ಪರೀಕ್ಷಾರ್ಥ ಹಾರಾಟ, ಧರೆಗುರುಳಿದ ಚಾಲಕ ರಹಿತ ತಪಸ್ ಯುಎವಿ | JANATA NEWS

ಚಿತ್ರದುರ್ಗ : ಜಿಲ್ಲೆಯ ಹಿರಿಯೂರು ತಾಲೂಕಿನ ವದ್ದಿಕೆರೆ ಗ್ರಾಮದ ಬಳಿ ಪೈಲಟ್ ರಹಿತ ತಪಸ್ ವಿಮಾನ ಪತನಗೊಂಡಿದೆ.
ಚಳ್ಳಕೆರೆ ತಾಲ್ಲೂಕು ಕುದಾಪುರ ಬಳಿಯಿರುವ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ಸಿದ್ಧಪಡಿಸಿದ್ಧ ಯುದ್ಧ ವಿಮಾನ ಕುದಾಪುರ ವಾಯು ನೆಲೆಯಿಂದ ಭಾನುವಾರ ಬೆಳಿಗ್ಗೆ ಹಾರಾಟ ಆರಂಭಿಸಿತ್ತು.
ಡ್ರೋನ್ ಮಾದರಿಯ ತಪಸ್ ಯುಎವಿ ಪರೀಕ್ಷಾರ್ಥ ಹಾರಾಟ ನಡೆಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ವದ್ದಿಕೆರೆ ಬಳಿ ನಿಯಂತ್ರಣ ತಪ್ಪಿ ಸಿದ್ದಪ್ಪ ಎಂಬುವವರ ಜಮೀನಿಲ್ಲಿ ಪತನವಾಗಿದೆ. ಯಾವುದೇ ಅನಾಹುತ ಸಂಭವಿಸಿಲ್ಲ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಹಾಗೂ ವಾಯುಪಡೆಯ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದಾರೆ.
RELATED TOPICS:
English summary :Test flight, cloaked unmanned Tapas UAV