ಹೋಟೆಲ್‌ನಲ್ಲಿ ಸ್ಟೀಮರ್ ಬ್ಲಾಸ್ಟ್: ಮೂವರಿಗೆ ಗಂಭೀರ ಗಾಯ | JANATA NEWS

ಬೆಂಗಳೂರು : ಬಿಸಿ ನೀರಿನ ಬಾಯ್ಲರ್ ಸ್ಫೋಟಗೊಂಡು ಮೂವರು ಗಾಯಗೊಂಡಿರುವ ಘಟನೆ ನಾಗರಭಾವಿಯ ನಮ್ಮೂರ ತಿಂಡಿ ಹೋಟೆಲಿನಲ್ಲಿ ನಡೆದಿದೆ.
ಬೆಂಗಳೂರಿನ ನಾಗರಬಾವಿಯಲ್ಲಿರುವ ನಮ್ಮೂರ ತಿಂಡಿ ಹೋಟೆಲ್‌ನಲ್ಲಿ ಸ್ಟೀಮರ್ ಬ್ಲಾಸ್ಟ್ ಆಗಿದೆ. ಈ ವೇಳೆ ಹೋಟೆಲ್‌ನ ಕಿಚನ್‌ನಲ್ಲಿ ಕೆಲಸ ಮಾಡುತ್ತಿದ್ದ ಮೂವರಿಗೆ ಗಂಭೀರವಾಗಿ ಗಾಯವಾಗಿದೆ. ಉಳಿದಂತೆ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಗ್ರಾಹಕರಿಗೆ ತೊಂದರೆ ಆಗಿಲ್ಲ.
ಕಿಚನ್ ನಲ್ಲಿ ಕೆಲಸ ಮಾಡುವ ಐಶ್ವರ್ಯ (19) ಬಸಿಕುಮಾರ್ (20) ಕ್ಯಾಶಿಯರ್ ಸಹೋದರ ಕಾರ್ತಿಕ್ (18) ಎಂಬುವರು ಗಾಯಗೊಂಡಿದ್ದಾರೆ. ಮೂವರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಸ್ಟೀಮರ್‌ನಲ್ಲಿ ಪ್ರೆಶರ್ ಜಾಸ್ತಿಯಾಗಿ ಬ್ಲಾಸ್ಟ್ ಆಗಿದೆ. ಬ್ಲಾಸ್ಟ್ ತೀವ್ರತೆಗೆ ಇಡೀ ಹೋಟೆಲ್ ಕಿಚನ್ ಚಿದ್ರವಾಗಿದೆ ಎಂದು ತಿಳಿದುಬಂದಿದೆ.