ಟ್ರಿಬಿನಲ್ ಹೇಳಿದ್ದಕ್ಕಿಂತ ಜಾಸ್ತಿನೇ ನೀರು ರಾಜ್ಯ ಹರಿಸುತ್ತಿರುವಾಗ ಕೇಂದ್ರ ಮಧ್ಯಪ್ರವೇಶಿಸುವುದು ಹೇಗೆ? | JANATA NEWS

ರಾಮನಗರ : ಟ್ರಿಬ್ಯುನಲ ಹೇಳಿದ್ದಕ್ಕಿಂತ ಜಾಸ್ತಿ ಹಾಗೂ ಸುಪ್ರೀಂ ಕೋರ್ಟ್ ಹೇಳುವುದಕ್ಕಿಂತ ಮೊದಲೇ ನಿರಂತರ ನೀರು ಹರಿಸುತ್ತಿರುವಾಗ ಕೇಂದ್ರ ಸರ್ಕಾರ ಮಧ್ಯಪ್ರವೇಶಸಲು ಹೇಗೆ ಸಾಧ್ಯ? ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಪ್ರಶ್ನಿಸಿದ್ದಾರೆ.
ಎಲ್ಲೋ ಒಂದು ಕಡೆ ನಮಗೆ ಈ ಸಲ ನೀರು ಬೇಕು ಎಂದು ಹಠ ಹಿಡಿದು ನಿಂತರೆ ಎರಡು ಕಡೆ ಡೆಡ್ಲಾಕ್ ಆದ ಸಂದರ್ಭದಲ್ಲಿ ಆಗ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸುವದರಲ್ಲಿ ಒಂದು ಅರ್ಥ ಇದೆ. ಇಲ್ಲಿ ನೀವು ನೀರು ಬಿಡುತ್ತಾನೆ ಇರುತ್ತೀರ. ನೀವು ನಿಮ್ ಪಾಡಿಗೆ ಚೆನ್ನಾಗಿರ್ತಿವಿ ನಾವು ಅಂದುಕೊಂಡು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಅಂದರೆ ಇದು ಗಲಾಟೆ ಹುಟ್ಟಿ ಹಾಕುವ ಪ್ರಯತ್ನ ಎಂದು ನನಗೆ ಅನಿಸುತ್ತದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ
English summary :When state Giving more water then the Tribunal order how centre can interfere?