ಬೆಂಕಿ ಅವಘಡದಲ್ಲಿ 15ಕ್ಕೂ ಅಧಿಕ ಬಸ್ ಗಳಿಗೆ ಹಾನಿ | JANATA NEWS
ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಂಭವಿಸಿದ ಬೆಂಕಿ ಅವಘಡ ದಲ್ಲಿ ಸುಮಾರು 15ಕ್ಕೂ ಅಧಿಕ ಬಸ್ ಗಳಿಗೆ ಬೆಂಕಿ ತಗುಲಿ, ಲಕ್ಷಾಂತರ ಮೌಲ್ಯದ ಹಾನಿಯಾಗಿರುವ ಘಟನೆ ಇಂದು ಮುಂಜಾನೆ 11 ಗಂಟೆ ಸುಮಾರಿಗೆ ಸಂಭವಿಸಿದೆ.
ಖಾಸಗಿ ಬಸ್ ಗಳ ರಿಪೇರಿ ಮಾಡುವ ಗ್ಯಾರೇಜ್ ಸೇರಿದಂತೆ ಇತರೆ ಅನೇಕ ಶೆಡ್ ಗಳು ಬೆಂಕಿ ಕೆನ್ನಾಲಿಗೆ ತುತ್ತಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ರಿಪೇರಿ ಸಂದರ್ಭದಲ್ಲಿ ವೆಲ್ಡಿಂಗ್ ಮಾಡುವಾಗ ಕಿಡಿ ತಿಂದ ಬೆಂಕಿ ಅವಗಡ ಸಂಭವಿಸಿದೆ ಎನ್ನಲಾಗಿದೆ.
ಒಂದರ ಪಕ್ಕ ಇನ್ನೊಂದು ಎಂಬಂತೆ ಬಸ್ ಗಳನ್ನು ನಿಲ್ಲಿಸಿದ್ದರಿಂದ ಬೆಂಕಿ ಒಂದರಿಂದ ಚಾಚಿದೆ ಎನ್ನಲಾಗಿದೆ.
ಅಗ್ನಿಶಾಮಕ ದಳದವರ ನಿರಂತರ ಪ್ರಯತ್ನದಿಂದ ಬೆಂಕಿಯನ್ನು ಹತೋಟಿಗೆ ತರಲಾಗಿದೆ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
English summary :More than 15 buses were damaged in the fire incident