ರಾಜ್ಯ ಸರ್ಕಾರದ ಕಮಿಷನ್ ದಂದೆ ಕಲಾವಿದರ ಗೌರವ ಧನಕ್ಕೂ ಕೈಚಾಚಿ ಬಿಟ್ಟಿದೆ - ಸಿಟಿ ರವಿ | JANATA NEWS

ಬೆಂಗಳೂರು : ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದ ಕಮಿಷನ್ ದಂದೆ ಕೇವಲ ಗುತ್ತಿಗೆದಾರರು ಅಥವಾ ಸರ್ಕಾರಿ ಯೋಜನೆಗೆ ಮಾತ್ರ ಸೀಮಿತವಾಗಿಲ್ಲ ಅದು ಕಲಾವಿದರ ಗೌರವ ಧನದ ವರೆಗೂ ಕೈಚಾಚಿ ಬಿಟ್ಟಿದೆ, ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಸಿಟಿ ರವಿ ಅವರು ಗಂಭೀರ ಆರೋಪ ಮಾಡಿದ್ದಾರೆ
ಬಿಜೆಪಿ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿದ ಅವರು ಕೆಪಿಸಿಸಿ ಅಂದರೆ ಕರ್ನಾಟಕ ಪ್ರದೇಶ ಕಮಿಷನ್ ಸೆಂಟರ್... ಆರಂಭದಲ್ಲಿ ಈ ಪರಿಸ್ಥಿತಿ ಇದೆ, ಇನ್ನೂ ಹೋಗ್ತಾ ಹೋಗ್ತಾ ಯಾವ ಮಟ್ಟ ತಲುಪುವುದು ಎಂದು ಊಹೆ ಮಾಡಿದರೆ ಭಯ ಆಗುತ್ತದೆ, ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ನಾಡ ಹಬ್ಬದ ರೀತಿಯಲ್ಲಿ ಈ ಸರ್ಕಾರದ ಹಗರಣಗಳು ಭ್ರಷ್ಟಾಚಾರದ ಅಸ್ತಿಪಂಜರಗಳು ನಿತ್ಯ ಹೊರ ಬರುತ್ತಿದೆ. ದಸರಾ ಉತ್ಸವದಲ್ಲಿ ಖ್ಯಾತ ಸರೋದ್ ವಾದಕ ಪದ್ಮಶ್ರೀ ಪುರಸ್ಕೃತ ಶ್ರೀ ರಾಜೀವ್ ತಾರಾನಾಥ್ ಅವರ ಕಾರ್ಯಕ್ರಮ ಆಯೋಜನೆಗೆ 5 ಲಕ್ಷ ಕಾರ್ಯಕ್ರಮ ಆಯೋಜನೆ ಹಣದಲ್ಲಿ 3 ಲಕ್ಷ ಲಂಚ ಎಂದರೆ ಕಮಿಷನ್ ಲೆಕ್ಕದಲ್ಲಿ ಹೇಳುವುದಾದರೆ ಅರುವತ್ತು ಪರ್ಸೆಂಟ್ ಎಂದು ಆಯಿತು. ಅಂತ ಒಬ್ಬ ಹಿರಿಯ ಸರಸ್ವತಿ ಪುತ್ರರ ಹತ್ತಿರ ಲಂಚ ಕೇಳುತ್ತಾರೆ ಎಂದಾದರೆ ಈ ಸರ್ಕಾರದಲ್ಲಿ ಭ್ರಷ್ಟಾಚಾರ ಎಷ್ಟರಮಟ್ಟಿಗೆ ಹೆಚ್ಚಾಗಿದೆ ಅಂದರೆ ಇವರು ಕಲಾವಿದರನ್ನು ಬಿಡುವುದಿಲ್ಲ ಇನ್ನು ಬೇರೆಯವರನ್ನು ಬಿಡುತ್ತಾರಾ? ಎಂದು ಮಾಜಿ ಸಚಿವ ಸಿಟಿ ರವಿ ಪ್ರಶ್ನಿಸಿದ್ದಾರೆ.