Thu,May30,2024
ಕನ್ನಡ / English

ಕಾಂಗ್ರೆಸ್ ಪಕ್ಷದ 30 ಶಾಸಕರು ಪಕ್ಷ ಬಿಡಲು ಮುಂದಾಗಿದ್ದಾರೆ | JANATA NEWS

22 Aug 2023
2459

ಬೆಂಗಳೂರು : ಕಾಂಗ್ರೆಸ್ ಪಕ್ಷದ 30 ಶಾಸಕರು ಪಕ್ಷ ಬಿಡಲು ಮುಂದಾಗಿದ್ದಾರೆ ಎಂದು ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ ಹೊಸ ಬಾಂಬ್​ ಸಿಡಿಸಿದ್ದಾರೆ.

ಜೆಡಿಎಸ್ ಶಾಸಕರನ್ನು ಕಾಂಗ್ರೆಸ್ ಸೆಳೆಯುವ ವಿಚಾರವಾಗಿ ತಿರುಗೇಟು ನೀಡಿದ ಕುಮಾರಸ್ವಾಮಿ ಅವರು, ನನ್ನ ಪಕ್ಷದ ಶಾಸಕರು ನನ್ನ ತಿಳುವಳಿಕೆ ಇರುವ ರೀತಿಯಲ್ಲಿ ಪಕ್ಷ ಬಿಡುವ ಸಾಧ್ಯತೆ ಇಲ್ಲ. ಕಾಂಗ್ರೆಸ್ ನವರು ಯಾಕೆ ಈ ರೀತಿಯ ಚರ್ಚೆ ಹುಟ್ಟುಹಾಕಿದ್ದಾರೆ ಎಂದರೇ, ಕಾಂಗ್ರೆಸ್​​ನ 30 ಶಾಸಕರು ಪಕ್ಷ ಬಿಡಲು ಮುಂದಾಗಿದ್ದಾರೆ. ಬಿಜೆಪಿ, ಜೆಡಿಎಸ್​​​ನಿಂದ ಬರ್ತಾ ಇದ್ದಾರೆ ಅಂತ ಹೇಳ್ತಾ ಇದ್ದಾರೆ. ಕಾಂಗ್ರೆಸ್ ಶಾಸಕರು ಪಕ್ಷ ಬಿಡುವುದನ್ನ ತಡೆಯಲು ಈ ಗುಮ್ಮ ಬಿಟ್ಟು ಕೊಂಡ ಹೋಗುತ್ತಿದ್ದಾರೆ ಎಂದು ಹೇಳಿದರು.

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿಚಾರದಲ್ಲಿ ಕುಮಾರಸ್ವಾಮಿ ಟ್ವೀಟ್ ವಿಚಾರ ಇಟ್ಟುಕೊಂಡು ಮಾತನಾಡಿದ್ದ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಾನು ಟ್ವೀಟ್‌ನಲ್ಲಿ ನೀರು ಬಿಡಿ ಅಂತ ಹೇಳಿಲ್ಲ. ನನ್ನ ಟ್ವೀಟ್‌ನಲ್ಲಿ ಅಣ್ಣ-ತಮ್ಮಂದಿರ ರೀತಿ ಇರಬೇಕು ಅಂತ ಹೇಳಿದ್ದೇನೆ. ಕಾನೂನು ವ್ಯಾಪ್ತಿಯಲ್ಲಿ ಇದಕ್ಕೆ ಪರಿಹಾರ ಸಿಗಲ್ಲ. ಹೀಗಾಗಿ ಕೊಟ್ಟು ತೆಗೆದುಕೊಳ್ಳಬೇಕು ಎಂದು ಹೇಳಿದ್ದೇನೆ. ತಮಿಳುನಾಡು ರೈತರಿಗೆ ನಮ್ಮ ರೈತರು ಅನ್ಯಾಯ ಮಾಡಿಲ್ಲ. ನಮ್ಮ ರೈತರಿಗೆ ಅನ್ಯಾಯ ಮಾಡಬೇಡಿ ಎಂದು ಹೇಳಿದ್ದೇನೆ. ಇದನ್ನು ಹೇಳಿದ್ದು ತಪ್ಪಾ? ನಾನು ನೀರು ಬಿಡುತ್ತೇನೆ ಎಂದು ಹೇಳಿರಲಿಲ್ಲ ಎಂದು ತಿರುಗೇಟು ನೀಡಿದರು.

