ಹುಲಿ ಉಗರಿಗೆ ಹೆಚ್ಚು ಪ್ರಾಮುಖ್ಯತೆ ಕೊಟ್ಟು, ಜೀವಂತ ಚಿರತೆಯ ಸಾವಿಗೆ ಕಾರಣವಾದ ಅರಣ್ಯ ಇಲಾಖೆ | JANATA NEWS
ಬೆಂಗಳೂರು : ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸೆರೆಯಾದ ಚಿರತೆ ಗುಂಡಿಗೆ ಬಲಿಯಾಗಿದ್ದು ಸಾಕಷ್ಟು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಇತ್ತೀಚಿಗೆ ಹುಲಿ ಉಗುರು ಧರಿಸಿದ್ದವರ ವಿರುದ್ಧ ಸಾಕಷ್ಟು ಸಂಖ್ಯೆಯಲ್ಲಿ ಕಾರ್ಯಾಚರಣೆಗೆ ಮುಂದಾದ ಅರಣ್ಯ ಅಧಿಕಾರಿಗಳು ತಾವೇ ಸ್ವತಃ ವನ್ಯಜೀವಿ ಚಿರತೆಯನ್ನು ಜೀವಂತ ಸರಿ ಹಿಡಿಯಲು ಸಂಪೂರ್ಣ ವಿಫಲ ಪ್ರಯತ್ನ ಮಾಡಿ, ಕೊನೆಗೂ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ, ಎಂಬುದು ಬಹುದೊಡ್ಡ ವಿಪರ್ಯಾಸವಾಗಿದೆ.
ವೈಜ್ಞಾನಿಕವಾಗಿ ಭಾರತ ಚಂದ್ರನ ಅಂಗಳ ತಲುಪಿದ ಸಂದರ್ಭದಲ್ಲಿ ರಾಜ್ಯದ ಅರಣ್ಯ ಇಲಾಖೆಯಲ್ಲಿ ವನ್ಯಜೀವಿಗಳನ್ನು ಸೆರೆ ಹಿಡಿಯಲು ಸೂಕ್ತವಾದ ಸಲಕರಣೆ ಹಾಗೂ ವಿಧಾನ ಅನುಸರಿಸದೇ ಇರುವುದು ಅತ್ಯಂತ ಆಶ್ಚರ್ಯಕರ ಹಾಗೂ ನಾಚಿಕೆಯ ಸಂಗತಿಯಾಗಿದೆ.
ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಕೂಡ ಈ ಕುರಿತು ವಿಷಾದ ವ್ಯಕ್ತಪಡಿಸಿದ್ದು, "ದುರದೃಷ್ಟವಶಾತ್, ಅರಣ್ಯಾಧಿಕಾರಿಗಳು ಚಿರತೆಯನ್ನು ಹೊಡೆದು ಸಾಯಿಸಿದ ಇಡೀ ಬೆಂಗಳೂರಿನಲ್ಲಿ ಚಿರತೆ ಕಥೆ ನಮ್ಮ ಇಂದಿನ ನಮ್ಮ ನಗರಗಳ ವಾಸ್ತವದ ಸೂಚನೆಯಾಗಿದೆ - ಇಲ್ಲಿ ಮನುಷ್ಯ ಬುದ್ದಿಹೀನವಾಗಿ ಕಾಡು ಪ್ರದೇಶವನ್ನು ಅತಿಕ್ರಮಿಸುತ್ತಿದೆ."
"ನಮ್ಮ ನಗರಗಳು ನಮ್ಮ ಪರಿಸರ ಅಥವಾ ವನ್ಯಜೀವಿಗಳ ಬಗ್ಗೆ ಕಾಳಜಿಯಿಲ್ಲದೆ ಬೆಳೆಯುತ್ತಿವೆ. ನಾವು ಸರೋವರಗಳು, ಟ್ಯಾಂಕ್‌ಗಳು, ಕಾಡುಗಳು ಮತ್ತು ಸುಸ್ಥಿರ ಜೀವನಕ್ಕೆ ಅಗತ್ಯವಾದ ಎಲ್ಲವನ್ನೂ ಅತಿಕ್ರಮಿಸುತ್ತೇವೆ. ರಿಯಲ್ ಎಸ್ಟೇಟ್‌ಗಾಗಿ ನಮ್ಮ ಹಸಿವು ಅಂತಿಮವಾಗಿ ನಮ್ಮ ನಗರಗಳನ್ನು ಕೊಲ್ಲುತ್ತದೆ."
"ಸಮಾಜವಾಗಿ ಕೋರ್ಸ್ ತಿದ್ದುಪಡಿಯನ್ನು ಪ್ರತಿಬಿಂಬಿಸಲು ಮತ್ತು ಮಾಡಲು ಇದು ನಮಗೆ ಒಂದು ಕ್ಷಣವಾಗಿದೆ. ನಾವು ಮಾಡುತ್ತೇವೆ? ನಾವು ಆಗುವುದಿಲ್ಲವೇ? ಕಾಲವೇ ಉತ್ತರಿಸುತ್ತದೆ.", ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.