Wed,Sep18,2024
ಕನ್ನಡ / English

ಕನಕಪುರ ಬೆಂಗಳೂರಿಗೆ ಸೇರಿಸಿಕೊಂಡು ಆಸ್ತಿ ಭದ್ರ ಮಾಡಿಕೊಳ್ಳುವ ಏಕೈಕ ದುರುದ್ದೇಶ | JANATA NEWS

24 Oct 2023
1485

ಬೆಂಗಳೂರು : ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು ರಾಮನಗರ ಜಿಲ್ಲೆಯಿಂದ ಕನಕಪುರ ತಾಲೂಕನ್ನು ಬೇರ್ಪಡಿಸಿ ಬೆಂಗಳೂರಿಗೆ ಸೇರಿಸುವೆ ಎಂದು ನೀಡಿರುವ ಹೇಳಿಕೆ ಸರಿಯಲ್ಲ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.

ನಕಪುರ ಸುತ್ತಮುತ್ತ ಇರುವ ತಮ್ಮ ಆಸ್ತಿಗಳ ಮೌಲ್ಯವನ್ನು ಹೆಚ್ಚಿಸಿಕೊಂಡು ತಮ್ಮ ಖಜಾನೆ ವೃದ್ಧಿ ಮಾಡಿಕೊಳ್ಳುವ ಏಕೈಕ ದುರುದ್ದೇಶದಿಂದ ಅವರು ಕನಕಪುರ ಜನರ ನೆಪ ಹೇಳಿಕೊಂಡು ಈ ಹೊಸ ನಾಟಕ ಶುರು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಕನಕಪುರದವರು ರಾಮನಗರ ಜಿಲ್ಲೆಯವರಲ್ಲ, ಬೆಂಗಳೂರು ಜಿಲ್ಲೆಯವರು ಎಂಬುದನ್ನು ನೆನಪಿಟ್ಟುಕೊಳ್ಳಿ ಎನ್ನುವ ಅವರ ಮಾತು ರಾಮನಗರ ಜಿಲ್ಲೆಗೆ ಎಸಗುವ ಮಹಾದ್ರೋಹ. ಅಷ್ಟೇ ಅಲ್ಲ; ಕನಕಪುರ ಜನರಿಗೆ ಮಂಕುಬೂದಿ ಎರಚುವ ಹುನ್ನಾರ ಎಂದು ಅವರು ಟೀಕಿಸಿದ್ದಾರೆ.

ಕನಕಪುರದವರು ರಾಮನಗರ ಜಿಲ್ಲೆಯವರಲ್ಲ, ಬೆಂಗಳೂರು ಜಿಲ್ಲೆಯವರು ಎಂಬುದನ್ನು ನೆನಪಿಟ್ಟುಕೊಳ್ಳಿ ಎನ್ನುವ ಅವರ ಮಾತು ರಾಮನಗರ ಜಿಲ್ಲೆಗೆ ಎಸಗುವ ಮಹಾದ್ರೋಹ. ಅಷ್ಟೇ ಅಲ್ಲ; ಕನಕಪುರ ಜನರಿಗೆ ಮಂಕುಬೂದಿ ಎರಚುವ ಹುನ್ನಾರ. ನಿಮ್ಮ ಜೇಬಿಗೆ ನಾನು ನೇರವಾಗಿ ದುಡ್ಡು ಹಾಕಲು ಆಗುವುದಿಲ್ಲ, ಮನೆ ಕಟ್ಟಿಸಿಕೊಡಲು ಆಗುವುದಿಲ್ಲ ಎನ್ನುವ ಇವರು; ಇಷ್ಟು ದಿನ ಶಾಸಕರಾಗಿ, ಸಚಿವರಾಗಿ ಉಪ ಮುಖ್ಯಮಂತ್ರಿ ಆಗಿ ಮಾಡಿದ್ದೇನು? ತಮ್ಮ ಜೇಬು ತುಂಬಿಸಿಕೊಂಡಿದ್ದು, ತಮ್ಮ ಮನೆಯನ್ನು ಉದ್ಧಾರ ಮಾಡಿಕೊಂಡಿದ್ದಷ್ಟೇ. ಇಷ್ಟಕ್ಕೂ ಕನಕಪುರ ಸುತ್ತಮುತ್ತ ಯಾರ ಆಸ್ತಿಗಳಿವೆ? ಅದರಲ್ಲಿ ಬೇನಾಮಿಗಳು ಎಷ್ಟು? ಎಲ್ಲೆಲ್ಲಿ ಅಕ್ರಮವಾಗಿ ಬೇಲಿ ಹಾಕಲಾಗಿದೆ? ಅವೆಲ್ಲಾ ಅಕ್ರಮಗಳನ್ನು ಸಕ್ರಮ ಮಾಡಿಕೊಳ್ಳಲು ಬೆಂಗಳೂರು ಸೇರ್ಪಡೆಯ ನಾಟಕ! ಈಗಾಗಲೇ ಕನಕಪುರಕ್ಕೆ ಒಂದು ಮೆಡಿಕಲ್ ಕೊಟ್ಟಿದ್ದರೂ ರಾಮನಗರ ಮೆಡಿಕಲ್ ಕಾಲೇಜನ್ನು ಕದ್ದು ಒಯ್ಯವುದರ ಹಿಂದೆಯೂ ಇದೇ ದುಷ್ಟ ತಂತ್ರ ಅಡಗಿತ್ತು ಎಂದು ಜೆಡಿಎಸ್ ನಾಯಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನಕಪುರಕ್ಕೆ 52 ಕೀ.ಮೀ. ದೂರದಲ್ಲಿದೆ ಬೆಂಗಳೂರು. 25 ಕೀ.ಮೀ. ದೂರದಲ್ಲಿದೆ ರಾಮನಗರ. ಜನರಿಗೆ ಯಾವುದು ಅನುಕೂಲ? ದಿನ ಬೆಳಗಾದರೆ ಕನಕಪುರದವರು ಬೆಂಗಳೂರಿಗೆ ಅಲೆಯಬೇಕೆ? ಉಪ ಮುಖ್ಯಮಂತ್ರಿಗಳ ಒಳ ಉದ್ದೇಶದ ಬಗ್ಗೆ ಅನೇಕ ಅನುಮಾನಗಳು ಸಹಜವಾಗಿಯೇ ಮೂಡುತ್ತವೆ.

