ಪ್ರಧಾನಿ ಮೋದಿಗೆ ಒಟ್ಟು 15 ಅತ್ಯುನ್ನತ ಅಂತರರಾಷ್ಟ್ರೀಯ ಪ್ರಶಸ್ತಿ : ಈಗ ಗ್ರೀಸ್ ನ ದಿ ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಆನರ್ | JANATA NEWS

ಅಥೆನ್ಸ್ : ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ದೊರೆತ ಗೌರವ ಪ್ರಶಸ್ತಿಯ ಪಟ್ಟಿಯಲ್ಲಿ ಮತ್ತೊಂದು ಸೇರ್ಪಡೆಗೊಂಡಿದ್ದು, ಗ್ರೀಸ್ ಸರ್ಕಾರ ನೀಡುವ ಶ್ರೇಷ್ಠ ಪ್ರಶಸ್ತಿಯಾದ ದಿ ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಆನರ್ ನೂತನ ಪಾರಿತೋಷಕವಾಗಿದೆ.
ಗ್ರೀಸ್ ನ ಅಧ್ಯಕ್ಷೆ ಕಟೆರಿನಾ ಸಕೆಲ್ಲರೊಪೌಲೌ ಅವರು ಪ್ರಧಾನಿ ಮೋದಿ ಅವರಿಗೆ ದಿ ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಆನರ್ ಪ್ರಧಾನ ಮಾಡಿ ಇಂದು ಶುಕ್ರವಾರ ಸನ್ಮಾನಿಸಿದ್ದಾರೆ.
ಈ ಕುರಿತು ಹೇಳಿರುವ ಪ್ರಧಾನಿ ಮೋದಿ ಅವರು, "ನನಗೆ ದಿ ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಆನರ್ ನೀಡಿದ್ದಕ್ಕಾಗಿ ನಾನು ಅಧ್ಯಕ್ಷೆ ಕಟೆರಿನಾ ಸಕೆಲ್ಲರೊಪೌಲೌ, ಸರ್ಕಾರ ಮತ್ತು ಗ್ರೀಸ್‌ನ ಜನರಿಗೆ ಧನ್ಯವಾದ ಹೇಳುತ್ತೇನೆ. ಇದು ಗ್ರೀಸ್‌ನ ಜನರು ಭಾರತದ ಬಗ್ಗೆ ಹೊಂದಿರುವ ಗೌರವವನ್ನು ತೋರಿಸುತ್ತದೆ.", ಎಂದಿದ್ದಾರೆ.
ಗ್ರೀಸ್‌ನ ಅಧ್ಯಕ್ಷರ ಪ್ರಧಾನ ಮಾಡಿದ "ದಿ ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಆನರ್" ಅನ್ನು ಪ್ರಧಾನ ಮಂತ್ರಿಗಳು ಮತ್ತು "ತಮ್ಮ ವಿಶಿಷ್ಟ ಸ್ಥಾನದ ಕಾರಣದಿಂದ ಗ್ರೀಸ್‌ನ ಘನತೆಯನ್ನು ಹೆಚ್ಚಿಸಲು ಕೊಡುಗೆ ನೀಡಿದ ಗಣ್ಯ ವ್ಯಕ್ತಿಗಳಿಗೆ" ನೀಡಲಾಗುತ್ತದೆ.
