ತಲ್ವಾರ್ ಪರ್ಮಿಷನ್ ಬೇಡವೇ? ಮತಾಂಧರ ಬೆನ್ನಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ - ಶಿವಮೊಗ್ಗ ಶಾಸಕರು | JANATA NEWS

ಶಿವಮೊಗ್ಗ : ಶಿವಮೊಗ್ಗದಲ್ಲಿ ನಡೆದ ಗಲಭೆಯ ವೇಳೆ ಹಿಂದೂಗಳ ಮನೆ ಮೇಲೆ ಗುರಿಯಿಟ್ಟು ದಾಳಿ ಮಾಡಿದ್ದಾರೆ. ಪ್ರಚೋದನಕಾರಿ ಬ್ಯಾನರ್ ಮೂಲಕ ಮತಾಂಧರು ಶಾಂತಿ ಕದಡಿದ್ದಾರೆ ಎಂದು ಶಿವಮೊಗ್ಗ ಶಾಸಕರಾದ ಎಸ್.ಎನ್. ಚೆನ್ನಬಸಪ್ಪ ಆರೋಪ ಮಾಡಿದ್ದಾರೆ.
ಪ್ರಚೋದನೆಗೆ ಏನೆಲ್ಲಾ ನಡೆದಿದೆ ಅಲ್ಲಿ, ಮುಸ್ಲಿಂ ಸಾಮ್ರಾಜ್ಯ ಎಂದು ಹಾಕಲಾಗಿದೆ. ಟಿಪ್ಪು ಬಗ್ಗೆ ಸಿಕ್ಕಾಪಟ್ಟೆ ಬ್ಯಾನರ್ ಗಳನ್ನು ಹಾಕಲಾಗಿದೆ. ಅವರಿಗೆ ಎಲ್ಲಾದಕ್ಕೂ ಪರ್ಮಿಷನ್ ಸಿಕ್ಕಿದೆ. ಭಾರತದ ಭೂಪಟದ ಮಧ್ಯ ಔರಂಗಜೇಬ್ ಅದನ್ನು ಹಸಿರು ಬಣ್ಣದಲ್ಲಿ ಹಾಕಲಾಗಿದೆ, ಎಂದು ಶಾಸಕರು ಆರೋಪ ಮಾಡಿದ್ದಾರೆ.
ಗಣೇಶ ವಿಸರ್ಜನೆಗೆ ಪರ್ಮಿಷನ್ ತೆಗೆದುಕೊಳ್ಳಬೇಕು ಹಿಂದುಗಳ ಎಲ್ಲಾ ಮೆರವಣಿಗೆಗೆ ಪರ್ಮಿಷನ್ ತೆಗೆದುಕೊಳ್ಳಬೇಕು. ಆದರೆ, ತಲ್ವಾರ್ ಇಡುವುದಕ್ಕೆ ಪರ್ಮಿಷನ್ ಬೇಡವೇ? ಮತಾಂಧರ ಬೆನ್ನಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ನಿಂತಂತಿದೆ, ಎಂದು ಶಾಸಕರು ಹೇಳಿದ್ದಾರೆ.
ಶಿವಮೊಗ್ಗ ಸಂಸದರಾದ ಬಿ ವೈ ರಾಘವೇಂದ್ರ ಅವರು ಕೂಡ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ನೆನ್ನೆ ಈದ್ ಸಂದರ್ಭದಲ್ಲಿ ಶಿವಮೊಗ್ಗದ ಕೆಲವು ಪ್ರದೇಶಗಳಲ್ಲಿ ಪ್ರಚೋದನಾಕಾರಿ ಅಲಂಕಾರಗಳು-ಮೆರವಣಿಗೆಗಳು ಆಗಿದ್ದು ತೀವ್ರ ಖಂಡನೀಯ.
ಹಿಂದೆಂದೂ ಹೀಗೆ ತಲವಾರುಗಳ ಸ್ವಾಗತ ಕಮಾನುಗಳು, ಕೆರಳಿಸುವಂತಹ ಕಟೌಟುಗಳು ಶಿವಮೊಗ್ಗದಲ್ಲಿ ಕಂಡಿರಲಿಲ್ಲ.
ಇವೆಲ್ಲವೂ ತಲೆಯೆತ್ತುವವರೆಗೂ ಅಧಿಕಾರಿಗಳೇನು ಮಾಡುತ್ತಿದ್ದರು? ಸರ್ಕಾರ ಏನು ಮಾಡುತ್ತಿತ್ತು? ಗುಪ್ತಚರ ಇಲಾಖೆಗಿದು ಗೊತ್ತಾಗಲಿಲ್ಲವೆ?
ಮತೀಯವಾದದಲ್ಲಿ ಈ ಸರ್ಕಾರದ ಧೋರಣೆಯಂತೂ ನಮಗೆ ಗೊತ್ತೇ ಇದೆ; ಆದರೆ ಅಧಿಕಾರಿಗಳೂ ಇಂಥದ್ದಕ್ಕೆ ಅವಕಾಶ ಮಾಡಿಕೊಟ್ಟಿರುವುದು ನೋವಿನ ಸಂಗತಿ. ಜೊತೆಗೆ, ಗಲಭೆ ಸಂದರ್ಭದಲ್ಲಿ ರಕ್ಷಣೆಗೆ ಹೋದಂಥ ಕೆಲವು ಹಿಂದೂ ಕಾರ್ಯಕರ್ತರುಗಳ ಮೇಲೆ ವಿನಾಕಾರಣ ಕೇಸು ದಾಖಲಿಸಿರುವುದಂತೂ ಅನ್ಯಾಯದ ಪರಮಾವಧಿ.
ಅದನ್ನು ಸ್ಪಷ್ಟಪಡಿಸಿ ಮಾತುಕತೆ ಆಡುವುದಕ್ಕಾಗಿ ಶಿವಮೊಗ್ಗದ ಶಾಸಕರೂ ಸೇರಿದಂತೆ ಇವತ್ತು ನಾವೆಲ್ಲರೂ ಜಿಲ್ಲೆಯ SP ಅವರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿದೆವು. ಶಾಂತಿಗೆ ಭಂಗ ಬರದ ಹಾಗೆ ಕ್ರಮ ತೆಗೆದುಕೊಳ್ಳಬೇಕು, ತಪ್ಪಿತಸ್ಥರನ್ನು ಜೈಲಿಗಟ್ಟಬೇಕು, ಅಮಾಯಕರನ್ನು ತಕ್ಷಣ ಬಿಡುಗಡೆ ಮಾಡಬೇಕು ಅಂತ ಒತ್ತಾಯಿಸಿ ಬಂದೆವು, ಎಂದು ಸಂಸದರು ಎಕ್ಸ್ ನಲ್ಲಿ ಹೇಳಿದ್ದಾರೆ.