ಸುಳ್ಳು ಹೇಳಿಕೊಂಡು ಎಷ್ಟು ದಿನ ರಾಜಕೀಯ ಮಾಡುತ್ತಿರಾ? ಉಡಾಫೆ ರಾಜಕೀಯ ಮಾಡಬೇಡಿ. ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದೀರಾ. ಮಾತ್ತೆತ್ತಿದರೆ ಪೆನ್ನು ಕೊಡಿ ಪೆನ್ನು ಕೊಡಿ ಎಂದು ಕೇಳುತ್ತಿದ್ದರು. ನಮ್ಮ ರಾಜ್ಯ ಹಾಳು ಮಾಡಲು ಪೆನ್ನು ಕೇಳಿದ್ರಾ? ನಮ್ಮ ರೈತರನ್ನು ಕಡೆಗಣಿಸಿ ಬೇರೆ ಯಾರನ್ನೋ ಮೆಚ್ಚಿಸೋಕೆ ಪೆನ್ನು ಕೇಳಿದ್ರಾ? ಹುಡುಗಾಟ ಆಡಬೇಡಿ. ಉತ್ತರ ಕೊಡುವಾಗ ನೀರಾವರಿ ಸಚಿವರ ಸ್ಥಾನ ಗಾಂಭೀರ್ಯತೆಯನ್ನು ಕಾಪಾಡಿಕೊಳ್ಳಿ. ಬಿಚ್ಚೋದು ಬಿಚ್ಚೋದು ಎಂದು ಮಾತನಾಡಬೇಡಿ. ನೀವು ಮಾಡಿರುವ ಅವ್ಯವಹಾರಗಳು ಸಾಕಷ್ಟು ಇವೆ. ಜಗಜ್ಜಾಹೀರಾಗಿವೆ. ಹಿಂದೆ ಏನೋ ಮಾಡಿಕೊಂಡು ಆಯ್ತು. ಈಗಲಾದರೂ ಗೌರವಯುತವಾಗಿ ಕೆಲಸ ಮಾಡಿ ಎಂದು ಹರಿಹಾಯ್ದರು.

ಹಿಂದೆ ಮಾಡಿಕೊಂಡಿದ್ದು ಸಾಕು. ಇನ್ನಾದರು ಲೂಟಿ ಹೊಡೆಯವುದು ನಿಲ್ಲಿಸಿ. ಅಣ್ಣ ಅಂತಿರಲ್ಲ, ಇಲ್ಲಿಯವರೆಗೆ ಲೂಟಿ ಮಾಡಿರುವುದು ಸಾಕು. ನನ್ನ ಮಾತನ್ನ ಕೇಳಿ ಲೂಟಿ ಹೊಡೆಯೊದನ್ನ ನಿಲ್ಲಿಸಿ. ಸಲಹೆ ಒಪ್ಪಿಕೊಂಡ್ರೆ ಆಗ ತಮ್ಮ ಅಂತ ಒಪ್ಪಿಕೊಳ್ಳುತ್ತೇನೆ ಎಂದರು.

RELATED TOPICS:
English summary :30 Congress MLAs have decided to leave the party

