ಪಠಾಣ್‌ಕೋಟ್ ದಾಳಿಯ ಮಾಸ್ಟರ್‌ಮೈಂಡ್ ಉಗ್ರ ಶಾಹಿದ್ ಲತೀಫ್ ಪಾಕ್ ನಲ್ಲಿ ತಟಸ್ಥ | JANATA NEWS
ನವದೆಹಲಿ : ಪಠಾಣ್‌ಕೋಟ್ ಉಗ್ರರ ದಾಳಿಯ ಮಾಸ್ಟರ್‌ಮೈಂಡ್ ಜೈಶ್-ಇ-ಮೊಹಮ್ಮದ್ ಉಗ್ರ ಶಾಹಿದ್ ಲತೀಫ್‌ನನ್ನು ಇಂದು ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದು ಹಾಕಿದ್ದಾರೆ.
2016 ರಲ್ಲಿ ಭಾರತೀಯ ವಾಯುಪಡೆ (ಐಎಎಫ್) ನೆಲೆಯ ಮೇಲಿನ ಪಠಾಣ್‌ಕೋಟ್ ದಾಳಿಯಲ್ಲಿ ನಾಲ್ವರು ದಾಳಿಕೋರರು ಮತ್ತು ಇಬ್ಬರು ಭದ್ರತಾ ಪಡೆ ಸಿಬ್ಬಂದಿ ಸಾವನ್ನಪ್ಪಿದ್ದರು.
1993ರಲ್ಲಿ ಲತೀಫ್ ಕಾಶ್ಮೀರ ಕಣಿವೆಯೊಳಗೆ ನುಸುಳಿದ್ದು, ಒಂದು ವರ್ಷದ ಬಳಿಕ ಬಂಧಿಸಲಾಗಿತ್ತು. ವರದಿಗಳ ಪ್ರಕಾರ ಅವರು 2010 ರವರೆಗೆ ಭಯೋತ್ಪಾದಕ ಸಂಘಟನೆ ಜೆಎಂ ಸಂಸ್ಥಾಪಕ ಮಸೂದ್ ಅಜರ್ ಜೊತೆ ಜಮ್ಮು ಜೈಲಿನಲ್ಲಿದ್ದರು.
ಬಿಡುಗಡೆಯಾದ ನಂತರ 2010ರಲ್ಲಿ ಪಾಕಿಸ್ತಾನಕ್ಕೆ ಗಡೀಪಾರು ಮಾಡಲಾಗಿತ್ತು.
ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಲತೀಫ್ ಬೇಕಾಗಿದ್ದ.
ನಿನ್ನೆ ನಡೆದ ಮತ್ತೊಂದು ಘಟನೆಯಲ್ಲಿ ಎಂಓಐಎಸ್ ಮತ್ತು ಐಎಸ್ಐ ನ ಡ್ಯುಯಲ್ ಏಜೆಂಟ್ ಮುಲ್ಲಾ ಬಹೌರ್ ಅಲಿಯಾಸ್ ಹಾರ್ಮುಜ್ದ್ ಅಲಿಯಾಸ್ ಮಹದ್ ಅಲಿಯಾಸ್ ಅಬ್ದುಲ್ ಲತೀಫ್ ಅವರನ್ನು ಆಕ್ರಮಿತ ಬಲೂಚಿಸ್ತಾನದ ಕೆಚ್ ಪ್ರದೇಶದಲ್ಲಿ ಅಪರಿಚಿತ ಬಂದೂಕುಧಾರಿಗಳಿಂದ ಗುಂಡಿಕ್ಕಿ ಕೊಂದಿದ್ದಾರೆ. ಇರಾನ್‌ನಿಂದ ಭಾರತೀಯ ಉದ್ಯಮಿ ಕುಲಭೂಷಣ್ ಜಾಧವ್ ಅವರನ್ನು ಅಪಹರಿಸಿ ಪಾಕಿಸ್ತಾನದ ಐಎಸ್‌ಐಗೆ ಹಸ್ತಾಂತರಿಸಿದ ಪ್ರಕರಣದಲ್ಲಿ ಭಾಗಿಯಾಗಿದ್ದ.