Sun,Jan25,2026
ಕನ್ನಡ / English

ಕರ್ನಾಟಕದ ಮೂವರು ನಾಯಕರಿಗೆ ನಾಳೆ ದೆಹಲಿಗೆ ಬರುವಂತೆ ಬಿಜೆಪಿ ಹೈಕಮಾಂಡ್ ಬುಲಾವ್ | JANATA NEWS

01 Nov 2023

ಬೆಂಗಳೂರು : ನಾಳೆ ದೆಹಲಿಗೆ ಬರುವಂತೆ ಮೂವರು ಬಿಜೆಪಿ ನಾಯಕರಿಗೆ ಹೈಕಮಾಂಡ್ ಬುಲಾವ್ ನೀಡಿದೆ.

ಮಾಜಿ ಸಚಿವ ಕೆಎಸ್ ಈಶ್ವರಪ್ಪ, ಎಂಎಲ್‌ಸಿ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸಂಸದ ಪಿಸಿ ಮೋಹನ್‌ಗೆ ಬಿಜೆಪಿ ಹೈಕಮಾಂಡ್‌ನಿಂದ ಬುಲಾವ್ ಬಂದಿದೆ. ಇದರಂತೆ ಈ ಮೂವರು ನಾಯಕರು ಗುರುವಾರವೇ ದೆಹಲಿಗೆ ತೆರಳಬೇಕಿದೆ ಎನ್ನಲಾಗಿದೆ.

ನಾಳೆ ದೆಹಲಿಗೆ ಬಂದು ಮಧ್ಯಾಹ್ನ 3.30ಕ್ಕೆ ತಮ್ಮನ್ನು ಕಾಣುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಸೂಚಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಮೂವರು ನಾಯಕರು ನಾಳೆ ದೆಹಲಿಗೆ ಬಿಜೆಪಿ ಹೈಕಮಾಂಡ್ ಭೇಟಿ ಮಾಡೋದಕ್ಕೆ ತೆರಳಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಕಳೆದ ವಾರ ಮಾಜಿ ಸಿಎಂ ಡಿವಿ ಸದಾನಂದ ಗೌಡರನ್ನು ದೆಹಲಿಗೆ ಕರೆಸಿಕೊಂಡಿದ್ದ ಬಿಜೆಪಿ ಹೈಕಮಾಂಡ್, ಕೊನೆಯ ಕ್ಷಣದಲ್ಲಿ ಭೇಟಿ ಮಾಡದೆ ವಾಪಸ್ ಕಳುಹಿಸಿತ್ತು.

ಈ ಮಧ್ಯೆ, ಹೈಕಮಾಂಡ್​​ನಿಂದ ಕರೆ ಬಂದಿರುವ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಕೆಎಸ್ ಈಶ್ವರಪ್ಪ, ನಾಳೆ ದೆಹಲಿಗೆ ಹೋಗುತ್ತಿದ್ದೇನೆ. ನನ್ನ ಜೊತೆಗೆ ಕೋಟ ಶ್ರೀನಿವಾಸ್ ಪೂಜಾರಿ ಮತ್ತು ಪಿ.ಸಿ. ಮೋಹನ್ ಅವರಿಗೂ ಬರಲು ಹೇಳಿದ್ದಾರೆ. ಯಾಕೆ ಕರೆದಿದ್ದಾರೆ ಗೊತ್ತಿಲ್ಲ. ಅಲ್ಲಿಗೆ ಹೋದ ಮೇಲೆ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.

ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕ ಆಯ್ಕೆ ಮಾಡದ ವಿಚಾರವಾಗಿ ಹೈಕಮಾಂಡ್​​ಗೆ ಸಲಹೆ ಕೊಡುವಷ್ಟು ನಾನು ದೊಡ್ಡವನಲ್ಲ. ಅಲ್ಲಿ ನಮಗಿಂತ ತಿಳಿದವರು, ಪಕ್ಷಕ್ಕಾಗಿ ದುಡಿದವರು ಇದ್ದಾರೆ. ಅವರು ತೀರ್ಮಾನ ಮಾಡುತ್ತಾರೆ. ಯಾಕೆ ತಡ ಮಾಡಿದ್ದಾರೆ ಎಂಬುದಕ್ಕೆ ಒಂದು ಕಾರಣ ಇರಬಹುದು. ಆ ಕಾರಣ ಏನು ಎಂದು ತಿಳಿಯುವ ಅಗತ್ಯ ನನಗಿಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ.

