ನಾಟಿ ಔಷಧಿಗೆ 7 ವರ್ಷದ ಬಾಲಕ ಬಲಿ? | JANATA NEWS
ಚಿಕ್ಕಬಳ್ಳಾಪುರ : ನಾಟಿ ಔಷಧಿ ಸೇವಿಸಿ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರದ ನಲ್ಲಗುಟ್ಟಪಾಳ್ಯ ಗ್ರಾಮದಲ್ಲಿ ನಡೆದಿದೆ.
ಔಷಧ ಸೇವಿಸಿದ ಬಾಲಕನ ತಂದೆ ಹಾಗೂ ಸಹೋದರಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮೃತ ಬಾಲಕನನ್ನುಶಶಿಕಲಾ ಹಾಗೂ ಶ್ರೀನಿವಾಸ್ ದಂಪತಿಯ ಪುತ್ರ ವೇದೇಶ್ (7) ಎಂದು ಗುರುತಿಸಲಾಗಿದೆ. ಮಗನಿಗೆ ನಾಟಿ ಔಷಧಿ ಕುಡಿಸಿದ ಶ್ರೀನಿವಾಸ್ ತಾನೂ ಕೂಡ ಕುಡಿದು ಮತ್ತೋರ್ವ ಪುತ್ರಿ ವೈಶಾಲಿಗೂ ನೀಡಿದ್ದಾನೆ. ಪರಿಣಾಮ ಕೂಡಲೇ ಎಲ್ಲರೂ ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥರಾಗಿರುವ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ಬಾಲಕ ವೇದೇಶ್‍ಗೆ ದೇಹದ ಮೇಲೆ ಗುಳ್ಳೆಗಳಾಗಿದ್ದವು. ಇದಕ್ಕೆ ವ್ಯಕ್ತಿಯೊಬ್ಬ ಸಲಹೆ ನೀಡಿದ್ದು, ಭೋಯಿನಹಳ್ಳಿ ಗ್ರಾಮದ ಸತ್ಯನಾರಾಯಣ ಎಂಬವರ ಬಳಿ ಔಷಧಿ ಪಡೆದಿದ್ದರು ಎಂದು ಹೇಳಲಾಗಿದೆ.. ಔಷಧಿ ಕುಡಿದ 15 ನಿಮಿಷದಲ್ಲಿ ಬಾಲಕ ತೀವ್ರ ಅಸ್ವಸ್ಥನಾಗಿದ್ದಾನೆ ಎಂದು ಹೇಳಲಾಗಿದೆ. ಆಸ್ಪತ್ರೆಗೆ ಕರೆದೊಯ್ಯುವಾಗ ಬಾಲಕ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.