ದೇಶದ ಹೆಸರು ಬದಲಾವಣೆಗಿಂತ ಜನರ ಬದುಕು ಬದಲಾವಣೆ ಮುಖ್ಯ | JANATA NEWS

ಬೆಂಗಳೂರು : ದೇಶದ ಹೆಸರು ಬದಲಾವಣೆ ಮಾಡಿದರೆ ಏನು ಲಾಭ? ದೇಶದ ಜನರ ಜೀವನದಲ್ಲಿ ಬದಲಾವಣೆ ಆಗುವುದು ಮುಖ್ಯ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ದೇಶದ ಎಲ್ಲ ಜನರಿಗೂ ಅನ್ನ, ಉದ್ಯೋಗ, ಮನೆ ಸಿಕ್ಕರೆ ಅದನ್ನು ಬದಲಾವಣೆ ಎನ್ನಬಹುದು. ಕಳೆದ 9 ವರ್ಷಗಳಲ್ಲಿ ಜನರ ಆದಾಯ ದುಪಟ್ಟಾಯಿತೇ, 15 ಲಕ್ಷ ಹಣ ಬ್ಯಾಂಕ್ ಖಾತೆಗೆ ಬಂದಿದೆಯೇ? ಇಲ್ಲ. ಒಂದೇ ಒಂದು ಅಕ್ಕಿಕಾಳು ಕಡಿಮೆ ಕೊಟ್ಟರು ಬಿಡುವುದಿಲ್ಲ ಎಂದು ಬಿಜೆಪಿಯವರು ನಮ್ಮನ್ನು ಪ್ರಶ್ನೆ ಮಾಡುತ್ತಿದ್ದರು, ಆದರೆ ಅವರು ಕೊಟ್ಟ ಮಾತನ್ನು ಒಂದಾದರೂ ಉಳಿಸಿಕೊಂಡಿದ್ದಾರೆಯೇ? ಎಂದು ಪ್ರಶ್ನಿಸಿದರು
ಒಂದೇ ಒಂದು ಅಕ್ಕಿಕಾಳು ಕಡಿಮೆ ಕೊಟ್ಟರೂ ಬಿಡುವುದಿಲ್ಲ ಎಂದು ಬಿಜೆಪಿಯವರು (BJP) ನಮ್ಮನ್ನು ಪ್ರಶ್ನೆ ಮಾಡುತ್ತಿದ್ದರು. ಆದರೆ ಅವರು ಕೊಟ್ಟ ಮಾತನ್ನು ಒಂದಾದರೂ ಉಳಿಸಿಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದರು.
ಶ್ರೀಮಂತರು, ದೊಡ್ಡ ಉದ್ಯಮಿಗಳು ದೇಶಬಿಟ್ಟು ಹೋಗುತ್ತಿದ್ದಾರೆ. 12 ಲಕ್ಷ ಪಾಸ್‌ಪೋರ್ಟ್‌ಗಳನ್ನು ಸರ್ಕಾರದ ವಶಕ್ಕೆ ನೀಡಿ ಈ ದೇಶದ ಕೋಟ್ಯಾಧಿಪತಿಗಳು ಬೇರೆ ದೇಶದ ಪೌರತ್ವವನ್ನು ತೆಗೆದುಕೊಂಡಿದ್ದಾರೆ. ನಮ್ಮ ದೇಶದ ಹಣ ಹೊರಗಡೆ ಹೋಗುತ್ತಿದೆ. ಹೆಸರು ಬದಲಾವಣೆಯಿಂದ ಏನೂ ಲಾಭವಿಲ್ಲ.
ನಮ್ಮ ಆಚಾರ- ವಿಚಾರ ಬದಲಾವಣೆಯಾಗಬೇಕು. ಸರ್ಕಾರ ಜನರ ಕಲ್ಯಾಣ ಮಾಡುವ ಹೊಸ ಕಾನೂನುಗಳನ್ನು ತರಬೇಕು. ನಮ್ಮ ಯುಪಿಎ ಸರ್ಕಾರ ಇದ್ದಾಗ ಮಾಹಿತಿ ಹಕ್ಕು, ಆರ್‌ಟಿಐ, ನರೇಗಾ, ಆಹಾರ ಭದ್ರತಾ ಕಾಯ್ದೆಗಳನ್ನು ಜಾರಿಗೆ ತಂದೆವು. ಇಂತಹ ಯೋಜನೆಗಳು ಬಿಜೆಪಿಯವರಿಗೆ ಬರುವುದಿಲ್ಲವೇ ಎಂದು ಕಿಡಿಕಾರಿದರು.