ದೇಶದ ಜನತೆಗೆ ನವರಾತ್ರಿ ಮತ್ತು ವಿಜಯದಶಮಿಯ ಶುಭಾಶಯ ಕೋರಿದ ಪ್ರಧಾನಿ ಮೋದಿ | JANATA NEWS
ನವದೆಹಲಿ : ದೆಹಲಿಯ ದ್ವಾರಕಾದಲ್ಲಿರುವ ರಾಮ್ ಲೀಲಾ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದಸರಾ ಆಚರಣೆಯಲ್ಲಿ ಪಾಲ್ಗೊಂಡರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು ದೇಶದ ಜನತೆಗೆ ನವರಾತ್ರಿ ಮತ್ತು ವಿಜಯದಶಮಿಯ ಶುಭಾಶಯಗಳನ್ನು ತಿಳಿಸಿದರು ಮತ್ತು "ಎಲ್ಲಾ ದೇಶವಾಸಿಗಳಿಗೆ ನವರಾತ್ರಿ ಮತ್ತು ವಿಜಯದಶಮಿಯ ಶುಭಾಶಯಗಳನ್ನು ಕೋರುತ್ತೇನೆ. ಈ ಹಬ್ಬವು ಕೆಟ್ಟದ್ದರ ಮೇಲೆ ಒಳ್ಳೆಯದ ವಿಜಯವನ್ನು ಸಂಕೇತಿಸುತ್ತದೆ" ಎಂದು ಹೇಳಿದರು.
ಅವರು ದ್ವಾರಕಾ, ಸೆಕ್ಟರ್ 10 ರಲ್ಲಿ ಶ್ರೀ ರಾಮಲೀಲಾ ಸೊಸೈಟಿಯ 11 ನೇ ಮಹಾ ರಾಮಲೀಲಾ ಮುಖ್ಯ ಅತಿಥಿಯಾಗಿ ಮಾತನಾಡಿದರು.
"ದೀರ್ಘಕಾಲದ ಕಾಯುವಿಕೆಯ ನಂತರ ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿಯಲ್ಲಿ ಭಗವಾನ್ ರಾಮ ಮಂದಿರ ನಿರ್ಮಾಣವಾಗುತ್ತಿರುವುದನ್ನು ಇಂದು ನೋಡುವ ಭಾಗ್ಯ ನಮ್ಮದಾಗಿದೆ. ಇದು ನಮ್ಮ ತಾಳ್ಮೆಯ ವಿಜಯದ ಸಂಕೇತವಾಗಿದೆ" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ದಸರಾ ಸಂದರ್ಭದಲ್ಲಿ ಪ್ರಧಾನಿ ಮೋದಿಯವರ ಸಮ್ಮುಖದಲ್ಲಿ ರಾವಣ, ಮೇಘನಾದ ಮತ್ತು ಕುಂಭಕರನ ದೈತ್ಯ ಪ್ರತಿಮೆಗಳು ಜ್ವಲಂತಗೊಂಡವು.