ತವಾ ಫ್ರೈ ಆಗುತ್ತಿರುವ ದೆಹಲಿ : ಅತ್ಯಧಿಕ ತಾಪಮಾನ 52.3 ಡಿಗ್ರಿ ಸೆಲ್ಸಿಯಸ್ ದಾಖಲು
ತವಾ ಫ್ರೈ ಆಗುತ್ತಿರುವ ದೆಹಲಿ : ಅತ್ಯಧಿಕ ತಾಪಮಾನ 52.3 ಡಿಗ್ರಿ ಸೆಲ್ಸಿಯಸ್ ದಾಖಲು
ಲೋಕಸಭೆ ಚುನಾವಣೆ ಪ್ರಚಾರ ಮುಗಿದ ಬಳಿಕ ಕನ್ಯಾಕುಮಾರಿಯಲ್ಲಿ ಆಧ್ಯಾತ್ಮಿಕ ಧ್ಯಾನ ಮಾಡಲಿರುವ ಪ್ರಧಾನಿ ಮೋದಿ
ಲೋಕಸಭೆ ಚುನಾವಣೆ ಪ್ರಚಾರ ಮುಗಿದ ಬಳಿಕ ಕನ್ಯಾಕುಮಾರಿಯಲ್ಲಿ ಆಧ್ಯಾತ್ಮಿಕ ಧ್ಯಾನ ಮಾಡಲಿರುವ ಪ್ರಧಾನಿ ಮೋದಿ
7 ದಿನಗಳ ಜಾಮೀನು ವಿಸ್ತರಣೆ ಕೋರಿ ಸಲ್ಲಿಸಿದ್ದ ಅರ್ಜಿ : ದೆಹಲಿ ಸಿಎಂ ಕೇಜ್ರಿವಾಲ್‌ಗೆ ನಿರಾಸೆ
7 ದಿನಗಳ ಜಾಮೀನು ವಿಸ್ತರಣೆ ಕೋರಿ ಸಲ್ಲಿಸಿದ್ದ ಅರ್ಜಿ : ದೆಹಲಿ ಸಿಎಂ ಕೇಜ್ರಿವಾಲ್‌ಗೆ ನಿರಾಸೆ
ಮೇ 31 ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ ಮುಂದೆ ಹಾಜರಾಗುತ್ತೇನೆ - ಪ್ರಜ್ವಲ್ ರೇವಣ್ಣ ವಿಡಿಯೋ ಸಂದೇಶ
ಮೇ 31 ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ ಮುಂದೆ ಹಾಜರಾಗುತ್ತೇನೆ - ಪ್ರಜ್ವಲ್ ರೇವಣ್ಣ ವಿಡಿಯೋ ಸಂದೇಶ
ಟ್ರಕ್, ಕಾರು ಭೀಕರ ಅಪಘಾತದಲ್ಲಿ 6 ಜನರ ಸಾವು: ಕಳೆದ 24 ಗಂಟೆಗಳಲ್ಲಿ ರಾಜ್ಯಾದ್ಯಂತ ರಸ್ತೆ ಅಪಘಾತಗಳಲ್ಲಿ 51
ಟ್ರಕ್, ಕಾರು ಭೀಕರ ಅಪಘಾತದಲ್ಲಿ 6 ಜನರ ಸಾವು: ಕಳೆದ 24 ಗಂಟೆಗಳಲ್ಲಿ ರಾಜ್ಯಾದ್ಯಂತ ರಸ್ತೆ ಅಪಘಾತಗಳಲ್ಲಿ 51
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದಾಗಿ ಅತ್ಯಾಚಾರ, ಕೊಲೆ, ಹಲ್ಲೆ, ನಡೆಯುತ್ತಿದೆ. ಭಯೋತ್ಫಾದನೆ, ಕೋಮುಗಲಭೆಗಳು ರಾರಾಜಿಸುತ್ತಿವ - ಬಿಜೆಪಿ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದಾಗಿ ಅತ್ಯಾಚಾರ, ಕೊಲೆ, ಹಲ್ಲೆ, ನಡೆಯುತ್ತಿದೆ. ಭಯೋತ್ಫಾದನೆ, ಕೋಮುಗಲಭೆಗಳು ರಾರಾಜಿಸುತ್ತಿವ - ಬಿಜೆಪಿ
