ಪೇಸಿಎಂ ಕಾಂಗ್ರೆಸ್ ಕಾರ್ಬನ್ ಕಾಪಿ, ಕಾಂಗ್ರೆಸ್‌ನವರು ಮಾಡಿದ್ದನ್ನೆ ಕಾಪಿ ಮಾಡಿದ್ರೆ ಜನ ನಂಬಲ್ಲ! | JANATA NEWS

ಹುಬ್ಬಳ್ಳಿ : ಸಚಿವ ಚಲುವರಾಯಸ್ವಾಮಿ ವಿರುದ್ಧ ಪೇ ಸಿಎಸ್ ಅಭಿಯಾನ ಕಾಂಗ್ರೆಸ್ ಪೋಸ್ಟರ್ ಅಭಿಯಾನದ ಕಾರ್ಬನ್ ಕಾಪಿ ಆಗಿದೆ. ಇದಕ್ಕೆ ಅರ್ಥವೇ ಇಲ್ಲ, ಪೇ ಸಿಎಂ ಅವತ್ತಿಗೆ ಲೇಟೆಸ್ಟ್. ಕಾಂಗ್ರೆಸ್‌ನವರು ಮಾಡಿದ್ದನ್ನೆ ನಕಲು ಮಾಡೋಕೆ ಹೊರಟರೆ ಜನ ನಂಬಲ್ಲ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಬಿಜೆಪಿ ಸರ್ಕಾರ ಬಂದ ನಾಲ್ಕು ವರ್ಷಗಳ ಬಳಿಕ ಅಭಿಯಾನ ಆರಂಭವಾಗಿತ್ತು. ಆದರೆ ಕಾಂಗ್ರೆಸ್ ಬಂದ ಮೂರು ತಿಂಗಳಲ್ಲಿ ಬಿಜೆಪಿಯವರು ಮಾಡ್ತಾರೆ ಅಂದ್ರೆ ಅದಕ್ಕೆ ಅರ್ಥ ಇಲ್ಲ. ಬಿಜೆಪಿಯಲ್ಲಿದ್ದಾಗ ಎಲ್ಲ ವಿಷಯಗಳನ್ನು ನಾನು ಕೋರ್ ಕಮಿಟಿಯಲ್ಲಿ ಹೇಳಿದ್ದೆ. ಹೊರಗಡೆ ಹೇಳೋಕೆ ಆಗದ ವಿಷಯವನ್ನು ಹೇಳಿದ್ದೆ, ಆದ್ರೆ ಅವರು ತಿಳಿದುಕೊಳ್ಳಲಿಲ್ಲ ಎಂದರು.
ದೆಹಲಿ ಸಭೆಗೆ ನಾನು ಕೂಡ ಹೋಗಿದ್ದೆ. ಖುದ್ದು ರಾಹುಲ್ ಗಾಂಧಿ ಅವರೇ ಮೂರು ಗಂಟೆ ನಮ್ಮ ಜೊತೆ ಚರ್ಚೆ ಮಾಡಿದ್ದರು. ಲೋಕಸಭೆಯಲ್ಲಿ ಹೇಗೆ ನಾವು ಗೆಲ್ಲಬೇಕು ಅನ್ನೋದರ ಬಗ್ಗೆ ಚರ್ಚೆ ಆಯ್ತು. ಗ್ಯಾರಂಟಿ ಅನುಷ್ಠಾನದ ಬಗ್ಗೆಯೂ ಚರ್ಚೆ ಆಗಿದೆ. ರಾಜ್ಯ ರಾಜಕಾರಣದ ಅವಲೋಕನವನ್ನು ರಾಹುಲ್ ಗಾಂಧಿ ಪಡೆದುಕೊಂಡರು ಎಂದು ಹೇಳಿದರು.
ರಾಹುಲ್ ಗಾಂಧಿ ಯಾವುದೇ ರೀತಿಯ ಟಾಸ್ಕ್ ಅನ್ನು ಕೊಟ್ಟಿಲ್ಲ. ಕೆಲ ವಿಚಾರಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಲೋಕಸಭಾ ಚುನಾವಣೆಯಲ್ಲಿ ನಾವು 15 ರಿಂದ 20 ಸೀಟ್ ಗೆಲ್ಲಬೇಕು ಎಂಬ ಗುರಿ ಎಲ್ಲರದ್ದು ಕೂಡ. ಭಾರತೀಯ ಜನತಾ ಪಕ್ಷ ದಿನದಿಂದ ದಿನಕ್ಕೆ ತನ್ನ ಅಸ್ತಿತ್ವ ಕಳೆದುಕೊಳ್ತಿದೆ. ನಾಯಕತ್ವ ರಹಿತ ಪಕ್ಷ ಆಗಿದೆ. ಚುನಾವಣೆ ಮುಗಿದು ಮೂರು ತಿಂಗಳಾದರೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಆಗಿಲ್ಲ. ರಾಜ್ಯ ಬಿಜೆಪಿಯ ದಯನೀಯ ಪರಿಸ್ಥಿತಿ ಬಗ್ಗೆಯೂ ಸಭೆಯಲ್ಲಿ ಚರ್ಚೆ ಆಯ್ತು ಎಂದು ತಿಳಿಸಿದರು.