ಕಾಂತರಾಜ್ ವರದಿಯೇ ನನ್ನ ಕೈಸೇರಿಲ್ಲ, ಆಗಲೇ ವಿರೋಧ ಅಂದ್ರೆ? | JANATA NEWS

ಮೈಸೂರು : ಕಾಂತರಾಜ್ ವರದಿಯೇ ನನ್ನ ಕೈಸೇರಿಲ್ಲ. ಆಗಲೇ ವರದಿಗೆ ವಿರೋಧ ಎಂದರೆ ನಾನು ಏನು ಮಾಡಲಿ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ವರದಿಯೇ ನನ್ನ ಕೈ ಸೇರಿಲ್ಲ. ಆಗಲೇ ಅದಕ್ಕೆ ವಿರೋಧ ಎಂದರೆ ನಾನೇನು ಮಾಡಲಿ? ವರದಿಯಲ್ಲಿ ಏನಿದೆ ಏಂಬುದೇ ಗೊತ್ತಿಲ್ಲ. ಅಂಕಿ ಅಂಶವೇ ತಿಳಿಯದೆ, ಅದರ ಬಗ್ಗೆ ಮಾತನಾಡುವುದು ಹೇಗೆ? ನವೆಂಬರ್ ಒಳಗೆ ವರದಿ ಕೊಡಬಹುದೆನೋ, ಕೊಡಲಿ ತದನಂತರ ನೋಡೋಣ' ಎಂದು ಸಿಎಂ ಹೇಳಿದರು.
'ಈಶ್ವರಪ್ಪ ಒಂದು ಸವಕಲು ನಾಣ್ಯ. ಅವರಿಗೆ ಸವಕಲು ಆಗಿರುವ ಕಾರಣಕ್ಕೆ ಅವರಿಗೆ ಟಿಕೆಟ್ ಕೊಟ್ಟಿಲ್ಲ. ಈಶ್ವರಪ್ಪ ಮಾತುಗಳಿಗೆ ಬೆಲೆಯೇ ಇಲ್ಲ. ಕಾಂತರಾಜು ವರದಿ ಪರ ವಿಧಾನಸಭೆಯಲ್ಲಿ ಅವರು ಮಾತನಾಡಿಲ್ವಾ? ಈಗ ಅದನ್ನು ಸುಟ್ಟು ಹಾಕುತ್ತೇವೆ ಎಂದರೆ ಅದರ ಅರ್ಥವೇನು. ಈಶ್ವರಪ್ಪ ಮಾತುಗಳಿಗೆ ಹೆಚ್ಚು ಬೆಲೆ ಕೊಡಬೇಡಿ' ಎಂದರು.
ಕಾಂತರಾಜು ವರದಿ ಪರ ವಿಧಾನಸಭೆಯಲ್ಲಿ ಈಶ್ವರಪ್ಪ ಮಾತಾಡಿಲ್ವಾ? ಈಗ ವರದಿಯನ್ನು ಸುಟ್ಟು ಹಾಕುತ್ತೇವೆ ಎಂದರೆ ಏನು ಅರ್ಥ ಎಂದು ಪ್ರಶ್ನಿಸಿದ್ದಾರೆ. ಕೆ.ಎಸ್.ಈಶ್ವರಪ್ಪ ಮಾತಿಗೆ ಜಾಸ್ತಿ ಬೆಲೆ ಕೊಡಬೇಡಿ ಎಂದಿದ್ದಾರೆ.