ಮಸೀದಿಯಲ್ಲಿ ಆಕ್ಷೇಪ ಇಲ್ಲದಿದ್ದರೆ ದೇವಸ್ಥಾನದಲ್ಲೂ ರಾಜಕೀಯ ಸಭೆ, ಘೋಷಣೆ ಮಾಡುತ್ತೇವೆ | JANATA NEWS
ಬೆಂಗಳೂರು : ಧಾರ್ಮಿಕ ಸ್ಥಳದಲ್ಲಿ ರಾಜಕೀಯ ಭಾಷಣ ಮಾಡುತ್ತಿರುವ ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರ್ಕಾರದ ಸಚಿವ ಜಮೀರ್ ಅಹ್ಮದ್ ಖಾನ್ ಅವರ ವೈರಲ್ ವಿಡಿಯೋ ಒಂದರ ಕುರಿತು ಸಾಕಷ್ಟು ಚರ್ಚೆ ನಡೆತ್ತಿರುವ ಬೆನ್ನಲ್ಲೇ ಬಿಜೆಪಿ ಶಾಸಕ ಹಾಗೂ ಮುಖಂಡ ಬಸವರಾಜ್ ಗೌಡ ಪಾಟೀಲ್ ಯತ್ನಾಳ್ ಅವರು, ಮಸದಿಯಲ್ಲಿ ಭಾಷಣಕ್ಕೆ ಆಕ್ಷೇಪ ಇಲ್ಲ ಎಂದಾದರೆ ...ಹಿಂದುಗಳು ಸಹ ಎಲ್ಲಾ ದೇವಸ್ಥಾನಗಳಲ್ಲಿ ನಮ್ಮ ರಾಜಕೀಯ ಅಜೆಂಡ ವಿಸ್ತರಿಸುತ್ತೇವೆ ಎಂದು ಘೋಷಣೆ ಮಾಡಿದ್ದಾರೆ
ಅನೇಕ ದಿನಗಳಷ್ಟು ಹಳೆಯದು ಎಂದು ಹೇಳಲಾದ ಈ ವೈರಲ್ ವಿಡಿಯೋದಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಸಚಿವರೊಬ್ಬರಿಂದ ಈ ರೀತಿ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ಸಚಿವ ಜಮೀರ್ ಖಾನ್ ಅವರು ರಾಜಕೀಯಕ್ಕಾಗಿ ಧಾರ್ಮಿಕ ಸ್ಥಳವನ್ನು ಆಯ್ಕೆ ಮಾಡಿದ್ದ ಕುರಿತು ಆಕ್ಷೇಪ ಪಡಿಸಿರುವ ಶಾಸಕ ಯತ್ನಾಳ ಅವರು, ತಮ್ಮ ರಾಜಕೀಯ ಅಜೆಂಡಾ ವನ್ನು ವಿಸ್ತರಿಸಲು ಧಾರ್ಮಿಕ ಸ್ಥಳಗಳನ್ನು ಆಯ್ದುಕೊಂಡು, ಅಲ್ಲಿ ಭಾವನಾತ್ಮಕ ಭಾಷಣೆಗಳನ್ನು ಮಾಡುವುದು ತಪ್ಪು ಅಲ್ಲವೇ ? ಅದರಲ್ಲೂ ರಾಜ್ಯ ಸರ್ಕಾರದ ಕ್ಯಾಬಿನೆಟ್ ಸಚಿವರೊಬ್ಬರು ಈ ರೀತಿ ದುರುಪಯೋಗ ಮಾಡಿಕೊಳ್ಳುವುದು ನಿಯಮಾವಳಿಗಳನ್ನು ಗಾಳಿಗೆ ತೂರಿದಂತೆ.... ಈ ನಡವಳಿಕೆ, ಆಯ್ದುಕೊಂಡ ಸ್ಥಳ, ಮಸೀದಿಯಲ್ಲಿ ಭಾಷಣದ ಬಗ್ಗೆ ಆಕ್ಷೇಪ ಏನೂ ಇಲ್ಲದಿದ್ದರೆ ಹಿಂದೂಗಳು ಸಹ ಎಲ್ಲ ದೇವಸ್ಥಾನಗಳಲ್ಲಿ ನಮ್ಮ ರಾಜಕೀಯ ಅಜೆಂಡಾ ವನ್ನು ವಿಸ್ತರಿಸುತ್ತೇವೆ ಹಾಗೂ ಬೃಹತ್ ಸಭೆ, ಘೋಷಣೆಗಳನ್ನೂ ಮಾಡುತ್ತೇವೆ., ಎಂದು ಎಕ್ಸ್ ನ ಪೋಸ್ಟ್ ಒಂದರಲ್ಲಿ ಹೇಳಿದ್ದಾರೆ.
ರಾಜಸ್ಥಾನದಲ್ಲಿ ಮಾತನಾಡಿದ ಸಚಿವ ಖಾನ್ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಮುಸ್ಲಿಮರೇ ಕಾರಣ. ಮುಸ್ಲಿಂ ಮತಗಳಿಂದಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಕರ್ನಾಟಕದ ಮಸೀದಿಗಳಲ್ಲಿ ನಾವು ಸಭೆ ಮಾಡಿ, ಒಗ್ಗಟ್ಟು ಪ್ರದರ್ಶನಕ್ಕೆ ಮನವಿ ಮಾಡಿದ್ದೆವು. ಎಲ್ಲಾ ಹಂತ ರೀಚ್ ಮಾಡಿ ವಿಶ್ವಾಸ ಗಳಿಸಿದೆವು. ಹೀಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು, ರಾಜಸ್ಥಾನದಲ್ಲೂ ಇದೇ ಸೂತ್ರ ಅನುಸರಿಸಿ, ಎಂದು ಕರೆ ನೀಡಿದ್ದರು.