ಬಿಜೆಪಿ ಧ್ವಜಸ್ತಂಬ ತೆರವುಗೊಳಿಸಿದ ತಮಿಳುನಾಡು ಡಿಎಂಕೆ ಸರ್ಕಾರ : ಹಲವರಿಗೆ ಗಾಯ | JANATA NEWS
ಚೆನ್ನೈ : ತಮಿಳುನಾಡಿನಲ್ಲಿ ಬಿಜೆಪಿ ಧ್ವಜಸ್ತಂಭ ತೆರವು ಮಾಡಿದ ಡಿಎಂಕೆ ಸರ್ಕಾರದ ಕ್ರಮವನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಹಲವಾರು ಸ್ವಯಂಸೇವಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಅವರ ಅನುಪಸ್ಥಿತಿಯಲ್ಲಿ, ರಾಜ್ಯದಲ್ಲಿನ ಡಿಎಂಕೆ ಸರ್ಕಾರವು ಮಧ್ಯರಾತ್ರಿಯಲ್ಲಿ ಪೊಲೀಸ್ ಪಡೆಗಳನ್ನು ಮತ್ತು ಕ್ರೇನ್ ಅನ್ನು ಕಳುಹಿಸಿ ಅವರ ಮನೆಯ ಮುಂಭಾಗದಲ್ಲಿದ್ದ ಬಿಜೆಪಿ ಧ್ವಜಸ್ತಂಭವನ್ನು ತೆರವು ಗೊಳಿಸಿದೆ.
ಪೊಲೀಸರು ಸ್ವಯಂಸೇವಕರೊಂದಿಗೆ ಘರ್ಷಣೆ ನಡೆಸಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ಹಲವು ಸ್ವಯಂಸೇವಕರು ಮತ್ತು ಬಿಜೆಪಿ ಕಾರ್ಯಕರ್ತರು ಗಾಯಗೊಂಡಿದ್ದಾರೆ.
English summary : Tamil Nadu DMK Govt Removed BJP Flagpole: Many Injured