ಅತಿಯಾದ ತುಷ್ಟೀಕರಣದ ರಾಜಕೀಯದಿಂದ ಕರ್ನಾಟಕದಲ್ಲಿ ಜಿಹಾದಿಗಳ ಸೊಕ್ಕು ಮಿತಿ ಮೀರಿದೆ - ಬಿಜೆಪಿ | JANATA NEWS
ಬೆಂಗಳೂರು : ರಾಜ್ಯದ ಕಾಂಗ್ರೆಸ್ ಸರ್ಕಾರದ ಅತಿಯಾದ ತುಷ್ಟೀಕರಣದ ರಾಜಕೀಯದಿಂದ ಕರ್ನಾಟಕದಲ್ಲಿ ಜಿಹಾದಿಗಳ ಸೊಕ್ಕು ಮಿತಿ ಮೀರಿದೆ ಎಂದು ವಿರೋಧ ಪಕ್ಷ ಬಿಜೆಪಿ ಆತಂಕ ವ್ಯಕ್ತಪಡಿಸಿದೆ ಈ ಕುರಿತು ಎಕ್ಸ್ ನಲ್ಲಿ ಸರಣಿ ಪೋಸ್ಟ್ ಹಾಕಿರುವ ಬಿಜೆಪಿ, "ಕಾಂಗ್ರೆಸ್ ಸರ್ಕಾರ ತನ್ನ ಓಲೈಕೆ ರಾಜಕೀಯಕ್ಕೋಸ್ಕರ, ಜಿಹಾದಿಗಳ ಸಮಾಜಘಾತುಕ ಕೃತ್ಯಗಳಿಗೆ ಕಡಿವಾಣ ಹಾಕದಿದ್ದಲ್ಲಿ, ಕರ್ನಾಟಕ ಮತ್ತೊಮ್ಮೆ ಪಿ.ಎಫ್.ಐ. ಪುಂಡರ ಭದ್ರಕೋಟೆ ಆಗುವುದು ಖಚಿತ-ನಿಶ್ಚಿತ-ಖಂಡಿತ!! ", ಎಂದು ಎಚ್ಚರಿಕೆ ನೀಡಿದೆ.
ಎಕ್ಸ್ ನಲ್ಲಿ ಹಾಕಿರುವ ಸರಣಿ ಪೋಸ್ಟ್ ಗಳಲ್ಲಿ , "ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿಯ ಬೀಡಾಗಿದ್ದ ಕರ್ನಾಟಕದಲ್ಲಿ ಅರಾಜಕತೆ, ಅಶಾಂತಿ ಹಾಗೂ ಭಯದ ವಾತಾವರಣವನ್ನು ನಿರ್ಮಿಸಿದ್ದು ಹಾಗೂ ರಾಜ್ಯದ ಕಾನೂನು-ಸುವ್ಯವಸ್ಥೆಯನ್ನು ಹಳ್ಳ ಹಿಡಿಸಿದ್ದೇ ಕಾಂಗ್ರೆಸ್ ಸರ್ಕಾರದ ಐದು ತಿಂಗಳ ಸಾಧನೆ!! "
"ಅಧಿಕಾರಕ್ಕೆ ಬಂದ ದಿನದಿಂದ ಹಿಡಿದು ಇಲ್ಲಿಯವರೆಗೂ ಜಿಹಾದಿಗಳನ್ನು ಓಲೈಸುವಲ್ಲಿ ಪೈಪೋಟಿಗೆ ಬಿದ್ದಿರುವ ಸಿಎಂ ಸಿದ್ದರಾಮಯ್ಯ ಅವರು ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರ ಅತಿಯಾದ ತುಷ್ಟೀಕರಣದ ರಾಜಕೀಯದಿಂದ ಕರ್ನಾಟಕದಲ್ಲಿ ಜಿಹಾದಿಗಳ ಸೊಕ್ಕು ಮಿತಿ ಮೀರಿದೆ."