ಈಗ ಮೂವರು ಬಿಜೆಪಿ ನಾಯಕರನ್ನು ನಾಳೆ ದೆಹಲಿಗೆ ಬಂದು ತಮ್ಮನ್ನು ಭೇಟಿಯಾಗುವಂತೆ ಹೈಕಮಾಂಡ್ ಸೂಚಿಸಿರೋದು ತೀವ್ರ ಕುತೂಹಲ ಮೂಡಿಸಿದೆ.

RELATED TOPICS:
English summary :The BJP high command has asked the three Karnataka leaders to come to Delhi tomorrow

ಭಾರತದಲ್ಲಿ ಇಯು ಅಧ್ಯಕ್ಷರು : €200 ಬಿಲಿಯನ್‌ ದ್ವಿಪಕ್ಷೀಯ ವ್ಯಾಪಾರದ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಕ್ಷಣಗಣನೆ
ಭಾರತದಲ್ಲಿ ಇಯು ಅಧ್ಯಕ್ಷರು : €200 ಬಿಲಿಯನ್‌ ದ್ವಿಪಕ್ಷೀಯ ವ್ಯಾಪಾರದ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಕ್ಷಣಗಣನೆ
ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿರುವ ಉಗ್ರವಾದದ ಬಗ್ಗೆ ಶೇಖ್ ಹಸೀನಾ ಎಚ್ಚರಿಕೆ, ಯೂನಸ್ ಆಡಳಿತವನ್ನು ತೀವ್ರವಾಗಿ ಟೀಕಿಸಿದ ಹಸೀನಾ
ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿರುವ ಉಗ್ರವಾದದ ಬಗ್ಗೆ ಶೇಖ್ ಹಸೀನಾ ಎಚ್ಚರಿಕೆ, ಯೂನಸ್ ಆಡಳಿತವನ್ನು ತೀವ್ರವಾಗಿ ಟೀಕಿಸಿದ ಹಸೀನಾ
ರಷ್ಯಾದ ತೈಲ ಆಮದುಗಳನ್ನು ನಿರ್ವಹಿಸಲು ಸಣ್ಣ ವ್ಯಾಪಾರಿಗಳನ್ನು ಬಳಸುತ್ತಿರುವ ಭಾರತ
ರಷ್ಯಾದ ತೈಲ ಆಮದುಗಳನ್ನು ನಿರ್ವಹಿಸಲು ಸಣ್ಣ ವ್ಯಾಪಾರಿಗಳನ್ನು ಬಳಸುತ್ತಿರುವ ಭಾರತ
ಜಂಟಿ ಅಧಿವೇಶನದಿಂದ ಹೊರ ನಡೆದ ರಾಜ್ಯಪಾಲರು : ಸದನದಲ್ಲಿ ಕೋಲಾಹಲ ; ಬಿಕೆ ಹರಿಪ್ರಸಾದ ಅಮಾನತುಗೊಳಿಸಲು ಪ್ರತಿಪಕ್ಷಗಳ ಆಗ್ರಹ
ಜಂಟಿ ಅಧಿವೇಶನದಿಂದ ಹೊರ ನಡೆದ ರಾಜ್ಯಪಾಲರು : ಸದನದಲ್ಲಿ ಕೋಲಾಹಲ ; ಬಿಕೆ ಹರಿಪ್ರಸಾದ ಅಮಾನತುಗೊಳಿಸಲು ಪ್ರತಿಪಕ್ಷಗಳ ಆಗ್ರಹ
ವೆನೆಜುವೆಲಾದ ಮೇಲೆ ಅಮೆರಿಕ ದಾಳಿ ಬೆನ್ನಲ್ಲೇ, ವೆನೆಜುವೆಲಾದ ವಿರೋಧ ಪಕ್ಷದ ನಾಯಕಿಯಿಂದ ಟ್ರಂಪ್ ನೊಬೆಲ್ ಶಾಂತಿ ಪ್ರಶಸ್ತಿ ಹಸ್ತಾಂತರ
ವೆನೆಜುವೆಲಾದ ಮೇಲೆ ಅಮೆರಿಕ ದಾಳಿ ಬೆನ್ನಲ್ಲೇ, ವೆನೆಜುವೆಲಾದ ವಿರೋಧ ಪಕ್ಷದ ನಾಯಕಿಯಿಂದ ಟ್ರಂಪ್ ನೊಬೆಲ್ ಶಾಂತಿ ಪ್ರಶಸ್ತಿ ಹಸ್ತಾಂತರ
ಐ-ಪಿಎಸಿ ದಾಳಿ ಪ್ರಕರಣ: ಇಡಿ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್; ನೋಟಿಸ್ ಜಾರಿ, ಎಫ್‌ಐಆರ್‌ಗಳಿಗೆ ತಡೆ