2006-2007ರಲ್ಲಿ ಕನಕಪುರ ಹೇಗಿತ್ತು? ಡಿಕೆಶಿ ಅವರು ನೆನಪು ಮಾಡಿಕೊಳ್ಳಬೇಕು. ಆಗಲೇ ಪಟ್ಟಣದ ಡಬಲ್ ರಸ್ತೆ ನಿರ್ಮಾಣ, ಕನಕಪುರ ಹೆಬ್ಬಾಗಿಲಿನಲ್ಲಿರುವ ಸೇತುವೆ ನಿರ್ಮಾಣಕ್ಕೆ ಯೋಜನೆ ಕೊಟ್ಟವನು ನಾನು. ಸಂಗಮದಲ್ಲಿ ಪ್ರವಾಹ ಬಂದಾಗಲೆಲ್ಲಾ ಅನೇಕರು ಹಗ್ಗ ಕಟ್ಟಿಕೊಂಡು ರಸ್ತೆ ದಾಟಲು ಹೋಗಿ ಸಾವನ್ನಪ್ಪುತ್ತಿದ್ದರು.

ಇದನ್ನು ತಪ್ಪಿಸಲು ಅಲ್ಲಿ ಸೇತುವೆ ನಿರ್ಮಿಸಿ ಮಹದೇಶ್ವರ ಬೆಟ್ಟಕ್ಕೆ ಸುಲಭ ಸಂಪರ್ಕ ಕಲ್ಪಿಸುವ ಯೋಜನೆಗೆ ಇದೇ ಡಿ.ಕೆ.ಶಿವಕುಮಾರ್ ಅವರು 2006ರಲ್ಲಿಯೇ ವಿರೋಧ ಮಾಡಿದ್ದರು. ಈಗ ಕನಕಪುರವನ್ನು ಬೆಂಗಳೂರು ಜಿಲ್ಲೆಗೆ ಸೇರಿಸುವ ಮಾತು. ನದಿಯಲ್ಲಿ ಜನರು ಕೊಚ್ಚಿಕೊಂಡು ಹೋಗಿ ಸತ್ತರೂ ಪರವಾಗಿಲ್ಲ. ಆದರೆ, ಇವರ ರಿಯಲ್ ಎಸ್ಟೇಟ್ ವ್ಯವಹಾರ ಪೊಗದಸ್ತಾಗಿ ಸಾಗಬೇಕು. ಸದ್ಯ ಬೆಂಗಳೂರಿನಿಂದ ಕನಕಪುರಕ್ಕೆ ಸುರಂಗ ಕೊರೆಸುವೆ ಎಂದು ಹೇಳಲಿಲ್ಲ. ಅದೇ ನಮ್ಮ ಪುಣ್ಯ ಎಂದು ಟೀಕಿಸಿದರು.

