ಗಣೇಶ ಚತುರ್ಥಿಯಲ್ಲಿ ಶಬ್ದ ಮಾಲಿನ್ಯ : ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ದ್ವಂದ ನೀತಿ ವಿರುದ್ಧ ಯತ್ನಾಳ್ ಟೀಕೆ | JANATA NEWS
ಬೆಂಗಳೂರು : ಗಣೇಶ ಚತುರ್ಥಿಯಲ್ಲಿ ಶಬ್ದ ಮಾಲಿನ್ಯ ಕುರಿತು ಸಂದೇಶವಿರುವ ಜಾಹೀರಾತನ್ನು ಪ್ರಕಟಿಸಿರುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಬಿಜೆಪಿ ನಾಯಕ ಹಾಗೂ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ತರಾಟೆಗೆ ತೆಗೆದುಕೊಂಡಿದ್ದಾರೆ.
ನಿಮ್ಮ ಜಾಗೃತಿ, ನೀತಿ, ನಿಯಮ, ನಿಬಂಧನೆಗಳು ಹಿಂದೂ ಹಬ್ಬಗಳಿಗಷ್ಟೇ...ಡೋಂಗಿತನದ ಪರಮಾವಧಿ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ದ್ವಂದ ನೀತಿಯನ್ನು ಕಟುವಾಗಿ ಟೀಕಿಸಿದ್ದಾರೆ.
ಈ ಕುರಿತು ಬರೆದಿರುವ ಅವರು, "ಬೆಳ್ಳಂ ಬೆಳಗ್ಗೆ ಸಮುದಾಯವೊಂದು ಕರ್ಕಶವಾಗಿ ಐದು ಬಾರಿ ಲೌಡ್ ಸ್ಪೀಕರ್ ಮೂಲಕ ಕೂಗಿದಾಗ ತಮ್ಮ ಕಳ-ಕಳಿ, ಕಾಳಜಿ, ಅರಿವು ಮೂಡಿಸುವಿಕೆ ಕಾಣ ಸಿಗಲಿಲ್ಲ.
'ಅವರ' ಹಬ್ಬದಲ್ಲಿ ರಸ್ತೆಯಲ್ಲ ರಕ್ತ ಸಿಕ್ತವಾದಾಗ, ಆರೋಗ್ಯದ ಕಾಳಜಿ ಮೂಡಲಿಲ್ಲ. ಚೌತಿ ಬಂದಾಗಷ್ಟೇ ನಿಮ್ಮ ಜಾಗೃತಿ, ನೀತಿ, ನಿಯಮ, ನಿಬಂಧನೆಗಳು ಹಿಂದೂ ಹಬ್ಬಗಳಿಗಷ್ಟೇ...ಡೋಂಗಿತನದ ಪರಮಾವಧಿ. ಗಣೇಶ ನಿಮಗೆ ಒಳ್ಳೆಯ ಬುದ್ದಿಯನ್ನು ನೀಡಲಿ", ತಮ್ಮ ಅಧಿಕೃತ ಎಕ್ಸ್ ಖಾತೆಯಿಂದ ಬರೆದಿದ್ದಾರೆ.
ಬೆಳ್ಳಂ ಬೆಳಗ್ಗೆ ಸಮುದಾಯವೊಂದು ಕರ್ಕಶವಾಗಿ ಐದು ಬಾರಿ ಲೌಡ್ ಸ್ಪೀಕರ್ ಮೂಲಕ ಕೂಗಿದಾಗ ತಮ್ಮ ಕಳ-ಕಳಿ, ಕಾಳಜಿ, ಅರಿವು ಮೂಡಿಸುವಿಕೆ ಕಾಣ ಸಿಗಲಿಲ್ಲ.
— Basanagouda R Patil (Yatnal) (@BasanagoudaBJP) September 14, 2023
'ಅವರ' ಹಬ್ಬದಲ್ಲಿ ರಸ್ತೆಯಲ್ಲ ರಕ್ತ ಸಿಕ್ತವಾದಾಗ, ಆರೋಗ್ಯದ ಕಾಳಜಿ ಮೂಡಲಿಲ್ಲ.
ಚೌತಿ ಬಂದಾಗಷ್ಟೇ ನಿಮ್ಮ ಜಾಗೃತಿ, ನೀತಿ, ನಿಯಮ, ನಿಬಂಧನೆಗಳು ಹಿಂದೂ ಹಬ್ಬಗಳಿಗಷ್ಟೇ...ಡೋಂಗಿತನದ… pic.twitter.com/hlYdTZx1yk