10 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ! | JANATA NEWS

ಬೆಂಗಳೂರು : 10 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಕಳೆದ ಜೂನ್ನಲ್ಲಿ 11ಐಎಎಸ್ ಅಧಿಕಾರಿಗಳನ್ನು ಹಾಗೂ ಜುಲೈ 1 ರಂದು 14 ಐಎಫ್ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿತ್ತು.
ಇನ್ನು ಜೂನ್ 6 ರಂದು 11 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಕರ್ನಾಟಕ ಸರ್ಕಾರ ಆದೇಶಿಸಿತ್ತು. ಕಪಿಲ್ ಮೋಹನ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಬೆಂಗಳೂರಿನ ಪ್ರವಾಸೋದ್ಯಮ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು.
ಈವರೆಗೆ ಈ ಹುದ್ದೆಯನ್ನು ಹೆಚ್ಚುವರಿಯಾಗಿ ಪಂಕಜ್ ಕುಮಾರ್ ಪಾಂಡೆ ಅವರು ನಿಭಾಯಿಸುತ್ತಿದ್ದರು. ಬಳಿಕ ಈ ಸೇವೆಯಿಂದ ಪಂಕಜ್ ಅವರನ್ನು ಮುಕ್ತಿಗೊಳಿಸಲಾಗಿತ್ತು. ಇದೀಗ ಮತ್ತೆ 10 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ಈ ಕುರಿತಂತೆ ಸರ್ಕಾರದ ಅಂಡರ್ ಸೆಕ್ರೆಟರಿ ಆಗಿರುವ ನಾಗಪ್ಪ ಎಸ್ ಪರೀತ್ ಆದೇಶವನ್ನು ಹೊರಡಿಸಿರುತ್ತಾರೆ.
ಪೃಥ್ವಿಕ್ ಶಂಕರ್ - ಎಸ್ ಪಿ ಕ್ರಿಮಿನಲ್ ಇನ್ವೆಷ್ಟಿಗೇಷನ್
ಕನಿಕ ಸಿಕ್ರಿವಾಲ್ - ಎಸ್ ಪಿ ಕ್ರಿಮಿನಲ್ ಇನ್ವೆಷ್ಟಿಗೇಷನ್
ಗುಂಜಾನ್ ಆರ್ಯ - ಎಸ್ ಪಿ ಇಂಟೆಲಿಜೆನ್ಸ್
ಕುಶಾಲ್ ಚೌಕ್ಸೆ - ಎಸ್ ಪಿ ಇಂಟೆಲಿಜೆನ್ಸ್
ಸಿದ್ದಾರ್ಥ್ ಗೋಯಲ್- ಡಿಸಿಪಿ ಲಾ ಅಂಡ್ ಆರ್ಡರ್ ಮಂಗಳೂರು
ರೋಹನ್ ಜಗದೀಶ್ - ಕಮಿಷನರ್ ಆಫ್ ಪೊಲೀಸ್ ಲಾ ಅಂಡ್ ಆರ್ಡರ್ ಬೆಳಗಾವಿ
ಶಿವಾನ್ಷು ರಜಪೂತ್ - ಎಸ್ ಪಿ ಆಂಟಿ ಟೆರರಿಸ್ಟ್ ಸೆಂಟರ್ ಬೆಂಗಳೂರು
ಜೀತೇಂದ್ರ ಕುಮಾರ್ ದಯಾಮ - ಎಸ್ ಪಿ ನಕ್ಸಲ್ ಪೋರ್ಸ್ ಉಡುಪಿ
ದೀಪನ್ ಎಂ ಎನ್- ಕರ್ನಾಟಕ ಸ್ಟೇಟ್ ರಿಸರ್ವ್
ಮಿಥುನ್ - ಎಸ್ ಪಿ ವೈರ್ಲೆಸ್ ಬೆಂಗಳೂರು