"ತಾವೆಂತಹ ಸಮಾಜಘಾತುಕ ಕೃತ್ಯಗಳಲ್ಲಿ ಭಾಗಿಯಾದರೂ, ಗರಿಷ್ಟ ಮಟ್ಟದಲ್ಲಿ ಈ ದೇಶದ ಕಾನೂನನ್ನು ಉಲ್ಲಂಘಿಸಿದರೂ, ಕಾಂಗ್ರೆಸ್ ಪಕ್ಷ ಹಾಗೂ ಅದರ ಮುಖಂಡರು ತಮ್ಮ ಬೆನ್ನಿಗೆ ನಿಲ್ಲುತ್ತಾರೆ, ತಮಗೆ “ಅಮಾಯಕರು” ಎಂಬ ಪಟ್ಟ ಕಟ್ಟುತ್ತಾರೆ ಎಂಬುದು ಜಿಹಾದಿಗಳಿಗೆ ಚೆನ್ನಾಗಿ ತಿಳಿದಿದೆ. "
"ಹೀಗಾಗಿ ಕಾಂಗ್ರೆಸ್ ಸರ್ಕಾರದ ಐದು ತಿಂಗಳ ಆಡಳಿತದಲ್ಲಿ ರಾಜ್ಯದಲ್ಲಿ ಕೇವಲ ಅರಾಜಕತೆ, ಕೋಮುಗಲಭೆ, ಕೊಲೆ-ಸುಲಿಗೆ, ಅಶಾಂತಿಗಳದ್ದೇ ಸದ್ದು!! ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದೆ ಎಂಬ ಏಕೈಕ ಕಾರಣಕ್ಕೆ ಜಿಹಾದಿಗಳು ಪೊಲೀಸರ ಮೇಲೆ ಹಲ್ಲೆ ನಡೆಸುವಷ್ಟರ ಮಟ್ಟಿಗೆ ಪುಂಡಾಟ ಮೆರೆಯುತ್ತಿದ್ದಾರೆ. "
"ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಂತ್ರಿಸುತ್ತಿದ್ದ ಪೊಲೀಸ್ ಪೇದೆಯೊಬ್ಬರು, ಕೆಲವು ಜಿಹಾದಿ ಪುಂಡರು ನಿಯಮ ಉಲ್ಲಂಘಿಸಿದರು ಎಂಬ ಕಾರಣಕ್ಕೆ ಅವರ ಮೇಲೆ ಕ್ರಮ ಕೈಗೊಳ್ಳಲು ಮುಂದಾದರೆ, ಹಾಡುಹಗಲೇ ಸಮವಸ್ತ್ರ ಧರಿಸಿದ ಪೊಲೀಸ್ ಮೇಲೆ ಗುಂಪು ಹಲ್ಲೆ ನಡೆಸುವಷ್ಟರ ಮಟ್ಟಿಗೆ ಜಿಹಾದಿಗಳು ಸೊಕ್ಕಿದ್ದಾರೆ. ರಾಜ್ಯವನ್ನು ಜಿಹಾದಿಗಳ ತವರೂರನ್ನಾಗಿಸಿ, ಗೂಂಡಾ ರಾಜ್ಯವನ್ನಾಗಿ ಮಾಡುವುದೇ ಕಾಂಗ್ರೆಸ್‌ನ ಕರ್ನಾಟಕ ಮಾಡೆಲ್. "
"ಇನ್ನು ಕಾಂಗ್ರೆಸ್ ಒಂದು ಕಡು ಹಿಂದೂ ವಿರೋಧಿ ಪಕ್ಷ ಎಂಬ ಸತ್ಯ ಜಗತ್ತಿಗೆ ತಿಳಿದಿರುವಂತಹದ್ದು, ಈ ಸತ್ಯ ಅರಿತಿರುವ ಜಿಹಾದಿಗಳು ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದಲೂ ಸದಾ ಶಾಂತಿಪ್ರಿಯ ಹಿಂದೂಗಳನ್ನು ಕೆಣಕುತ್ತಿದ್ದಾರೆ. ಇದಕ್ಕೆ ಪ್ರಮುಖ ಸಾಕ್ಷಿ ಕೋಲಾರ ಮತ್ತು ಶಿವಮೊಗ್ಗದಲ್ಲಿ ಹಾಕಿದ್ದ ತಲ್ವಾರ್ ರೀತಿಯ ಕಮಾನುಗಳು!! ಹಿಂದೂಗಳನ್ನು ಪ್ರಚೋದಿಸುವ ರೀತಿ ಫ್ಲೆಕ್ಸ್ ಮತ್ತು ಬ್ಯಾನರ್‌ಗಳನ್ನು ಅಳವಡಿಸಿ, ಹಿಂದೂಗಳ ಮನೆಗೆ ಕಲ್ಲೆಸೆದರೂ, ಅವರನ್ನು ಬಂಧಿಸದೇ ಅವರಿಗೆ ಶ್ರೀರಕ್ಷೆಯಾಗಿ ನಿಂತಿರುವುದು ಕಾಂಗ್ರೆಸ್‌ನ ಸೋಗಲಾಡಿ ರಾಜಕೀಯಕ್ಕೆ ಸ್ಪಷ್ಟ ನಿದರ್ಶನ."
