ಪಂಚರಾಜ್ಯ ಚುನಾವಣೆಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಕಲೆಕ್ಷನ್ ಸೆಂಟರ್... ಎಟಿಎಂ ಸರ್ಕಾರ | JANATA NEWS
ಬೆಂಗಳೂರು : ಪಂಚರಾಜ್ಯ ಚುನಾವಣೆಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಕಲೆಕ್ಷನ್ ಸೆಂಟರ್ ಓಪನ್ ಆಗಿದೆ!, ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ಡಾಕ್ಟರ್ ಸಿ ಎನ್ ಅಶ್ವಥ್ ನಾರಾಯಣ ಅವರು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಐಟಿ ದಾಳಿಯಿಂದಾಗಿ ಎಟಿಎಂ ಸರ್ಕಾರದ ಕಲೆಕ್ಷನ್ ಏಜೆಂಟ್‌ಗಳ ಚೈನ್ ಲಿಂಕ್ ಹೊರಬರುತ್ತಿದೆ. ಈ ಬಗ್ಗೆ ಸುದೀರ್ಘ ತನಿಖೆ ನಡೆದ ಬಳಿಕ ಕಾಂಗ್ರೆಸ್ ಕಲೆಕ್ಷನ್ ಸೆಂಟರ್‌ಗಳ ಸಂಪೂರ್ಣ ಮಾಹಿತಿ ಸಿಗಲಿದೆ, ಎಂದಿದ್ದಾರೆ ಮಾಜಿ ಡಿಸಿಎಂ.
ಬಿಜೆಪಿ ಸರ್ಕಾರದ ಮೇಲೆ ಸುಳ್ಳು 40% ಆರೋಪ ಮಾಡಿದವರ ಮನೆಯಲ್ಲಿ ₹40 ಕೋಟಿಗೂ ಅಧಿಕ ಅಕ್ರಮ ಹಣ ಸಿಕ್ಕಿದೆ! ಸ್ವಘೋಷಿತ ಭ್ರಷ್ಟಾಚಾರ ರಹಿತ ಸರಕಾರದ ಸದಸ್ಯೆಯ ಮನೆಯಲ್ಲಿ ಸರ್ಕಾರ ಬಂದು ನಾಲ್ಕೇ ತಿಂಗಳಲ್ಲಿ ₹42 ಕೋಟಿ ವಶವಾಗಿದೆ!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ತಮ್ಮ ಪಕ್ಷದ ಕಲೆಕ್ಷನ್ ಏಜೆಂಟ್‌ಗಳು ಸಂಗ್ರಹಿಸಿರುವ ಅಕ್ರಮ ಹಣದ ಹಿನ್ನೆಲೆ ಏನು?!
ಪಂಚರಾಜ್ಯ ಚುನಾವಣೆಗೆ ಕರ್ನಾಟಕವನ್ನು ATM ಮಾಡಿಕೊಂಡು ಎಲ್ಲೆಲ್ಲಿ ಕಲೆಕ್ಷನ್ ಸೆಂಟರ್‌ಗಳನ್ನು ತೆರೆದಿದ್ದೀರಿ?! ಎಂದು ಅಶ್ವಥ್ ನಾರಾಯಣ ಅವರು ಪ್ರಶ್ನಿಸಿದ್ದಾರೆ.
ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾದ ಸಂದರ್ಭದಲ್ಲಿ ಈ ವ್ಯಕ್ತಿ ಬಳಿ ಇಷ್ಟೊಂದು ಹಣ ಸಿಕ್ಕಿರುವುದು ಈ ಹಣ ಯಾವ ದಿಕ್ಕಿನಲ್ಲಿ ಹೋಗುತ್ತಿತ್ತು ಎಂಬುದು ಸ್ಪಷ್ಟವಾಗಿದೆ. ಪಂಚ ರಾಜ್ಯ ಚುನಾವಣೆಗೆ ಹೋಗುತ್ತಿತ್ತು ಎಂಬುದು ಪೇಟಿಎಂ ಸರ್ಕಾರ ಎಂಬುದು ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ
ಲೋಡ್ ಶೇಡಿಂಗ್ ಹಾಗೂ ಕತ್ತಲೆ ಭಾಗ್ಯ ಕುರಿತು ಮಾತನಾಡಿದ ಮಾಜಿ ಡಿಸಿಎಂ ಅವರು ಸರ್ಪ್ಲಸ್ ಅತಿ ಹೆಚ್ಚು ವಿದ್ಯುತ್ ಉತ್ಪಾದಿಸುತ್ತಿದ್ದ ರಾಜ್ಯ ಈ ದಿನ ಕಾಂಗ್ರೆಸ್ ಬರುತ್ತಿದ್ದಂತೆ 50 ಪರ್ಸೆಂಟ್ ನಷ್ಟು ಕಡಿಮೆ ವಿದ್ಯುತ್ ಉತ್ಪಾದಿಸುತ್ತಿದೆ. ಆದ್ದರಿಂದ ಕಾಂಗ್ರೆಸ್ ಬಂದರೆ ಬರ, ನೀರಿಲ್ಲ, ಕರೆಂಟ್ ಇಲ್ಲ, ಅಭಿವೃದ್ಧಿ ಇಲ್ಲ, ಕಾನೂನು ಸುವ್ಯವಸ್ಥೆ ಇಲ್ಲ, ಲೂಟಿ ಒಂತರ ಕಾಂಗ್ರೆಸ್ ಅಂದರೇನೇ ಈ ದೇಶಕ್ಕೆ ಶಾಪ ಎಂದು, ಅಶ್ವಥ್ ನಾlರಾಯಣ್ ಅವರು ಹೇಳಿದ್ದಾರೆ