ಚಲಿಸುತ್ತಿರುವಾಗಲೇ ಕಳಚಿಬಿದ್ದ ಬಸ್‌ನ ಹಿಂದಿನ ಟೈರ್, ದೃಶ್ಯ ಮೊಬೈಲ್‌ನಲ್ಲಿ ಸೆರೆ! | JANATA NEWS

ಗದಗ : ಚಲಿಸುತ್ತಿರುವ ಬಸ್ನಿಂದ ಟೈಯರ್ ಕಳಚಿಕೊಂಡು ರಸ್ತೆ ಪಕ್ಕಕ್ಕೆ ಉರುಳಿ ಬಿದ್ದಿರುವ ಭಯಾನಕ ಘಟನೆ ಗದಗ ತಾಲೂಕಿನ ತಗಡೂರು ಹಾಗೂ ಹೊಂಬಳ ಗ್ರಾಮದ ನಡುವೆ ನಡೆದಿದೆ.
ಗದಗ ಡಿಪೋಗೆ ಸೇರಿದ ವಾಯವ್ಯ ಕರ್ನಾಟಕ ಸಾರಿಗೆ ಬಸ್, ಗದಗದಿಂದ ನರಗುಂದದ ಕಡೆ ಹೊರಟಿತ್ತು. ಈ ವೇಳೆ ಇದ್ದಕ್ಕಿದ್ದಂತೆ ಬಸ್‌ನ ಹಿಂಬದಿಯ ಒಂದು ಚಕ್ರ ಕಳಚಿಕೊಂಡು ರಸ್ತೆ ಪಕ್ಕಕ್ಕೆ ಉರುಳಿಕೊಂಡು ಹೋಗಿ ಬಿದ್ದಿದೆ.
ಸುಮಾರು 50 ಜನ ಪ್ರಯಾಣಿಕರನ್ನು ಹೊತ್ತು ಗದಗನಿಂದ ನರಗುಂದದ ಕಡೆ ಹೊರಟಿತ್ತು. ಹಿಂದಿನ ಚಕ್ರ ಕಳುಚುತ್ತಿದ್ದಂತೆ ಸದ್ದಿಗೆ ಪ್ರಯಾಣಿಕರು ಭಯಾಭೀತರಾಗಿದ್ದಾರೆ. ಬಸ್ ಹಿಂಬದಿಯ ಡಬಲ್ ಚಕ್ರದ ಪೈಕಿ ಒಂದು ಚಕ್ರ ಕಳಚಿಕೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಬಸ್‌ನ ಹಿಂದೆ ಹೋಗ್ತಿದ್ದ ಕಾರೊಂದಲ್ಲಿದ್ದ ಜನರು ಮೊಬೈಲ್‌ನಲ್ಲಿ ಸೆರೆಯಾಗಿರುವ ದೃಶ್ಯ ವೈರಲ್ ಆಗಿದೆ. ಶಕ್ತಿ ಯೋಜನೆಯಿಂದಾಗಿ ಬಸ್ಗಳೆಲ್ಲ ಡಕೋಟಾ ಬಸ್ಗಳಾಗಿ ಪರಿವರ್ತನೆ ಆಗುತ್ತಿದೆ ಎಂದು ಸ್ಥಳೀಯರ ಆರೋಪ ಮಾಡಿದ್ದಾರೆ.