ಡಿವೈಡರ್ ಗೆ ಕಾರು ಢಿಕ್ಕಿಯಾಗಿ ಇಬ್ಬರ ದುರ್ಮರಣ, ಓರ್ವ ಮಹಿಳೆಗೆ ಗಂಭೀರ ಗಾಯ | JANATA NEWS

ಚಿಕ್ಕಮಗಳೂರು : ನಿಯಂತ್ರಣ ತಪ್ಪಿ ಕಾರೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದು, ಈ ವೇಳೆ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೋರ್ವ ಮಹಿಳೆ ಗಂಭೀರ ಗಾಯಗೊಂಡಿರುವ ಘಟನೆ ಚಿಕ್ಕಮಗಳೂರಿನ ಕಣಿವೆ ಕ್ರಾಸ್ ಬಳಿ ನಡೆದಿದೆ.
ಢಿಕ್ಕಿಯಾದ ರಭಸಕ್ಕೆ ಕಾರಿನಲ್ಲಿದ್ದ ನಿರಂಜನ್ (42) ಚೆನ್ನಮ್ಮ (67) ಸ್ಥಳದಲ್ಲೇ ಸಾವನ್ನಪ್ಪಿದ್ದು, ರತ್ನಮ್ಮ ಎಂಬ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಾರು ಚಿಕ್ಕಮಗಳೂರಿನಿಂದ ಕಡೂರಿನ ಕಡೆಗೆ ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ. ಮೃತ ದುರ್ದೈವಿಗಳು ಚಿಕ್ಕಮಗಳೂರಿನ ವಿಜಯಪುರ ಬಡಾವಣೆ ನಿವಾಸಿಗಳಾಗಿದ್ದು ನಿರಂಜನ್ ಖಾಸಗಿ ಆಸ್ಪತ್ರೆಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು.
ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
RELATED TOPICS:
English summary :Two killed, one woman seriously injured after car collides with divider