150 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ತಮಿಳುನಾಡು ಕೋರ್ಟ್ ಮೊರೆ ಹೋಗಿದೆ - ಡಿಸಿಎಂ ಡಿಕೆಶಿ | JANATA NEWS

ಬೆಂಗಳೂರು : 15 ದಿನಗಳ ವರೆಗೆ ಪ್ರತಿದಿನ 10 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ತಮಿಳುನಾಡು ಸರ್ಕಾರವು ಕೋರ್ಟ್ ಮೊರೆ ಹೋಗಿದೆ, ಎಂದು ಉಪ ಮುಖ್ಯಮಂತ್ರಿ ಡಿಕೆ. ಶಿವಕುಮಾರ ಅವರು ತಮಿಳುನಾಡಿಗೆ ಕಾವೇರಿ ನೀರು ಹಂಚಿಕೆ ವಿಚಾರವಾಗಿ ಸರ್ಕಾರದ ಅಸಹಾಯಕತೆ ಹಂಚಿಕೊಂಡಿದ್ದಾರೆ.
15 ದಿನಗಳ ವರೆಗೆ ಪ್ರತಿದಿನ 10 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ತಮಿಳುನಾಡು ಸರ್ಕಾರವು ಕೋರ್ಟ್ ಮೊರೆ ಹೋಗಿದೆ. ಆದರೆ ಈ ಬಾರಿ ರಾಜ್ಯದಲ್ಲಿ ವಾಡಿಕೆಯಷ್ಟು ಮಳೆಯಾಗಿಲ್ಲ. ಇದರಿಂದ ಜಲಾಶಯದಲ್ಲಿಯೂ ಸಮರ್ಪಕವಾಗಿ ನೀರು ಭರ್ತಿಯಾಗಿಲ್ಲ. ಈಗಾಗಲೇ ಸ್ವಲ್ಪ ನೀರು ತಮಿಳುನಾಡಿಗೆ ಹರಿಸಲಾಗಿದೆ. ಮಳೆ ಇಲ್ಲದ ಕಾರಣಕ್ಕೆ ನಮ್ಮಲ್ಲಿಯೂ ನೀರಿನ ಅಭಾವ ಇದೆ. ಎರಡು ರಾಜ್ಯಗಳ ರೈತರ ಹಿತ ಕಾಯಬೇಕು. ಆದರೆ ಸಮಪರ್ಕವಾದ ನೀರು ಇಲ್ಲದಿರುವುದರಿಂದ ಸಮಸ್ಯೆ ಎದುರಾಗುತ್ತಿದೆ. ಈ ವಿಚಾರದಲ್ಲಿ ರಾಜಕಾರಣ ಮಾಡುವುದರಲ್ಲಿ ಅರ್ಥವಿಲ್ಲ. ತಮಿಳುನಾಡು ಸರ್ಕಾರ ಎಂದಿನಂತೆ ನೀರಿಗಾಗಿ ಬೇಡಿಕೆಯನ್ನು ಇಟ್ಟಿದೆ. ಆದರೆ, ರಾಜ್ಯದಲ್ಲಿ ನಮ್ಮ ರೈತರಿಗೂ ನೀರಿನ ಅಗತ್ಯವಿದೆ, ಎಂದು ಡಿಸಿಎಂ ಡಿಕೆಶಿವಕುಮಾರ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪ್ರಕಟಿಸಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರು ಹಂಚಿಕೆ ವಿಚಾರವಾಗಿ ಎಎನ್ಐ ನೊಂದಿಗೆ ಮಾತನಾಡಿದ ಡಿಸಿಎಂ ಅವರು, 15 ದಿನಗಳ ಕಾಲ 10 ಸಾವಿರ ಕ್ಯೂಸೆಕ್ ಬಿಡುವಂತೆ ಸೂಚನೆ ಬಂದಿದ್ದು, ಸಾಕಷ್ಟು ನೀರಿನ ಕೊರತೆ ಇರುವುದು ನಿಮಗೆಲ್ಲ ಗೊತ್ತೇ ಇದೆ... ನೀರಿನ ಅಭಾವದಿಂದ ಭೀಕರ ಬರಗಾಲ ಎದುರಿಸುತ್ತಿದ್ದೇವೆ...ನಿರ್ಧಾರವನ್ನು ಮರುಪರಿಶೀಲಿಸುವಂತೆ ಪ್ರಾಧಿಕಾರಕ್ಕೆ ನಾವು ಮನವಿ ಮಾಡುತ್ತಿದ್ದೇವೆ...", ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರು ಹೇಳಿದ್ದಾರೆ.