ಕರ್ನಾಟಕದ ಕಾಂಗ್ರೆಸ್ ಸರ್ಕಾರ ರೈತರಿಗೆ ಮತ್ತು ಕಾವೇರಿ ಜಲಾನಯನ ಪ್ರದೇಶದ ಜನರಿಗೆ ದ್ರೋಹ ಮಾಡಿದೆ - ಮಾಜಿ ಸಿಎಂ ಬೊಮ್ಮಾಯಿ | JANATA NEWS
ಬೆಂಗಳೂರು : ಕರ್ನಾಟಕದ ಕಾಂಗ್ರೆಸ್ ಸರ್ಕಾರ ರೈತರಿಗೆ ಮತ್ತು ಕಾವೇರಿ ನದಿ ಜಲಾನಯನ ಪ್ರದೇಶದ ಜನರಿಗೆ ದ್ರೋಹ ಮಾಡಿದೆ, ಎಂದು ಮಾಜಿ ಸಿಎಂ ಹಾಗೂ ಬಿಜೆಪಿ ಮುಖಂಡ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ರಾಜ್ಯದ ಕಾಂಗ್ರೆಸ್ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಹೋರಾಟ ಮಾಡುವ ಬದಲು, ತಮಿಳುನಾಡು ಹೇಳಿದಂತೆ ಕಾವೇರಿ ನೀರು ಬಿಡುತ್ತಿದೆ ಮತ್ತು ನಮ್ಮ ರೈತರ ಹಿತಾಸಕ್ತಿಗಳನ್ನು ಬಿಟ್ಟುಕೊಡುತ್ತಿದೆ, ಎಂದು ಬೊಮ್ಮಾಯಿ ಆರೋಪಿಸಿದರು.
ಕರ್ನಾಟಕದ ಕಾಂಗ್ರೆಸ್ ಸರ್ಕಾರ ಕಾವೇರಿ ನದಿ ಜಲಾನಯನ ಪ್ರದೇಶದ ರೈತರಿಗೆ ಮತ್ತು ಜನರಿಗೆ ದ್ರೋಹ ಬಗೆದಿದೆ. ಮತ್ತು ರೈತರಿಗೆ ಈ ಸರ್ಕಾರದ ಧೋರಣೆಯಿಂದ ಆಶ್ಚರ್ಯವಾಗಿದೆ, ಎಂದು ಬೊಮ್ಮಾಯಿ ಹೇಳಿದರು.
ಮೊದಲನೆಯದಾಗಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಲ್ಲಿ ಅವರು ತಮ್ಮ ಪ್ರಕರಣವನ್ನು ಎಂದಿಗೂ ಹೋರಾಡಲಿಲ್ಲ. ತಮಿಳುನಾಡು 32 ಟಿಎಂಸಿ(ಸಾವಿರ ಮಿಲಿಯನ್ ಘನ ಅಡಿ) ಅನ್ನು ಬಳಸುವ ಬದಲು , 60 ಟಿಎಂಸಿ ಬಳಸಿದೆ. 1.8 ಲಕ್ಷ ಹೆಕ್ಟೇರ್ ಬೆಳೆಗಳನ್ನು ಬೆಳೆಯುವ ಬದಲಿಗೆ, ಅವರು 4 ಲಕ್ಷ ಹೆಕ್ಟೇರ್ ಗೂ ಹೆಚ್ಚು ಕೃಷಿ ಮಾಡಿದ್ದಾರೆ.... ಅವರು (ಕರ್ನಾಟಕ ಸರ್ಕಾರ) ಡಬ್ಲ್ಯುಎಂಎ ಒಳಗೆ ತಂದಿಲ್ಲ. ಅವರು (ಕರ್ನಾಟಕ ಸರ್ಕಾರ) ಹೋರಾಟ ಮಾಡಲಿಲ್ಲ ಮತ್ತು ಸುಮ್ಮನೆ ಬಿಟ್ಟು ಬಿಟ್ಟಿದ್ದಾರೆ... ನಮ್ಮ ರೈತರಿಗೆ ನೀರು ಬಿಡುವುದು ತಡ ಮಾಡಿದರು. ಈಗ ನಮ್ಮ ಕರ್ನಾಟಕದ ರೈತರಿಗೆ ಏನು ಉಳಿದಿದೆಯೋ ಅದನ್ನು ತಮಿಳುನಾಡು ಪಡೆಯುತ್ತಿದೆ.
"ಕೇವಲ ಅವರು(ತಮಿಳುನಾಡು ಸರ್ಕಾರ) ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ಕಾರಣ, ಇವರು(ಕರ್ನಾಟಕ ಸರ್ಕಾರ) ನೀರು ಬಿಡಲು ಪ್ರಾರಂಭಿಸಿದರು. ಇದು ಯಾವ ರೀತಿಯ ಸರ್ಕಾರ?", ಎಂದು ಮಾಜಿ ಸಿಎಂ ಪ್ರಶ್ನಿಸಿದರು.
"ಅವರು(ಕರ್ನಾಟಕ ಸರ್ಕಾರ) ಸುಪ್ರೀಂ ಕೋರ್ಟ್‌ನಲ್ಲಿ ಪ್ರಬಲ ವಾದ ಮಂಡಿಸಿ ಹೋರಾಟ ಮಾಡಬೇಕು. ಅರ್ಹತೆಗಾಗಿ ಹೋರಾಡುವ ಬದಲು, ದುರ್ಬಲವಾಗಿ ಅವರ ಹಕ್ಕುಗಳನ್ನು ಮತ್ತು ನಮ್ಮ ರೈತನ ಆಸಕ್ತಿಯನ್ನು ಬಿಟ್ಟುಬಿಡುತ್ತಿದೆ. ನೀರು ಬಿಡುವ ಮೂಲಕ ರೈತರಿಗೆ ಮತ್ತು ಕಾವೇರಿ ಜಲಾನಯನ ಪ್ರದೇಶದ ಜನರಿಗೆ ಮಾಡಿದ ಧೋಖಾ(ದ್ರೋಹ) ಬಿಟ್ಟರೆ ಬೇರೇನೂ ಅಲ್ಲ" ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.