ಗಲಾಟೆ ವೇಳೆ ಸೀರೆ ಎಳೆದ ವ್ಯಕ್ತಿ, ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಮಹಿಳೆ | JANATA NEWS

ಯಾದಗಿರಿ : ಗಲಾಟೆ ವೇಳೆ ಮಹಿಳೆಯ ಸೀರೆ ಹಿಡಿದು ವ್ಯಕ್ತಿ ಎಳೆದಾಡಿದ ಆರೋಪ ಹಿನ್ನೆಲೆ ಮನನೊಂದು ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ ಗೆ ಶರಣಾಗಿದ್ದಾರೆ.
ಅಕ್ಟೋಬರ್.21ರಂದು ಮನೆ ಬಳಿ ನೀರು ಬಿಟ್ಟ ಕಾರಣಕ್ಕೆ ಅಕ್ಕ ಪಕ್ಕದ ಮನೆಯವರಿಗೆ ಜಗಳ ಉಂಟಾಗಿತ್ತು. ಈ ವೇಳೆಯಲ್ಲಿ ವಿಜಯಲಕ್ಷ್ಮೀ(40) ಎಂಬುವರ ಸೀರೆಯ ಸೆರಗನ್ನ ಎಳೆಯಲಾಗಿತ್ತು.
ಸೀರೆ ಸೆರಗು ಎಳೆದ್ರು ಅನ್ನೋ ಕಾರಣಕ್ಕೆ ಮನನೊಂದು ವಿಷ ಸೇವಿಸಿ ವಿಜಯಲಕ್ಷ್ಮೀ ಆತ್ಮಹತ್ಯೆಗೆ ಯತ್ನಿಸಿದ್ದಳು. ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಂತ ವಿಜಯಲಕ್ಷ್ಮೀ ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಳು.
ವಿಜಯಲಕ್ಷ್ಮಿ ಮೃತದೇಹವನ್ನು ಹಮಸಗಿ ಪೊಲೀಸ್ ಠಾಣೆಯ ಮುಂದೆ ಇಟ್ಟಂತ ಕುಟುಂಬಸ್ಥರು, ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ಮಾಡಿದರು. ಈ ಘಟನೆಗೆ ಕಾರಣರಾದಂತಹ ಇಂದ್ರಮ್ಮ, ಹನುಮಂತರಾಯ, ಪುಷ್ಪಾ, ಶಶಿಕಲಾ ಎಂಬುವರನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.