ನುಹ್ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಮಮ್ಮನ್ ಖಾನ್ ಬಂಧನ | JANATA NEWS

ನವದೆಹಲಿ : ಆಗಸ್ಟ್‌ನಲ್ಲಿ ನುಹ್‌ನಲ್ಲಿ ಭುಗಿಲೆದ್ದ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಮಮ್ಮನ್ ಖಾನ್ ಅವರನ್ನು ಪೊಲೀಸರು ಬಂಧಿಸಿದ್ದು, ಕೋರ್ಟ್ ನಿಂದ ಎರಡು ದಿನಗಳ ಪೊಲೀಸ್ ರಿಮಾಂಡ್‌ಗೆ ಕಳುಹಿಸಲಾಗಿದೆ.
ಖಾನ್ ಅವರು ಮೇವಾತ್‌ನ ಫಿರೋಜ್‌ಪುರ ಝಿರ್ಕಾ ಕ್ಷೇತ್ರದ ಶಾಸಕರಾಗಿದ್ದು, ನುಹ್‌ನ ನಗೀನಾ ಬರ್ಕಾಲಿ ಚೌಕ್‌ನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿದೆ.
ಮಾಹಿತಿಯ ಪ್ರಕಾರ, ನುಹ್ ಹಿಂಸಾಚಾರದ ಸಂದರ್ಭದಲ್ಲಿ ಖಾನ್ ಸಾಮಾಜಿಕ ಮಾಧ್ಯಮದಲ್ಲಿ ಪ್ರಚೋದನಕಾರಿ ಪೋಸ್ಟ್ ಅನ್ನು ಪೋಸ್ಟ್ ಮಾಡಿದ್ದರು.
ಏತನ್ಮಧ್ಯೆ, ಜಿಲ್ಲೆಯ ನುಹ್ ಹಾಗೂ ನ್ಯಾಯಾಲಯಕ್ಕೆ ಹೋಗುವ ರಸ್ತೆಗಳಲ್ಲಿ ಪೊಲೀಸರ ಭಾರೀ ಪಡೆ ನಿಯೋಜಿಸಲಾಗಿದೆ.
ಹಿಂಸಾಚಾರಕ್ಕೆ ಕೆಲವು ಗಂಟೆಗಳ ಮೊದಲು ಕಾಂಗ್ರೆಸ್ ಶಾಸಕರು ಸ್ಥಳದಲ್ಲಿದ್ದರು ಎಂದು ಹೇಳಲಾಗಿದೆ. ಗಡಿಯಾಚೆಯಿಂದ ನಡೆಸಲಾಗುತ್ತಿರುವ ಕೆಲವು ಟೆಲಿಗ್ರಾಂ ಚಾನೆಲ್‌ಗಳು ಸಕ್ರಿಯವಾಗಿದ್ದು, ಅವುಗಳ ಮೂಲಕ ಪ್ರಚೋದನಕಾರಿ ಕೆಲಸ ಮಾಡುತ್ತಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.