ಕಾಂಗ್ರೆಸ್ ಸರ್ಕಾರದ 100 ದಿನಗಳ ರಿಪೋರ್ಟ್ ಕಾರ್ಡ್ : ವೈಪಲ್ಯತೆಯ ಪಟ್ಟಿ ಮಾಡಿದ ಬಿಜೆಪಿ | JANATA NEWS
ಬೆಂಗಳೂರು : ಸಿಎಂ ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರ್ಕಾರ ರಚನೆಯಾಗಿ 100 ದಿನಗಳ ಸಂಭ್ರಮದಲ್ಲಿರುವಾಗಲೇ, ವಿರೋಧ ಪಕ್ಷ ಬಿಜೆಪಿ ಯು, ರಾಜ್ಯ ಕಾಂಗ್ರೆಸ್ ಸರ್ಕಾರದ 100 ದಿನಗಳ ರಿಪೋರ್ಟ್ ಕಾರ್ಡ್ ಎಂಬ ಶೀರ್ಷಿಕೆಯೊಂದಿಗೆ ವೈಪಲ್ಯತೆಯ ಪಟ್ಟಿ ಮಾಡಿದೆ.
ತನ್ನ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಜ್ಯ ಬಿಜೆಪಿ, "ಕಾಂಗ್ರೆಸ್ ಸರ್ಕಾರದ 100 ದಿನಗಳ ರಿಪೋರ್ಟ್ ಕಾರ್ಡ್.
📂 ವರ್ಗಾವಣೆ ದಂಧೆ.
🚰 ಕಲುಷಿತ ನೀರು ಸೇವನೆಯಿಂದ ರಾಜ್ಯದಲ್ಲಿ ಅಪಾರ ಸಾವು-ನೋವು.
🍚 ಮೋದಿ ಸರ್ಕಾರ ಉಚಿತವಾಗಿ ನೀಡುತ್ತಿದ್ದ 05 ಕೆಜಿ ಅಕ್ಕಿಗೂ ಕನ್ನ, ಜನತೆಗೆ ನಂಬಿಕೆ ದ್ರೋಹ.
🚍 ರಾಜ್ಯದ ಆಟೋ, ಟ್ಯಾಕ್ಸಿ, ಖಾಸಗಿ ಬಸ್ ಚಾಲಕ, ನಿರ್ವಾಹಕರಿಗೆ ನಿರುದ್ಯೋಗ ಭಾಗ್ಯ.
👨🌾 ನೂರು ದಿನಗಳಲ್ಲಿ ನೂರಕ್ಕೂ ಹೆಚ್ಚು ರೈತರು ಆತ್ಮಹತ್ಯೆ.
🌵 ರಾಜ್ಯದಲ್ಲಿ ಕಂಡು ಕೇಳರಿಯದಂತಹ ಭೀಕರ ಬರ.
🥷 ಉಗ್ರರಿಗೆ, ಸಮಾಜಘಾತುಕ ಶಕ್ತಿಗಳಿಗೆ ರಾಜ್ಯ ಈಗ ಸುರಕ್ಷಿತ ಸ್ಥಳ.
🚜⏳ ಮರಳು ಮಾಫಿಯಾಕ್ಕೆ ಪೊಲೀಸರನ್ನೆ ಬಲಿಕೊಟ್ಟ ದುರ್ಬಲ ಆಡಳಿತ.
🥚🤰 ಗರ್ಭಿಣಿ, ಬಾಣಂತಿಯರಿಗೆ ಕಳಪೆ ಮೊಟ್ಟೆ ವಿತರಣೆ.
🏭 ಅವೈಜ್ಞಾನಿಕವಾಗಿ ವಿದ್ಯುತ್ ದರ ಏರಿಸಿ, ರಾಜ್ಯದ ಸಣ್ಣ ಕೈಗಾರಿಕೆಗಳಿಗೆ ಹೊರ ರಾಜ್ಯಗಳಿಗೆ ಶಿಫ್ಟ್ ಆಗುವ ಭಾಗ್ಯ.
🚔 ಶಾಸಕರ ಮನೆಗೆ ಹಾಗೂ ಪೊಲೀಸ್ ಸ್ಟೇಶನ್‌ಗೆ ಬೆಂಕಿಯಿಟ್ಟ ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಬ್ರದರ್ಸ್‌ಗೆ ಬಿಡುಗಡೆಯ ಭಾಗ್ಯ .
👨🏻💼 ಸರ್ಕಾರಿ ಅಧಿಕಾರಿಗಳಿಗೆ ಹಣ ನೀಡುವಂತೆ ಕಿರುಕುಳ/ ಆತ್ಮಹತ್ಯೆ ಭಾಗ್ಯ.
✉ ಸಚಿವರ ಲಂಚಗುಳಿತನ ವಿರೋಧಿಸಿ, ಕಾಂಗ್ರೆಸ್ ಶಾಸಕರಿಂದಲೇ ದೂರು-ದುಮ್ಮಾನ.
🌺 ಕರ್ನಾಟಕದ ಜನತೆಯ ಕಿವಿ ಮೇಲೆ ಹೂವು.
ಈ ಮೂರು ತಿಂಗಳಲ್ಲಿ ಸರ್ಕಾರದ ಬಗ್ಗೆ ನೂರು ರೀತಿಯ ಅಸಮಾಧಾನ ವ್ಯಕ್ತವಾಗಿದೆ. ಸರ್ಕಾರವೊಂದು ಆಡಳಿತಕ್ಕೆ ಬಂದು ಮೂರು ತಿಂಗಳೊಳಗೆ ರಾಜ್ಯಾದ್ಯಂತ ಭಾರಿ ಪ್ರಮಾಣದಲ್ಲಿ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಿರುವುದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು." ಎಂದು ಆರೋಪ ಮಾಡಿದೆ.
ಕಾಂಗ್ರೆಸ್ ಸರ್ಕಾರದ 100 ದಿನಗಳ ರಿಪೋರ್ಟ್ ಕಾರ್ಡ್.
— BJP Karnataka (@BJP4Karnataka) August 29, 2023
📂 ವರ್ಗಾವಣೆ ದಂಧೆ.
🚰 ಕಲುಷಿತ ನೀರು ಸೇವನೆಯಿಂದ ರಾಜ್ಯದಲ್ಲಿ ಅಪಾರ ಸಾವು-ನೋವು.
🍚 ಮೋದಿ ಸರ್ಕಾರ ಉಚಿತವಾಗಿ ನೀಡುತ್ತಿದ್ದ 05 ಕೆಜಿ ಅಕ್ಕಿಗೂ ಕನ್ನ, ಜನತೆಗೆ ನಂಬಿಕೆ ದ್ರೋಹ.
🚍 ರಾಜ್ಯದ ಆಟೋ, ಟ್ಯಾಕ್ಸಿ, ಖಾಸಗಿ ಬಸ್ ಚಾಲಕ, ನಿರ್ವಾಹಕರಿಗೆ ನಿರುದ್ಯೋಗ ಭಾಗ್ಯ.
👨🌾 ನೂರು…