ಕಮಿಷನ್ ಆರೋಪ : ಕಿಯೋನಿಕ್ಸ್ ಎಂಡಿ ರಜೆ ಮೇಲೆ ಕಳುಹಿಸಿ ರಾಜ್ಯ ಸರ್ಕಾರ ಆದೇಶ | JANATA NEWS
ಬೆಂಗಳೂರು : ಕಿಯೋನಿಕ್ಸ್ ವ್ಯವಸ್ಥಾಪಕ ನಿರ್ದೇಶಕ ಸಂಗಪ್ಪ ವಿರುದ್ಧ ಕಮಿಷನ್ ಆರೋಪ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ರಾಜ್ಯ ಸರ್ಕಾರ ಸಂಗಪ್ಪ ಅವರನ್ನು ಡಿಸೆಂಬರ್ ಐದನೇ ತಾರೀಖಿನವರೆಗೂ ರಜೆ ಮೇಲೆ ಕಳುಹಿಸಿದೆ ಎನ್ನಲಾಗಿದೆ.
ಕಿಯೋನಿಕ್ಸ್ ಗುತ್ತಿಗೆದಾರರ ಅಧ್ಯಕ್ಷರು ಎಂ ಡಿ ಸಂಗಪ್ಪ ವಿರುದ್ಧ ಕಮಿಷನ್ ಡಿಮಾಂಡ್ ಮಾಡಿರುವ ಕುರಿತು ಆರೋಪವನ್ನು ಎಣ್ಣೆಯಿಂದ ಮಾಧ್ಯಮಗಳು ಪ್ರಸಾರ ಮಾಡುತ್ತಿರುವ ಬೆನ್ನಲ್ಲೇ ಎಚ್ಚೆತ್ತಿರುವ ರಾಜ್ಯ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.
ಸರ್ಕಾರದ ಈ ಕ್ರಮದ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಕಿಯೋನಿಕ್ಸ್ ಗುತ್ತಿಗೆದಾರರು ಅಮಾನತು ಮಾಡಬೇಕು ಎಂದು ಒತ್ತಾಯಿಸಿದೆ ಹಾಗೂ ವಿರೋಧ ಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಸಚಿವ ಪ್ರಿಯಾಂಕ ಖರ್ಗೆ ಅವರ ರಾಜೀನಾಮೆಗೆ ಒತ್ತಾಯಿಸಿದೆ