ರಾಜ್ಯ ಗೃಹ ಸಚಿವರು ಜವಾಬ್ದಾರಿ ಮರೆತು ವಿದೇಶಕ್ಕೆ ಹಾರಿರೋದು ನಾಚಿಕೆಗೇಡಿ- ಕಟೀಲ್ | JANATA NEWS
ಬೆಂಗಳೂರು : ಶಿವಮೊಗ್ಗ ಗಲಭೆ ಬೆನ್ನಲ್ಲೇ ರಾಜ್ಯ ಗೃಹ ಸಚಿವರಾದ ಜಿ ಪರಮೇಶ್ವರ್ ಅವರ ವಿದೇಶ ಪ್ರವಾಸದ ನಡೆಯನ್ನು ರಾಜ್ಯ ಬಿಜೆಪಿ ಅಧ್ಯಕ್ಷರು ತೀವ್ರ ವಾಗಿ ತರಾಟೆ ತೆಗೆದುಕೊಂಡಿದ್ದಾರೆ.
ಈ ಕುರಿತು ದೃಶ್ಯ ಮಾಧ್ಯಮದ ವರದಿಯೊಂದನ್ನು ಪೋಸ್ಟ್ ಮಾಡಿರುವ ನಳಿನ್ ಕುಮಾರ್ ಕಟೀಲ್ ಅವರು, ಶಿವಮೊಗ್ಗದಲ್ಲಿ ಅಮಾಯಕ ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಗಲಭೆ ನಡೆದರೂ, ಪೋಲೀಸರ ಮೇಲೆ ಕಲ್ಲು ತೂರಿದರೂ, ಕಾನೂನು ಸುವ್ಯವಸ್ಥೆ ಕಾಪಾಡಬೇಕಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತ್ರ 'ನನಗೂ ಇದಕ್ಕೂ ಸಂಬಂಧವೇ ಇಲ್ಲ' ಎಂಬಂತೆ ನಡೆದುಕೊಳ್ಳುತ್ತಿದ್ದಾರೆ.
ಈಗ, ತಮ್ಮ ಜವಾಬ್ದಾರಿ ಮರೆತು ವಿದೇಶಕ್ಕೆ ಹಾರಿದ್ದು ನಾಚಿಕೆಗೇಡಿನ ಸಂಗತಿ., ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
English summary :State Home Min. Foreign tour neglecting responsibilities in shameful- Katil