ಮೊಬೈಲ್ ನಲ್ಲಿ ವಿಚಿತ್ರ ಸದ್ದು ವಿಪತ್ತು ಮೆಸೇಜ್ ಗಳ ಹಿಂದಿನ ರಹಸ್ಯ | JANATA NEWS
ಬೆಂಗಳೂರು : ಭವಿಷ್ಯದಲ್ಲಿ ಸಂಭವಿಸಬಹುದಾದ ವಿಕೋಪಗಳ, ತುರ್ತು ಪರಿಸ್ಥಿತಿ ಕುರಿತು ದೇಶದ ನಾಗರಿಕರಿಗೆ ಮುನ್ಸೂಚನೆ/ಮಾಹಿತಿ ನೀಡುವ ನಿಟ್ಟಿನಲ್ಲಿ ಪ್ರತಿಯೊಬ್ಬರ ಮೊಬೈಲ್‍ಗೆ ಇದೀಗ ಎಚ್ಚರಿಕೆ ರೀತಿಯ ಬೀಪ್ ಶಬ್ಧದೊಂದಿಗೆ ಪರೀಕ್ಷಾರ್ಥ ಫ್ಲ್ಯಾಶ್ ಸಂದೇಶಗಳು ನಿನ್ನೆಯಿಂದ ಬರಲಾರಂಭಿಸಿದೆ.
ದೇಶದ ನಾಗರಿಕರನ್ನು ತಲುಪಲು ಕೇಂದ್ರ ಸರ್ಕಾರದ ಹೊಸ ಯೋಜನೆಯ ಭಾಗವಾಗಿ, ದೂರಸಂಪರ್ಕ ಇಲಾಖೆ (C-DOT) ಎಲ್ಲಾ ಸೆಲ್ ಫೋನ್ ಬಳಕೆದಾರರಿಗೆ ಸೆಲ್ ಪ್ರಸಾರದ ಮೂಲಕ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಹೊಸ ವ್ಯವಸ್ಥೆಯನ್ನು ಸಿದ್ಧಪಡಿಸುತ್ತಿದೆ. ಈ ವ್ಯವಸ್ಥೆಯ ಪರೀಕ್ಷೆ ನಡೆಸಲು ಕಳೆದೆರಡು ದಿನಗಳಿಂದ ಸಂದೇಶಗಳು ಬರಲಾರಂಭಿಸಿವೆ.
ಈ ವಿಶೇಷ ಸಂದೇಶದಲ್ಲಿ ಏನಿದೆ?
ಪ್ರಮುಖ ಸಲಹೆ: ಭಾರತ ಸರ್ಕಾರದ ದೂರಸಂಪರ್ಕ ಇಲಾಖೆ (DOT), ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಯೋಗದೊಂದಿಗೆ ಸೆಲ್ ಬ್ರಾಡ್‌ಕಾಸ್ಟಿಂಗ್ ಸಿಸ್ಟಮ್‌ಗಾಗಿ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸುತ್ತಿದೆ. ಧ್ವನಿ ಮತ್ತು ಕಂಪನಗಳೊಂದಿಗೆ ನಿಮ್ಮ ಮೊಬೈಲ್ ಸಾಧನದಲ್ಲಿ ನೀವು ಪರೀಕ್ಷಾ ಎಚ್ಚರಿಕೆಗಳನ್ನು ಸ್ವೀಕರಿಸಬಹುದು. ಈ ಎಚ್ಚರಿಕೆಗಳು ಯೋಜಿತ ಪರೀಕ್ಷಾ ಪ್ರಕ್ರಿಯೆಯ ಭಾಗವಾಗಿದೆ ಎಂದು ನಾವು ನಿಮಗೆ ಭರವಸೆ ನೀಡುತ್ತೇವೆ. ದಯವಿಟ್ಟು, ನಿಜವಾದ ತುರ್ತು ಪರಿಸ್ಥಿತಿಯನ್ನು ಸೂಚಿಸಬೇಡಿ ಮತ್ತು ನಿಮ್ಮ ಕೊನೆಯಲ್ಲಿ ಯಾವುದೇ ಕ್ರಮದ ಅಗತ್ಯವಿಲ್ಲ.