ಚಳಿಗಾಲದಲ್ಲೇ ಕೆ.ಆರ್.ಎಸ್. ಬರಿದು ಮಾಡುವುದು ಸಿದ್ದರಾಮಯ್ಯ ಸರ್ಕಾರದ ದುಷ್ಟ ಗುರಿ - ಬಿಜೆಪಿ | JANATA NEWS
ಬೆಂಗಳೂರು : ತಮಿಳುನಾಡಿಗೆ ಕಾವೇರಿ ನೀರು ಹರಿಸುವ ರಾಜ್ಯ ಕಾಂಗ್ರೆಸ್ ಸರ್ಕಾರದ ನೀತಿಯ ವಿರುದ್ಧ ವಿರೋಧ ಪಕ್ಷಗಳ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ.
ತಮಿಳುನಾಡಿಗೆ ಮತ್ತಷ್ಟು ನೀರು – 105 ಅಡಿಗೆ ಕುಸಿದ ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ, ಕುರಿತಾದ ವರದಿಯನ್ನು ಉಲ್ಲೇಖಿಸಿ, ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧ ಪಕ್ಷವಾದ ಬಿಜೆಪಿ ತನ್ನ ಎಕ್ಸ್ ಖಾತೆಯಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, "ಕಾವೇರಿ ಒಡಲನ್ನು ಬರಿದು ಮಾಡಿಯೇ ಸಿದ್ದ ಎಂದು ರಾಜ್ಯದ ಕರ್ನಾಟಕ ಕಾಂಗ್ರೆಸ್ ಸರ್ಕಾರ ಸಂಕಲ್ಪ ತೊಟ್ಟಂತಿದೆ.
ಕಾವೇರಿಗಾಗಿ ಹೋರಾಟ ನಡೆಯುತ್ತಿರುವಾಗಲೇ, ಕೇವಲ 4,900 ಕ್ಯೂಸೆಕ್ಸ್ ಒಳಹರಿವು ಇರುವಾಗ ತಮಿಳುನಾಡಿಗೆ 12,631 ಕ್ಯೂಸೆಕ್ಸ್ ಕಾವೇರಿ ಹರಿಸಿ ರಾಜ್ಯದ ರೈತರನ್ನೇ ಲೇವಡಿ ಮಾಡಲಾಗುತ್ತಿದೆ.
ಮುಂದಿನ ಬೇಸಿಗೆಯಲ್ಲ, ಚಳಿಗಾಲದಲ್ಲೇ ಕೆ.ಆರ್.ಎಸ್. ಬರಿದು ಮಾಡುವುದು ಸಿದ್ದರಾಮಯ್ಯ ಅವರ ಸರ್ಕಾರದ ದುಷ್ಟ ಗುರಿಯಂತಿದೆ!" ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.