ಬೆಂಗಳೂರಿನಲ್ಲಿ ಸ್ಪಾಂಜ್ ಫ್ಯಾಕ್ಟರಿಗೆ ಬೆಂಕಿ | JANATA NEWS

ಬೆಂಗಳೂರು : ಬೆಂಗಳೂರಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಫ್ಯಾಕ್ಟರಿಯೊಂದರ ಕಾಂಪೌಂಡ್ನಲ್ಲಿದ್ದ ಸ್ಪಾಂಜ್ ತ್ಯಾಜ್ಯಕ್ಕೆ ಬೆಂಕಿ ಹೊತ್ತಿಕೊಂಡು ಉರಿದ ಘಟನೆ ಗಂಗಮ್ಮನ ಗುಡಿ ಬಳಿ ನಡೆದಿದೆ.
ಗಂಗಮ್ಮನಗುಡಿ ಬಳಿಯಿರುವ ಸ್ಪಾಂಜ್ ಫ್ಯಾಕ್ಟರಿಯೊಂದರ ಕಾಂಪೌಂಡ್‌ನಲ್ಲಿ ಸಂಗ್ರಹ ಮಾಡಲಾಗಿದ್ದ ತ್ಯಾಜ್ಯ ಸ್ಪಾಂಜ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಇದರಿಂದ ಬೆಂಕಿಯ ಕೆನ್ನಾಲಿಗೆ ದೊಡ್ಡ ಮೊಟ್ಟದಲ್ಲಿ ಆವರಿಸಿದ್ದು, ಸ್ಥಳೀಯವಾಗಿ ಸುಮಾರು 200 ಮೀಟರ್ ಆವರಣದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿದೆ.
ಬಿಸಿಲಿನ ಝಳದಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ದೌಡಾಯಿಸಿದ ಮೂರು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಅವಘಡದಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂಬುದು ತಿಳಿದು ಬಂದಿದೆ.