RELATED TOPICS:
English summary :Kanakapura is an opportunity to secure property by adding it to Bangalore

ನಾಗಮಂಗಲದಲ್ಲಿ ಆಡಳಿತ ಪಕ್ಷದ ಒತ್ತಡದಿಂದ ಪೊಲೀಸರು ಮೂಕ ಪ್ರೇಕ್ಷಕರಾಗಿ ಕೈಕಟ್ಟಿ ಕುಳಿತರು - ಬಿಜೆಪಿ
ನಾಗಮಂಗಲದಲ್ಲಿ ಆಡಳಿತ ಪಕ್ಷದ ಒತ್ತಡದಿಂದ ಪೊಲೀಸರು ಮೂಕ ಪ್ರೇಕ್ಷಕರಾಗಿ ಕೈಕಟ್ಟಿ ಕುಳಿತರು - ಬಿಜೆಪಿ
ನಮಗೆ ಕೇವಲ 20 ಅಧಿಕ ಸ್ಥಾನಗಳು ಬಂದರೆ ಬಿಜೆಪಿ ಯವರೆಲ್ಲ ಜೈಲು ಪಾಲಾಗುತ್ತಿದ್ದರು - ಕಾಂಗ್ರೆಸ್ ಮುಖ್ಯಸ್ಥ ಖರ್ಗೆ
ನಮಗೆ ಕೇವಲ 20 ಅಧಿಕ ಸ್ಥಾನಗಳು ಬಂದರೆ ಬಿಜೆಪಿ ಯವರೆಲ್ಲ ಜೈಲು ಪಾಲಾಗುತ್ತಿದ್ದರು - ಕಾಂಗ್ರೆಸ್ ಮುಖ್ಯಸ್ಥ ಖರ್ಗೆ
ಭಾರತ ವಿರೋಧಿ ಅಮೆರಿಕದ ಸಂಸದೆ ಇಲ್ಹಾನ್ ಒಮರ್ ಭೇಟಿಯಾದ ರಾಹುಲ್ ಗಾಂಧಿ : ಖಂಡನೆ ವ್ಯಕ್ತ ಪಡಿಸಿದ ಬಿಜೆಪಿ
ಭಾರತ ವಿರೋಧಿ ಅಮೆರಿಕದ ಸಂಸದೆ ಇಲ್ಹಾನ್ ಒಮರ್ ಭೇಟಿಯಾದ ರಾಹುಲ್ ಗಾಂಧಿ : ಖಂಡನೆ ವ್ಯಕ್ತ ಪಡಿಸಿದ ಬಿಜೆಪಿ
ರಾಹುಲ್ ಗಾಂಧಿ ಹೇಳಿಕೆಗಳು ಹಿಂದುಗಳ ವಿರೋಧಿ ಹಾಗೂ ಮುಸ್ಲಿಮ ತುಷ್ಟಿಕರಣದಿಂದ ಪ್ರೇರಿತ - ಹಿಂದೂ ಸಾಧು ಸಂತರಿಂದ ತೀವ್ರ ಖಂಡನೆ
ರಾಹುಲ್ ಗಾಂಧಿ ಹೇಳಿಕೆಗಳು ಹಿಂದುಗಳ ವಿರೋಧಿ ಹಾಗೂ ಮುಸ್ಲಿಮ ತುಷ್ಟಿಕರಣದಿಂದ ಪ್ರೇರಿತ - ಹಿಂದೂ ಸಾಧು ಸಂತರಿಂದ ತೀವ್ರ ಖಂಡನೆ
ದೆಹಲಿಯ ಹಿರಿಯ ಪರಿಸರ ಎಂಜಿನಿಯರ್ ವಶಕ್ಕೆ ಪಡೆದ ಸಿಬಿಐ : ಸುಮಾರು ರೂ.3 ಕೋಟಿ ಗೂ ಅಧಿಕ ನಗದು ವಶಕ್ಕೆ
ದೆಹಲಿಯ ಹಿರಿಯ ಪರಿಸರ ಎಂಜಿನಿಯರ್ ವಶಕ್ಕೆ ಪಡೆದ ಸಿಬಿಐ : ಸುಮಾರು ರೂ.3 ಕೋಟಿ ಗೂ ಅಧಿಕ ನಗದು ವಶಕ್ಕೆ
ಈ ಪ್ರವಾಸವು ವೈಯಕ್ತಿಕ : ರಾಹುಲ್ ಗಾಂಧಿ, ಸ್ಟಾಲಿನ್ ಬೆನ್ನಲ್ಲೇ ಅಮೆರಿಕ ಪ್ರವಾಸ ಕೈಗೊಂಡ ಡಿಕೆಶಿ ಸ್ಪಷ್ಟನೆ
ಈ ಪ್ರವಾಸವು ವೈಯಕ್ತಿಕ : ರಾಹುಲ್ ಗಾಂಧಿ, ಸ್ಟಾಲಿನ್ ಬೆನ್ನಲ್ಲೇ ಅಮೆರಿಕ ಪ್ರವಾಸ ಕೈಗೊಂಡ ಡಿಕೆಶಿ ಸ್ಪಷ್ಟನೆ
