ಬೆಂಗಳೂರಿನಲ್ಲಿ ಹಾಡಹಗಲೇ ಕಾರಿನಲ್ಲಿದ್ದ 13 ಲಕ್ಷ ರೂ. ದೋಚಿದ ಕಳ್ಳರು | JANATA NEWS
ಬೆಂಗಳೂರು : ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬಿಎಂಡಬ್ಲ್ಯು ಕಾರಿನ ಗಾಜು ಒಡೆದು ಒಳ ನುಗ್ಗಿ 13 ಲಕ್ಷ ರೂಪಾಯಿ ಹಣವನ್ನು ತೆಗೆದುಕೊಂಡು ತನ್ನ ಸಹಚರರೊಂದಿಗೆ ಬೈಕ್‌ನಲ್ಲಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸರ್ಜಾಪುರದ ಸೋಂಪುರ ಸಬ್ ರಿಜಿಸ್ಟ್ರಾರ್ ಕಚೇರಿ ಬಳಿ ಈ ಘಟನೆ ನಡೆದಿದೆ ಎನ್ನಲಾಗಿದೆ. ವೀಡಿಯೊದಲ್ಲಿ, ಒಬ್ಬ ವ್ಯಕ್ತಿ ಮೋಟಾರುಬೈಕಿನಲ್ಲಿ ಕಾಯುತ್ತಿದ್ದಾನೆ, ಮತ್ತೊಬ್ಬ ಕಾರಿನ ಮುಂಭಾಗದ ಕಿಟಕಿಯನ್ನು ಒಡೆದು ಹಣವನ್ನು ತೆಗೆದುಕೊಂಡು ಬೈಕ್ ಹತ್ತುತ್ತಾನೆ. ಹಗಲು ಹೊತ್ತಿನಲ್ಲಿ ಈ ಘಟನೆ ನಡೆದಿದೆ.
ಆನೇಕಲ್ ನ ಕಸಬಾ ನಿವಾಸಿ ಮೋಹನ್ ಬಾಬು ಎಂಬುವರಿಗೆ ಸೇರಿದ್ದ ಐಷಾರಾಮಿ ಕಾರು ಇದಾಗಿದ್ದು, ಮುತಗಟ್ಟಿ ಗ್ರಾಮದಲ್ಲಿ ನಿವೇಶನ ನೋಂದಣಿ ಮಾಡಿಸಲು ಸ್ನೇಹಿತರೊಬ್ಬರ ಬಳಿ 5 ಲಕ್ಷ ಹಣ ಸೇರಿದಂತೆ ದುಡ್ಡನ್ನು ಕಾರಿನಲ್ಲಿ ಬ್ಯಾಗ್ ನಲ್ಲಿ ಇಟ್ಟಿದ್ದರು ಎನ್ನಲಾಗಿದೆ.
ಘಟನೆ ಕುರಿತು ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.