ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ರಾಜಕೀಯ ಮಾಡುತ್ತಿದೆ - ಸಂಸದ ಸೂರ್ಯ | JANATA NEWS

ಬೆಂಗಳೂರು : ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಗಂಭೀರ ಆರೋಪ ಮಾಡಿದ್ದಾರೆ
ಕಳೆದ ಎರಡು ಮೂರು ತಿಂಗಳಲ್ಲಿ ನಡೆದ ಕಾವೇರಿ ಪ್ರಾಧಿಕಾರದ ಸಭೆಗಳಲ್ಲಿ ವಿಶೇಷವಾಗಿ 24 ಮತ್ತು 25ನೇ ಸಭೆಗಳಲ್ಲಿ ರಾಜ್ಯದ ಸಂಸದರು ರಾಜ್ಯದ ವಸ್ತುನಿಷ್ಠ ಸ್ಥಿತಿ ಬಗ್ಗೆ ರಾಜ್ಯ ಸರ್ಕಾರ ನೀಡಿದಂತ ವಾದಕ್ಕೆ ಧ್ವನಿಗೂಡಿಸಿ ರಾಜ್ಯದ ಪರವಾಗಿ ಮಾತನಾಡಿದ್ದೇವೆ
ಪ್ರಹ್ಲಾದ್ ಜೋಶಿ ಅವರ ನೇತೃತ್ವದಲ್ಲಿ ರಾಜ್ಯದ 25 ಸಂಸದರು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಕಾವತ್ ಅವರನ್ನು ಅವರ ಕಚೇರಿಯಲ್ಲಿ 15 20 ದಿನಗಳ ಹಿಂದೆ ಭೇಟಿ ಮಾಡಿದ್ವಿ ಹಾಗೂ ಸ್ವಲ್ಪ ದಿನದ ಹಿಂದೆ ಸಂಸತ್ ಅದಿವೇಶನ ಸಂದರ್ಭದಲ್ಲಿಯೂ ಸಹ ಅವರನ್ನು ಭೇಟಿ ಮಾಡಿದ್ವಿ
ಸಂಸದರ ಸಭೆಯನ್ನು ಮಾನ್ಯ ಮುಖ್ಯಮಂತ್ರಿಗಳು ಹಾಗೂ ಮಾನ್ಯ ಉಪ ಮುಖ್ಯಮಂತ್ರಿಗಳು ನವದೆಹಲಿಯಲ್ಲಿ ಕರೆದಾಗ, ಸರೋಪಕ್ಷ ಸಭೆಯಲ್ಲಿ ರಾಜ್ಯ ಸರ್ಕಾರ ತೆಗೆದುಕೊಳ್ಳುವ ಎಲ್ಲಾ ನಿರ್ಧಾರಕ್ಕೆ ನಾವು ಕಟಿಬಿದ್ದಾಗಿ ಜೊತೆಯಲ್ಲಿ ಇದ್ದೀವಿ ಅಂತ ಮಾತು ಕೊಟ್ಟಿದ್ವಿ. ಆ ಸಭೆ ಆದ ದಿನವೇ ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿಗಳು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ನೇತೃತ್ವದಲ್ಲಿ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿದ್ದೆವು
ಸರ್ವ ಪಕ್ಷಗಳ ಸಭೆಯಲ್ಲಿ ಎಲ್ಲಾ ಸಂಸದರು ಇರುವಾಗ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ಪ್ರತಿನಿಧಿಗಳು ರಾಜ್ಯ ಸರ್ಕಾರಕ್ಕೆ ಸಪೋರ್ಟ್ ಮಾಡುತ್ತಿದ್ದಾರೆ ಎಂದು ಆನ್ ರೆಕಾರ್ಡ ಹೇಳಿದ್ದರು ಎಂದು ಸಂಸದ ತೇಜಸ್ವಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ
ನಾನು ಬೇಕೆಂದರೆ ಚಾಲೆಂಜ್ ಮಾಡುತ್ತೇನೆ ಅವರಿಗೆ ಎಲ್ಲಾ ಪಕ್ಷದ ಸಂಸದರು ಇದ್ದರು ಸರ್ಕಾರದ ಬೇರೆ ಬೇರೆ ಸಚಿವರು ಇದ್ದರು, ಹೇಳಲಿಲ್ಲವೇ ನೀವು ಅವತ್ತು? ಎಂದು ಪ್ರಶ್ನಿಸಿದ ಸಂಸದ ಸೂರ್ಯ ಅವರು ಮುಖ್ಯಮಂತ್ರಿಗಳು ಸಭೆ ಮುಗಿದ ಬಳಿಕ ಮಾಧ್ಯಮ ಗೋಷ್ಠಿ ನಡೆಸಿ ರಾಜ್ಯ ಸರ್ಕಾರದಲ್ಲಿ ನಾವು ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ ಎಂಪಿಗಳು ಏನು ಮಾಡುತ್ತಿಲ್ಲ ಅನ್ನುವಂತಹ ಸುಳ್ಳು ಹೇಳಿಕೆ ನೀಡುವ ರಾಜಕೀಯ ಮಾಡಬಾರದು ಎಂದು ಸೂರ್ಯ ರಾಜ್ಯ ಸರ್ಕಾರಕ್ಕೆ ಕಿವಿ ಹಿಂಡಿ ಬುದ್ದಿ ಹೇಳಿದ್ದಾರೆ