600 ರೂಪಾಯಿಗೆ ಸಿಲಿಂಡರ್ : ಮೋದಿ ಸರ್ಕಾರದ ಹೊಸ ನಿರ್ಧಾರ | JANATA NEWS
ನವದೆಹಲಿ : ಪ್ರಧಾನಮಂತ್ರಿಯ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಎಂದು ಪ್ರಮುಖ ನಿರ್ಧಾರ ಮಾಡಿದ್ದು, ಎಲ್‌ಪಿಜಿ ಗ್ಯಾಸ್‌ಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು 100 ರೂಪಾಯಿ ಏರಿಸಿದ್ದು.
ಅದರಂತೆ ಇಲ್ಲಿಯವರೆಗೂ 200 ರೂಪಾಯಿ ಸಬ್ಸಿಡಿ ಪಡೆಯುತ್ತಿದ್ದವರು, ಇನ್ನು ಮುಂದೆ 300 ರೂಪಾಯಿ ಸಬ್ಸಿಡಿ ಪಡೆದುಕೊಳ್ಳಲಿದ್ದಾರೆ. ಇದರಿಂದಾಗಿ ಉಜ್ವಲ ಯೋಜನೆಯ ಫಲಾನುಭವಿಗಳು 600 ರೂಪಾಯಿಗೆ ಸಿಲಿಂಡರ್ ಪಡೆದುಕೊಳ್ಳಲಿದ್ದಾರೆ. ಇದರಲ್ಲಿ 300 ರೂಪಾಯಿ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ನೀಡುತ್ತದೆ. ಈ ಕುರಿತಾಗಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಮಾಹಿತಿ ನೀಡಿದರು.
ಇದರಿಂದಾಗಿ ದೇಶದ ಬಡವರಿಗೆ 600 ರೂಪಾಯಿಗೆ ಅಡುಗೆ ಸಿಲಿಂಡರ್ ಸಿಗಲಿದೆ.
English summary :Gas cylinder for Rs 600 new decision by Modi government