ಇತ್ತೀಚೆಗೆ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಗುರುವಾರ ಐತಿಹಾಸಿಕ ಕ್ಷಣವೊಂದರಲ್ಲಿ (ಸ್ಥಳೀಯ ಕಾಲಮಾನ) ಪ್ರಧಾನಿ ನರೇಂದ್ರ ಮೋದಿಯವರಿಗೆ ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಆನರ್ ನೀಡಿ ಗೌರವಿಸಿದರು. ಇದು ಮಿಲಿಟರಿ ಅಥವಾ ನಾಗರಿಕ ಆದೇಶಗಳಲ್ಲಿ ಇದು ಅತ್ಯುನ್ನತ ಫ್ರೆಂಚ್ ಗೌರವವಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ವಿವಿಧ ದೇಶಗಳು ನೀಡಿದ ಅತ್ಯುನ್ನತ ಅಂತರರಾಷ್ಟ್ರೀಯ ಪ್ರಶಸ್ತಿಗಳು ಮತ್ತು ಗೌರವಗಳ ಸರಣಿ,
2016 ರಲ್ಲಿ ಸೌದಿ ಅರೇಬಿಯಾದಿಂದ ಆರ್ಡರ್ ಆಫ್ ಅಬ್ದುಲಜೀಜ್ ಅಲ್ ಸೌದ್
2016 ರಲ್ಲಿ ಅಫ್ಘಾನಿಸ್ತಾನದಿಂದ ಸ್ಟೇಟ್ ಆರ್ಡರ್ ಆಫ್ ಗಾಜಿ ಅಮೀರ್ ಅಮಾನುಲ್ಲಾ ಖಾನ್
2018 ರಲ್ಲಿ ಗ್ರ್ಯಾಂಡ್ ಕಾಲರ್ ಆಫ್ ಸ್ಟೇಟ್ ಆಫ್ ಪ್ಯಾಲೆಸ್ಟೈನ್ ಅವಾರ್ಡ್ ಪ್ರಶಸ್ತಿ
2019 ರಲ್ಲಿ ಯುಎಇಯಿಂದ ಆರ್ಡರ್ ಆಫ್ ಜಾಯೆದ್ ಅವಾರ್ಡ್ ಪ್ರಶಸ್ತಿ
2019 ರಲ್ಲಿ ರಷ್ಯಾದಿಂದ ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ಅವಾರ್ಡ್ ಪ್ರಶಸ್ತಿ
2019 ರಲ್ಲಿ ಮಾಲ್ಡೀವ್ಸ್ ನಿಂದ ಆರ್ಡರ್ ಆಫ್ ದಿ ಡಿಸ್ಟಿಂಗ್ವಿಶ್ಡ್ ರೂಲ್ ಆಫ್ ನಿಶಾನ್ ಇಝುದ್ದೀನ್
2019 ರಲ್ಲಿ ಬಹ್ರೇನ್‌ನಿಂದ ಕಿಂಗ್ ಹಮದ್ ಆರ್ಡರ್ ಆಫ್ ದಿ ರಿನೈಸಾನ್ಸ್
2020 ರಲ್ಲಿ ಯುಎಸ್ ಸರ್ಕಾರದಿಂದ ಲೀಜನ್ ಆಫ್ ಮೆರಿಟ್
2021 ರಲ್ಲಿ ಭೂತಾನ್‌ನಿಂದ ಆರ್ಡರ್ ಆಫ್ ದಿ ಡ್ರುಕ್ ಗಯಾಲ್ಪೋ
ಮೇ 2023 ರಲ್ಲಿ ರಿಪಬ್ಲಿಕ್ ಆಫ್ ಪಲಾವ್ ದಿಂದ ಎಬಾಕಲ್ ಪ್ರಶಸ್ತಿ
ಮೇ 2023 ರಲ್ಲಿ ಫಿಜಿಯ ಕಂಪೆನಿಯನ್ ಆಫ್ ಆರ್ಡರ್
ಮೇ 2023 ರಲ್ಲಿ ಪಪುವಾ ನ್ಯೂ ಗಿನಿಯಾದಿಂದ ಕಂಪೆನಿಯನ್ ಆಫ್ ಆರ್ಡರ್ ಲೋಗೊಹು
ಜೂನ್ 2023 ರಲ್ಲಿ ಈಜಿಪ್ಟ್ನಿಂದ ಆರ್ಡರ್ ಆಫ್ ದಿ ನೈಲ್
ಜುಲೈ 2023 ರಲ್ಲಿ ಫ್ರಾನ್ಸ್‌ನ ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಆನರ್
ಗ್ರೀಸ್ ನ ದಿ ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಆನರ್ ಇತ್ತೀಚಿನದು.