"ವಿಜಯಪುರದ ಆಲಮಟ್ಟಿಯಲ್ಲಿ ಹಿಂದೂಗಳು ದೇವಸ್ಥಾನದ ಪ್ರತಿಷ್ಠಾಪನೆಗೆಂದು ಶ್ರದ್ಧಾ-ಭಕ್ತಿಯಿಂದ ತಂದಿದ್ದ ದೇವರ ಮೂರ್ತಿಗಳನ್ನು ಜಿಹಾದಿಗಳು ಧ್ವಂಸಗೊಳಿಸಿ ಕ್ರೌರ್ಯ ಮೆರೆದಿದ್ದರು. ಇಂಡಿಯ ಹಿರೆಬೇವನೂರಿನಲ್ಲಿ ನವರಾತ್ರಿಗೆಂದು ಪ್ರತಿಷ್ಠಾಪಿಸಿದ್ದ ದೇವಿಯ ಮೂರ್ತಿಯನ್ನು ಅತ್ಯಂತ ಕೀಳಾಗಿ ವಿವಸ್ತ್ರಗೊಳಿಸಿದ್ದು ಸಹ ಜಿಹಾದಿಗಳೇ."
"ಕಲ್ಬುರ್ಗಿಯ ಚಿತ್ತಾಪುರದಲ್ಲಿ ವಿಶ್ವಗುರು ಬಸವೇಶ್ವರವರ ಭಾವಚಿತ್ರವನ್ನು ಅತ್ಯಂತ ಹೇಯವಾಗಿ ವಿರೂಪಗೊಳಿಸಿದ್ದು ಸಹ ಮತ್ತದೇ ಜಿಹಾದಿಗಳು. ಹಾನಗಲ್‌ನಲ್ಲಿ ಐತಿಹಾಸಿಕ ತಾರಕೇಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವಕ್ಕೆ ಅಡ್ಡಿಪಡಿಸಿದ್ದು ಸಹ ಇದೇ ಜಿಹಾದಿಗಳು. "
"ಜಿಹಾದಿಗಳು ಇಷ್ಟೆಲ್ಲಾ ಸಮಾಜಘಾತುಕ ಕೃತ್ಯ ನಡೆಸುತ್ತಿದ್ದರೂ, ಕಾಂಗ್ರೆಸ್ ಸರ್ಕಾರ ಮಾತ್ರ ಕುರುಡ-ಕಿವುಡ-ಮೂಗನಂತೆ ವರ್ತಿಸುತ್ತಿರುವುದನ್ನು ಗಮನಿಸಿದರೆ, ಕಾಂಗ್ರೆಸ್ ಸರ್ಕಾರವೇ ಜಿಹಾದಿಗಳ ಮಾಸ್ಟರ್ ಮೈಂಡ್ ಇರಬಹುದಾ ಅಥವಾ ಚುನಾವಣೆಯಲ್ಲಿ ತಮ್ಮ ಗೆಲುವಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದ್ದ ಪಿ.ಎಫ್.ಐ. ನ ಋಣವನ್ನು ತೀರಿಸುತ್ತಿದೆಯಾ ಎಂಬ ಅನುಮಾನ ಮೂಡುವುದಂತೂ ಸತ್ಯ!!"
"ಜಿಹಾದಿಗಳನ್ನು ಮಟ್ಟ ಹಾಕಬೇಕಿದ್ದ ಕಾಂಗ್ರೆಸ್ ಸರ್ಕಾರ ಅವರಿಗೆ ಬೆಂಬಲವಾಗಿ ನಿಂತಿರುವುದು ಅಕ್ಷಮ್ಯ ಅಪರಾಧ ಹಾಗೂ ಆರು ಕೋಟಿ ಕನ್ನಡಿಗರಿಗೆ ಮಾಡುತ್ತಿರುವ ಮಹಾದ್ರೋಹ. ಕಾಂಗ್ರೆಸ್ ಸರ್ಕಾರ ತನ್ನ ಓಲೈಕೆ ರಾಜಕೀಯಕ್ಕೋಸ್ಕರ, ಜಿಹಾದಿಗಳ ಸಮಾಜಘಾತುಕ ಕೃತ್ಯಗಳಿಗೆ ಕಡಿವಾಣ ಹಾಕದಿದ್ದಲ್ಲಿ, ಕರ್ನಾಟಕ ಮತ್ತೊಮ್ಮೆ ಪಿ.ಎಫ್.ಐ. ಪುಂಡರ ಭದ್ರಕೋಟೆ ಆಗುವುದು ಖಚಿತ-ನಿಶ್ಚಿತ-ಖಂಡಿತ!! ", ಎಂದು ಬಿಜೆಪಿ ಪೋಸ್ಟ್ ಮಾಡಿದೆ.