ಐ-ಪಿಎಸಿ ದಾಳಿ ಪ್ರಕರಣ: ಇಡಿ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್; ನೋಟಿಸ್ ಜಾರಿ, ಎಫ್‌ಐಆರ್‌ಗಳಿಗೆ ತಡೆ
ಭಾರತ, ಯುರೋಪಿಯನ್ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಮಹೂರ್ತ ಫಿಕ್ಸ್
ಭಾರತ, ಯುರೋಪಿಯನ್ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಮಹೂರ್ತ ಫಿಕ್ಸ್
ಅಮೆರಿಕದ ಕಾರ್ಯತಂತ್ರದ ಬದಲಾವಣೆಯನ್ನು ಖಂಡಿಸಿದ ಮ್ಯಾಕ್ರನ್  : ಟ್ರಂಪ್ ಆಕ್ರಮಣಕಾರಿ ನಿಲುವಿಗೆ ನ್ಯಾಟೋ ನಾಯಕರ ಎಚ್ಚರಿಕೆಯ ಪ್ರತಿಕ್ರಿಯೆ
ಅಮೆರಿಕದ ಕಾರ್ಯತಂತ್ರದ ಬದಲಾವಣೆಯನ್ನು ಖಂಡಿಸಿದ ಮ್ಯಾಕ್ರನ್ : ಟ್ರಂಪ್ ಆಕ್ರಮಣಕಾರಿ ನಿಲುವಿಗೆ ನ್ಯಾಟೋ ನಾಯಕರ ಎಚ್ಚರಿಕೆಯ ಪ್ರತಿಕ್ರಿಯೆ
ಟಿಎಂಸಿ ಸಂಬಂಧಿತ  ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ ಮೇಲೆ ತನಿಖಾ ಸಂಸ್ಥೆಗಳ ದಾಳಿ : ಸ್ಥಳಕ್ಕೆ ಧಾವಿಸಿದ ಸಿಎಂ ಮಮತಾ ಬ್ಯಾನರ್ಜಿ
ಟಿಎಂಸಿ ಸಂಬಂಧಿತ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ ಮೇಲೆ ತನಿಖಾ ಸಂಸ್ಥೆಗಳ ದಾಳಿ : ಸ್ಥಳಕ್ಕೆ ಧಾವಿಸಿದ ಸಿಎಂ ಮಮತಾ ಬ್ಯಾನರ್ಜಿ
ಕಲ್ಯಾಣ ಕರ್ನಾಟಕದಲ್ಲಿ ಖರ್ಗೆ ಕುಟುಂಬದ ಅಭಿವೃದ್ಧಿ ದಾಖಲೆಯನ್ನು ಪ್ರಶ್ನಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ
ಕಲ್ಯಾಣ ಕರ್ನಾಟಕದಲ್ಲಿ ಖರ್ಗೆ ಕುಟುಂಬದ ಅಭಿವೃದ್ಧಿ ದಾಖಲೆಯನ್ನು ಪ್ರಶ್ನಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ
ತಮಿಳುನಾಡು ಡಿಎಂಕೆ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್‌ : ಭಕ್ತರಿಗೆ ದೀಪ ಬೆಳಗಿಸಲು ಅವಕಾಶ
ತಮಿಳುನಾಡು ಡಿಎಂಕೆ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್‌ : ಭಕ್ತರಿಗೆ ದೀಪ ಬೆಳಗಿಸಲು ಅವಕಾಶ
ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ನಿರಂತರ ಹತ್ಯೆ, 24 ಗಂಟೆಗಳಲ್ಲಿ ಎರಡನೇ ಇಂತಹ ಘಟನೆ; ವ್ಯಾಪಕ ಹಿಂಸಾಚಾರ ವರದಿ
ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ನಿರಂತರ ಹತ್ಯೆ, 24 ಗಂಟೆಗಳಲ್ಲಿ ಎರಡನೇ ಇಂತಹ ಘಟನೆ; ವ್ಯಾಪಕ ಹಿಂಸಾಚಾರ ವರದಿ

ನ್ಯೂಸ್ MORE NEWS...