5 ವರ್ಷ ನಮ್ಮದೇ ಸರ್ಕಾರ...ನಾನೇ ಸಿಎಂ ...ನಾನೇ ಮುಂದುವರಿಯುತ್ತೇನೆ | JANATA NEWS
ಬೆಂಗಳೂರು : ಕರ್ನಾಟಕ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಹೇಳಿಕೆ ನೀಡಬಾರದು ಎಂಬಂತೆ ಖಡಕ್ ಸಂದೇಶವನ್ನು ಕಾಂಗ್ರೆಸ್ ಹೈಕಮಾಂಡ್ ರವಾನಿಸಿದೆ ಎನ್ನಲಾಗಿದ್ದು ಇದಾದ ಬಳಿಕವೂ ಈ ಈ ಕುರಿತು ರಾಜಕಾರಣದಲ್ಲಿ ಚರ್ಚೆ ಇನ್ನೂ ಹೆಚ್ಚಾದಂತೆ ಕಂಡುಬಂದಿದೆ.
ಇನ್ನು ಈ ಕುರಿತಾದ ಪ್ರಶ್ನೆ ಒಂದಕ್ಕೆ ಬಳ್ಳಾರಿಯಲ್ಲಿ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ...ಐದು ವರ್ಷ ನಮ್ಮದೇ ಸರ್ಕಾರ...ನಾನೇ ಸಿಎಂ ...ನಾನೇ ಮುಂದುವರಿಯುತ್ತೇನೆ.. ಎಂಬ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ.
ಇನ್ನೊಂದೆಡೆ ಹುಬ್ಬಳ್ಳಿ ಹುಬ್ಬಳ್ಳಿ ಪ್ರವಾಸದಲ್ಲಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು ಈ ಕುರಿತು ಏನು ಪ್ರತಿಕ್ರಿಯೆ ನೀಡದಿದ್ದರೂ ಅವರ ಬೆಂಬಲಿಗರು "ಮುಂದಿನ ಸಿಎಂ ಡಿಕೆ ಶಿವಕುಮಾರ್...", ಎಂದು ಘೋಷಣೆ ಕೂಗಿ ಅವರ ಮೇಲೆ ಪುಷ್ಪವೃಷ್ಟಿ ಮಾಡಿದ್ದಾರೆ.
ಈ ಗೊಂದಲಗಳ ನಡುವೆ ಸಚಿವ ಪ್ರಿಯಾಂಕ ಖರ್ಗೆ ಅವರು ಅಂತಿಮ ನಿರ್ಧಾರ ಹೈಕಮಾಂಡ್ ಮಾಡಲಿದೆ ಅಂದಿದ್ದಾರೆ. ಅಲ್ಲದೆ, ಹೈಕಮಾಂಡ್ ನಿರ್ಧರಿಸಿದರೆ ತಾವು ಸಹ ಸಿಎಂ ಆಗಬಹುದು ಎಂದು ಹೊಸ ಪ್ರಶ್ನೆ ಹುಟ್ಟು ಹಾಕಿದ್ದಾರೆ.