ-ಹಿಂದ್ ಫತ್ವಾವನ್ನು ಹೊರಡಿಸಿದ ದಾರುಲ್ ಉಲೂಮ್ ದಿಯೋಬಂದ್ ವಿರುದ್ಧ ಕ್ರಮಕ್ಕೆ ಎನ್‌ಸಿಪಿಸಿಆರ್ ನಿರ್ದೇಶನ
ಘಜ್ವಾ-ಎ-ಹಿಂದ್ ಫತ್ವಾವನ್ನು ಹೊರಡಿಸಿದ ದಾರುಲ್ ಉಲೂಮ್ ದಿಯೋಬಂದ್ ವಿರುದ್ಧ ಕ್ರಮಕ್ಕೆ ಎನ್‌ಸಿಪಿಸಿಆರ್ ನಿರ್ದೇಶನ
ಸದನದ ಕಲಾಪಕ್ಕೆ ಕಾಂಗ್ರೆಸ್ ಮಂತ್ರಿಗಳ, ಶಾಸಕರ ಗೈರು : ವಿರೋಧಪಕ್ಷದ ನಾಯಕ ಆರ್.ಆಶೋಕ ಗರಂ
ಸದನದ ಕಲಾಪಕ್ಕೆ ಕಾಂಗ್ರೆಸ್ ಮಂತ್ರಿಗಳ, ಶಾಸಕರ ಗೈರು : ವಿರೋಧಪಕ್ಷದ ನಾಯಕ ಆರ್.ಆಶೋಕ ಗರಂ
ಧೈರ್ಯವಾಗಿ ನಕಲಿ ಗಾಂಧಿಗಳನ್ನು ಪ್ರಶ್ನಿಸಿ, ಕನ್ನಡಿಗರೇಕೆ ಕೊಡಬೇಕು ಕಪ್ಪ? - ಬಿಜೆಪಿ ಪ್ರಶ್ನೆ
ಧೈರ್ಯವಾಗಿ ನಕಲಿ ಗಾಂಧಿಗಳನ್ನು ಪ್ರಶ್ನಿಸಿ, ಕನ್ನಡಿಗರೇಕೆ ಕೊಡಬೇಕು ಕಪ್ಪ? - ಬಿಜೆಪಿ ಪ್ರಶ್ನೆ
ಕೈಮುಗಿಯುವುದು ನಮ್ಮ ಸಂಪ್ರದಾಯ, ಅದು ಭಿಕ್ಷೆ ಬೇಡುವುದು ಅಂತ ಅಲ್ಲ - ಶಿಕ್ಷಣ ಸಚಿವ ಮಧು ಬಂಗಾರಪ್ಪ
ಕೈಮುಗಿಯುವುದು ನಮ್ಮ ಸಂಪ್ರದಾಯ, ಅದು ಭಿಕ್ಷೆ ಬೇಡುವುದು ಅಂತ ಅಲ್ಲ - ಶಿಕ್ಷಣ ಸಚಿವ ಮಧು ಬಂಗಾರಪ್ಪ
ರಾಜ್ಯ ಸರ್ಕಾರ ಮಿಷನರಿಗಳಿಗೆ ಕುಮ್ಮಕ್ಕು ಕೊಟ್ಟು ಹಿಂದೂಗಳನ್ನು ಮತಾಂತರಿಸಲು ಪ್ರೋತ್ಸಾಹಿಸುತ್ತಿದೆ - ಬಿಜೆಪಿ
ರಾಜ್ಯ ಸರ್ಕಾರ ಮಿಷನರಿಗಳಿಗೆ ಕುಮ್ಮಕ್ಕು ಕೊಟ್ಟು ಹಿಂದೂಗಳನ್ನು ಮತಾಂತರಿಸಲು ಪ್ರೋತ್ಸಾಹಿಸುತ್ತಿದೆ - ಬಿಜೆಪಿ
ಮೋದಿ ಗ್ರಾಫ್(ಜನಪ್ರಿಯತೆ) ಕಡಿಮೆ ಮಾಡೋಣ ... ಸ್ವಲ್ಪವೇ ಸಮಯ ಉಳಿದಿದೆ - ರೈತ ಮುಖಂಡ ಜಗಜಿತ್ ಸಿಂಗ್
ಮೋದಿ ಗ್ರಾಫ್(ಜನಪ್ರಿಯತೆ) ಕಡಿಮೆ ಮಾಡೋಣ ... ಸ್ವಲ್ಪವೇ ಸಮಯ ಉಳಿದಿದೆ - ರೈತ ಮುಖಂಡ ಜಗಜಿತ್ ಸಿಂಗ್
ಹಲಾಲ್ ಕೌನ್ಸಿಲ್ ಆಫ್ ಇಂಡಿಯಾದ ನಾಲ್ವರು ಅಧಿಕಾರಿಗಳನ್ನು ಬಂಧಿಸಿದ ಉತ್ತರ ಪ್ರದೇಶ ಪೊಲೀಸ್ ಎಸ್‌ಟಿಎಫ್
ಹಲಾಲ್ ಕೌನ್ಸಿಲ್ ಆಫ್ ಇಂಡಿಯಾದ ನಾಲ್ವರು ಅಧಿಕಾರಿಗಳನ್ನು ಬಂಧಿಸಿದ ಉತ್ತರ ಪ್ರದೇಶ ಪೊಲೀಸ್ ಎಸ್‌ಟಿಎಫ್
ಬಂಗಾಳಿ ಹಿಂದೂ ಯುವ ವಿವಾಹಿತ ಮಹಿಳೆಯರ ಆಯ್ಕೆ ಮಾಡಿ, ಟಿಎಂಸಿ ಕಚೇರಿಯಲ್ಲಿ ಪ್ರತಿರಾತ್ರಿ ಅತ್ಯಾಚಾರ - ಕೇಂದ್ರ ಸಚಿವೆ ಇರಾನಿ
ಬಂಗಾಳಿ ಹಿಂದೂ ಯುವ ವಿವಾಹಿತ ಮಹಿಳೆಯರ ಆಯ್ಕೆ ಮಾಡಿ, ಟಿಎಂಸಿ ಕಚೇರಿಯಲ್ಲಿ ಪ್ರತಿರಾತ್ರಿ ಅತ್ಯಾಚಾರ - ಕೇಂದ್ರ ಸಚಿವೆ ಇರಾನಿ

ನ್ಯೂಸ್ MORE NEWS...