ವಿಧಾನಸೌಧದಲ್ಲಿ ಜೆಡಿಎಸ್ ಕೊಠಡಿ ವಾಪಾಸ್ ಪಡೆಯುವಂತೆ ದೂರು | JANATA NEWS
ಬೆಂಗಳೂರು : ವಿಧಾನಸೌಧ ಕಚೇರಿ ಹಿಂಪಡೆಯಲು ಸಿಎಸ್‌ಗೆ ಮನವಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಲಾಗಿದೆ.
ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಸಿ.ಎಂ. ಇಬ್ರಾಹಿಂ ಅವರನ್ನ ಕೆಳಗಿಳಿಸುತ್ತಿದ್ದಂತೆಯೇ ಜೆಡಿಎಸ್ ಮತ್ತೊಂದು ಶಾಕ್ ಎದುರಾಗಿದೆ. ಪ್ರೊ. ಸಿದ್ದರಾಜು ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುವ ಮೂಲಕ ದೂರು ನೀಡಿದ್ದು, ಪತ್ರದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಹೀನಾಯ ಸೋಲು ಕಂಡಿರುವ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಕಚೇರಿ ಪಡೆಯಲು ಅರ್ಹತೆ ಪಡೆದಿಲ್ಲ.
ಕೊಠಡಿ ನೀಡಿರುವುದರಿಂದ ಸರ್ಕಾರಕ್ಕೆ ಆರ್ಥಿಕ ಹೊರೆಯಾಗುತ್ತದೆ. ಆದ್ದರಿಂದ ವಿಧಾನಸೌಧದಲ್ಲಿರುವ ಕೊಠಡಿ ಸಂಖ್ಯೆ 140-141ನ್ನು ಜೆಡಿಎಸ್ ಶಾಸಕಾಂಗ ನಾಯಕನಿಗೆ ನೀಡಿರುವ ಕಚೇರಿಯನ್ನು ವಾಪಸ್ಸು ಪಡೆಯಬೇಕೆಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.