ತೆಲಂಗಾಣ ಬುಡಕಟ್ಟು ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಕೊಲೆಯತ್ನ : ಕೋಮುಗಲಭೆ ಪರಿಸ್ಥಿತಿ ಸೃಷ್ಟಿ
ತೆಲಂಗಾಣ ಬುಡಕಟ್ಟು ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಕೊಲೆಯತ್ನ : ಕೋಮುಗಲಭೆ ಪರಿಸ್ಥಿತಿ ಸೃಷ್ಟಿ
ಅರಬ್ಬಿ ಸಮುದ್ರದಲ್ಲಿ ತುರ್ತಾಗಿ ಇಳಿದ ಭಾರತೀಯ ಕೋಸ್ಟ್ ಗಾರ್ಡ್ ಪಡೆಯ ಹೆಲಿಕಾಪ್ಟರ್: 3 ಸಿಬ್ಬಂದಿಗಾಗಿ ಹುಡುಕಾಟ
ಅರಬ್ಬಿ ಸಮುದ್ರದಲ್ಲಿ ತುರ್ತಾಗಿ ಇಳಿದ ಭಾರತೀಯ ಕೋಸ್ಟ್ ಗಾರ್ಡ್ ಪಡೆಯ ಹೆಲಿಕಾಪ್ಟರ್: 3 ಸಿಬ್ಬಂದಿಗಾಗಿ ಹುಡುಕಾಟ
ಆಸ್ತಿ ಬಹಿರಂಗಪಡಿಸದ 2.44 ಲಕ್ಷ ರಾಜ್ಯ ಸರ್ಕಾರಿ ನೌಕರರ ಸಂಬಳ ತಡೆಹಿಡಿದ  ಸಿಎಂ ಯೋಗಿ ಸರ್ಕಾರ
ಆಸ್ತಿ ಬಹಿರಂಗಪಡಿಸದ 2.44 ಲಕ್ಷ ರಾಜ್ಯ ಸರ್ಕಾರಿ ನೌಕರರ ಸಂಬಳ ತಡೆಹಿಡಿದ ಸಿಎಂ ಯೋಗಿ ಸರ್ಕಾರ
ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಕುಸಿದು ಬಿದ್ದ ಘಟನೆಗೆ ಸಾರ್ವಜನಿಕ ಕ್ಷಮೆಯಾಚಿಸಿದ ಪ್ರಧಾನಿ ಮೋದಿ
ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಕುಸಿದು ಬಿದ್ದ ಘಟನೆಗೆ ಸಾರ್ವಜನಿಕ ಕ್ಷಮೆಯಾಚಿಸಿದ ಪ್ರಧಾನಿ ಮೋದಿ
ಯುದ್ಧ, ಉಗ್ರಗಾಮಿ ಮತ್ತು ನಕ್ಸಲಿಯರ ದಾಳಿಗಳಿಗಿಂತ ಹೆಚ್ಚು ರಸ್ತೆ ಅಪಘಾತದಲ್ಲಿ ಜೀವ ಬಲಿ - ಕೇಂದ್ರ ಹೆದ್ದಾರಿ ಸಚಿವ ಗಡ್ಕರಿ
ಯುದ್ಧ, ಉಗ್ರಗಾಮಿ ಮತ್ತು ನಕ್ಸಲಿಯರ ದಾಳಿಗಳಿಗಿಂತ ಹೆಚ್ಚು ರಸ್ತೆ ಅಪಘಾತದಲ್ಲಿ ಜೀವ ಬಲಿ - ಕೇಂದ್ರ ಹೆದ್ದಾರಿ ಸಚಿವ ಗಡ್ಕರಿ
ರಷ್ಯಾ-ಉಕ್ರೇನ್ ಸಂಘರ್ಷದ ದೃಷ್ಟಿಕೋನದ ಬಗ್ಗೆ ರಷ್ಯಾ ಅಧ್ಯಕ್ಷ ಪುಟಿನ್ ಅವರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ
ರಷ್ಯಾ-ಉಕ್ರೇನ್ ಸಂಘರ್ಷದ ದೃಷ್ಟಿಕೋನದ ಬಗ್ಗೆ ರಷ್ಯಾ ಅಧ್ಯಕ್ಷ ಪುಟಿನ್ ಅವರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ

ನ್ಯೂಸ್ MORE NEWS...