ರಾಜ್ಯಪಾಲರು ಕೂಡಲೇ ಮಧ್ಯಪ್ರವೇಶಿಸಬೇಕು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಸರ್ಕಾರದಿಂದ ವರದಿ ಪಡೆಯಲಿ: ಬಿ. ವೈ. ವಿಜಯೇಂದ್ರ
ರಾಜ್ಯಪಾಲರು ಕೂಡಲೇ ಮಧ್ಯಪ್ರವೇಶಿಸಬೇಕು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಸರ್ಕಾರದಿಂದ ವರದಿ ಪಡೆಯಲಿ: ಬಿ. ವೈ. ವಿಜಯೇಂದ್ರ
ಬಿಜೆಪಿಯಿಂದ ಮಾಜಿ ಶಾಸಕ ರಘುಪತಿ ಭಟ್ ಉಚ್ಚಾಟನೆ
ಬಿಜೆಪಿಯಿಂದ ಮಾಜಿ ಶಾಸಕ ರಘುಪತಿ ಭಟ್ ಉಚ್ಚಾಟನೆ
ಸಿದ್ದರಾಮಯ್ಯ ಅವರೇ ನಿಮ್ಮ ಸುಪುತ್ರ..ರನ್ನು Tomorrow Land ಎನ್ನುವ ಅಮಲಿನ ಪಾರ್ಟಿಗೆ ನೀವೇ ಕಳಿಸಿ.. ಅವರ ಸಾವಿಗೆ ಕಾರಣರಾದಿರಿ.. -  ಹೆಚ್.ಡಿ.ಕೆ
ಸಿದ್ದರಾಮಯ್ಯ ಅವರೇ ನಿಮ್ಮ ಸುಪುತ್ರ..ರನ್ನು Tomorrow Land ಎನ್ನುವ ಅಮಲಿನ ಪಾರ್ಟಿಗೆ ನೀವೇ ಕಳಿಸಿ.. ಅವರ ಸಾವಿಗೆ ಕಾರಣರಾದಿರಿ.. - ಹೆಚ್.ಡಿ.ಕೆ
ಹೈಕಮಾಂಡ್‌ನವರು ನನ್ನ ಪುತ್ರ ಡಾ|| ಯತೀಂದ್ರ ರನ್ನು ಎಂ.ಎಲ್.ಸಿ ಮಾಡುವುದಾಗಿ ಹೇಳಿದ್ದರು - ಸಿಎಂ ಸಿದ್ದರಾಮಯ್ಯ
ಹೈಕಮಾಂಡ್‌ನವರು ನನ್ನ ಪುತ್ರ ಡಾ|| ಯತೀಂದ್ರ ರನ್ನು ಎಂ.ಎಲ್.ಸಿ ಮಾಡುವುದಾಗಿ ಹೇಳಿದ್ದರು - ಸಿಎಂ ಸಿದ್ದರಾಮಯ್ಯ
ಭಾರತಕ್ಕೆ ವಾಪಸಾಗಿ ಪೊಲೀಸರಿಗೆ ಶರಣಾಗು, ಪ್ರಜ್ವಲ್‌ಗೆ ದೇವೇಗೌಡರ ಎಚ್ಚರಿಕೆ
ಭಾರತಕ್ಕೆ ವಾಪಸಾಗಿ ಪೊಲೀಸರಿಗೆ ಶರಣಾಗು, ಪ್ರಜ್ವಲ್‌ಗೆ ದೇವೇಗೌಡರ ಎಚ್ಚರಿಕೆ
ಇಂಡಿಯಾ ಬ್ಲಾಕ್ ಪಕ್ಷಗಳೂ ಓಬಿಸಿ ಮೀಸಲಾತಿಯನ್ನು ಕಸಿದುಕೊಂಡು ಮುಸ್ಲಿಮರಿಗೆ ನೀಡಿವೆ. ನ್ಯಾಯಾಲಯದ ಆದೇಶವನ್ನು ಸ್ವಾಗತಿಸುತ್ತೇನೆ - ಅಮಿತ್ ಷಾ
ಇಂಡಿಯಾ ಬ್ಲಾಕ್ ಪಕ್ಷಗಳೂ ಓಬಿಸಿ ಮೀಸಲಾತಿಯನ್ನು ಕಸಿದುಕೊಂಡು ಮುಸ್ಲಿಮರಿಗೆ ನೀಡಿವೆ. ನ್ಯಾಯಾಲಯದ ಆದೇಶವನ್ನು ಸ್ವಾಗತಿಸುತ್ತೇನೆ - ಅಮಿತ್ ಷಾ

ನ್ಯೂಸ್ MORE NEWS...