ಅತ್ತಿಗೆ-ಮೈದುನ ಅಕ್ರಮ ಸಂಬಂಧ, ಅಣ್ಣನನ್ನೇ ಕೊಂದು ಪರಾರಿಯಾದ ತಮ್ಮ? | JANATA NEWS
ದೊಡ್ಡಬಳ್ಳಾಪುರ : ಅತ್ತಿಗೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿ ಒಡಹುಟ್ಟಿದ ಅಣ್ಣನನ್ನೇ ಅಮಾನುಷವಾಗಿ ಕೊಲೆ ಮಾಡಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕು ದೊಡ್ಡಮಂಕಲಾಳದಲ್ಲಿ ನಡೆದಿದೆ.
ಗಂಗರಾಜು (35) ಕೊಲೆಯಾದ ದುರ್ದೈವಿ. ಗಂಗರಾಜು ಪತ್ನಿ ಭಾಗ್ಯಮ್ಮ ಜೊತೆ ಆತನ ತಮ್ಮ ರವಿ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ.
ಕಳೆದ ಎರಡು ವರ್ಷದಿಂದೆ ಮೈದನ ಜೊತೆ ಗಂಡ ಹಾಗೂ ಮನೆಯನ್ನ ಬಿಟ್ಟು ಹೋಗಿದ್ದಳು. ಗಂಗರಾಜು ಕೂಲಿ ಮಾಡಿ ವಾಸ ಮಾದುತಿದ್ದ, ಗಂಗರಾಜು ತನ್ನ ಮೂವರು ಮಕ್ಕಳನ್ನು ಅನಾಥಾಶ್ರಮಕ್ಕೆ ಸೇರಿಸಿದ್ದ.
ಕಳೆದ ಕೆಲ ದಿನಗಳಿಂದೆ ಪತ್ನಿ ಭಾಗ್ಯಮ್ಮ ಗಂಡ ಗಂಗರಾಜು ಮನೆಗೆ ವಾಪಸ್ ಬಂದಿದ್ದಾಳೆ. ವಾಪಸ್ ಬಂದಾಗ ಗಂಗರಾಜು ಪ್ರಶ್ನಿಸಿದ್ದಾನೆ. ಆಗ ಅಣ್ಣ ತಮ್ಮನ ನಡುವೆ ಮಾತಿನ ಚಕಮಕಿಯಾಗಿತ್ತು ಎನ್ನಲಾಗಿದೆ.
ಗಂಗರಾಜು ತಲೆ ಮೇಲೆ ಕಲ್ಲು ಎತ್ತಿ ಹಾಕಲಾಗಿದ್ದು, ಕೆಲಸಕ್ಕೆ ಹೋಗಿ ಗುಡಿಸಲಿಗೆ ವಾಪಸ್ ಆಗ್ತಿದ್ದ ತಾಯಿ ಜಯಮ್ಮ ಎಂದಿನಂತೆ ನೆನ್ನೆ ಸಂಜೆಯು ಮನೆಗೆ ಬಂದು ನೋಡಿದ್ದಾಳೆ. ಈ ವೇಳೆ ಮಗ ಮಲಗಿದ್ದಾನೆ ಅಂತ ಎಬ್ಬಿಸಲು ನೋಡಿದಾಗ ಕೊಲೆಯಾಗಿರುವ ವಿಚಾರ ಬೆಳಕಿಗೆ ಬಂದಿದ್ದು ಕೂಡಲೆ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾಳೆ.
ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿದ್ದಾರೆ.