ಹವಾನಿಯಂತ್ರಣ ರಹಿತ ಸ್ಲೀಪರ್ ಬಸ್‌ಗಳಿಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ | JANATA NEWS
ಬೆಂಗಳೂರು : ರಾಜ್ಯ ಸಾರಿಗೆ ಸಂಸ್ಥೆಯಾದ ಕೆಎಸ್‌ಆರ್‌ಟಿಸಿ ಇದೇ ಮೊದಲ ಬಾರಿಗೆ ಹವಾನಿಯಂತ್ರರಹಿತ ಬಸ್ ‘ಪಲ್ಲಕ್ಕಿ’ ಯನ್ನು ಹೊಸ ಬ್ರ್ಯಾಂಡ್ ಮಾಡಿ ರಸ್ತೆಗಿಳಿಸುತ್ತಿದೆ. ರಾಜ್ಯ ಸಾರಿಗೆಯ ಪಲ್ಲಕ್ಕಿ ಕ್ಲಾಸ್ ಬಸ್ ಸೇವೆ ಗಳು ಇಂದಿನಿಂದ ಆರಂಭವಾಗಿದೆ.
ವಿಧಾನಸೌಧದ ಮುಂಭಾಗ ಇಂದು ರಾಜ್ಯ ಸಾರಿಗೆಯ ಪಲ್ಲಕ್ಕಿ ಕ್ಲಾಸ್ ಬಸ್ ಗಳು ಸೇರಿದಂತೆ 100 ನೂತನ ಕರ್ನಾಟಕ ಸಾರಿಗೆ ಬಸ್ ಗಳು ಹಾಗೂ 40 ಹವಾನಿಯಂತ್ರಣ ರಹಿತ ಸ್ಲೀಪರ್ ಬಸ್‌ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.
English summary :CM Siddaramaiah launched non-air-conditioned sleeper buses